ಕರದೊಳಗೆ ಮೆಹಂದಿ ಕಲೆಯರಳಿಸುವ ಪಝಿಲತ್ ಶೇಖ್

ಮೆಹಂದಿ ಕಲಾವಿದೆ ಫಝಿಲತ್‌ ಶೇಖ

ಮೆಹಂದಿಯ ಮೋಹ ಯಾವ ಹೆಣ್ಣಿಗಿಲ್ಲ ಹೇಳಿ. ಮದುವೆ ಸೇರಿದಂತೆ ಇಂದಿನ ಭಾಗಶಹ ಕಾರ್ಯಕ್ರಮಗಳಲ್ಲಿ ಈ ಮದರಂಗಿ ಕೂಡಾ ಒಂದು ಭಾಗವಾಗಿ ಬಿಟ್ಟಿದೆ. ಈಗೀಗ ಮೆಹಂದಿ ಹಚ್ಚುವ ಕಾರ್ಯಕ್ರಮವೇ ಕೆಲ ಮದುವೆ ಮನೆಗಳ ಒಂದು ದಿನದ ಸಂಭ್ರಮದ ಕಾರ್ಯಕ್ರಮವಾಗಿ ಬಿಡುತ್ತಿದೆ. ತಮ್ಮ ಕೈಗಳ ಮೇಲೆ ಮದರಂಗಿಯ ಅಂದ ನೋಡಿಕೊಳ್ಳುವುದು ಜೊತೆಗೆ ಹೊರಗೆ ಅದರ ಅಂದ ಪ್ರದರ್ಶಿಸುವುದೇ ಹೆಣ್ಣಿಗೆ ಒಂಥರಾ ಶೋಖಿ ಕೂಡಾ. ಗೊರಂಟೆ ಗಿಡದ ಎಲೆಯಿಂದ ತಯಾರಿಸಲ್ಪಡುವ ಸಾಂಪ್ರದಾಯಿಕ ಮದರಂಗಿ ಆರೋಗ್ಯದಾಯಕ ಕೂಡಾ.

ಕೈಗಳ ಮೇಲೆ ನವಿವಾರದ ಮದರಂಗಿ (ಮೆಹಂದಿ) ಚಿತ್ತಾರ ಬಿಡಿಸುವುದೂ ಕೂಡಾ ಒಂದು ಕೌಶಲ್ಯದ ಕಲೆಯೇ ಆಗಿದೆ. ಈಗೀಗಂತೂ ಈಮೆಹಂದಿ ಚಿತ್ತಾರಗಳ ಪಠಗಳೇ ಸಿಗುತ್ತವೆ. ಯುಟ್ಯೂಬ್‌ಗಳಲ್ಲಿ ಇದರ ಸಮಗ್ರ ಮಾಹಿತಿಯಿಯೇ ಇರುತ್ತದೆ. ಹಾಗೆಂದು ಇನ್ನೊಬ್ಬರ ಕೈಗಳಿಗೆ ಜನಾಕರ್ಷಿಸುವಂತೆತೆ ಮೆಹಂದಿ ಹಚ್ಚುವುದೇನೂ ಸುಲಭದ ಕೆಲಸವಲ್ಲ. ಇಂತಹ ಕೈಚಳಕದ ಸೂಕ್ಷ್ಮ ಕಲೆಯನ್ನು ತನ್ನ ವಿದ್ಯರ್ಥಿ ಜೀವನದ ಜೊತೆ ಜೊತೆಗೇ ಹವ್ಯಾಸವನ್ನಾಗಿ ಬೆಳೆಸಿಕೊಂಡು ಬೆಳೆದು ನಿಂತ ಪ್ರತಿಭೆಯೇ ದಾಂಡೇಲಿಯೇ ಫಝಿಲತ್ ಎಮ್. ಶೇಖ್.

ಈಕೆಗೆ ಇದೇ ಪ್ರಮಖ ಕೆಲಸವೇನೂ ಅಲ್ಲ. ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಈಕೆ ಆಳ್ವಾಸ ಕಾಲೇಜಿನಲ್ಲಿ ಪ್ರವಢ ಶಿಕ್ಷಣ ಮುಗಿಸಿ ಈಗ, ದಾಂಡೇಲಿಯ ಬಂಗೂರನಗರ ಪದವಿ ಕಾಲೇಜಿನ ಬಿಕಾಂ. ಅಂತಿಮ ವರ್ಷದ ವಿದ್ಯಾರ್ಥಿನಿ. ತನ್ನ ಬಿಡುವಿನ ಅವಧಿಯಲ್ಲಿ ಯಾವ ಗುರುವಿನಾಶ್ರಯವಿಲ್ಲದೇ ಮೆಹೆಂದಿ ಹಚ್ಚುವುದನ್ನು ಕಲಿತಿರುವ ಈಕೆ ಇದೀಗ ಈ ಕೆಲಸದಲ್ಲಿ ಸಾಕಷ್ಟು ಪ್ರಾವೀವೂಣ್ಯತೆ ಪಡೆದಿದ್ದಾಳೆ.

ಜಾತಿ, ಧರ್ಮಗಳೆನ್ನದೇ ಎಲ್ಲೆಂದರಲ್ಲಿ, ಯಾರೇ ಪ್ರೀತಿಯಿಂದ ಕರೆದರೂ ಅವರ ಮನೆಗೇ ಹೋಗಿ ಮೆಹಂದಿ ಹಚ್ಚಿ ಬರುತ್ತಾಳೆ. ಕೊರೊನಾ ಲಾಕ್‌ಡೌ ಕಾರಣಕ್ಕೆ ಮದುವೆ ಹಾಗೂ ಇತರೆ ಕಾರ್ಯಕ್ರಮಗಳಾಗದ ಕಾರಣ ಈವರ್ಷ ಈಕೆಗೆ ಬಿಡುವಾಗಿದೆ. ಇದರ ಜೊತೆ ಜೊತೆಗೆ ತನ್ನ ಶಿಕ್ಷಣವನ್ನೂ ಮುಂದುವರೆಸಿದ್ದಳೆ. ಜೊತೆಗೆ ಮೆಹೆಂದಿ ಕಲಿಯಲು ಬಯಸುವ ಹಲವರಿಗೆ ತರಬೇತಿಯನ್ನೂ ನೀಡುತ್ತಿದ್ದಾಳೆ. ಇನ್‌ಸ್ಟಾçಗ್ರಾಂ ನಲ್ಲಿಯೂ ಈಕೆಯ@mahendibyfazi   ಎಂಬ ಪೇಜ್ ಕೂಡಾ ನೋಡಬಹುದಾಗಿದೆ. ಫಝಿಲತಳ ಈ ಮೆಹಂದಿ ಕಲೆ ಇನ್ನೂ ಹೆಚ್ಚೆಚ್ಚು ಜನರನ್ನು ಆಕರ್ಷಿಸುವಂತಾಗಲಿ ಎಂಬುದೇ ನಮ್ಮ ಆಶಯ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*