ನಿವೃತ್ತ ACF ಮುನವಳ್ಳಿ ಇನ್ನಿಲ್ಲ… ದಾಂಡೇಲಿಯಲ್ಲಿ ಕೊರೊನಾಕ್ಕೆ ಮತ್ತೊಂದು ಬಲಿ…!

ದಾಂಡೇಲಿಯ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸಮಾಜ ಸೇವಕ ವೈ.ಎನ್. ಮುನವಳ್ಳಿ (62) ಯವರು ಕೊನೆಯುಸಿರೆಳೆದರೆಂದು ತಿಳಿಸಲು ವಿಷಾಧವೆನಿಸುತ್ತದೆ.

ಕೆಲದಿನಗಳ ಹಿಂದೆ ಕೊರೊನಾ ಪಾಸಿಟಿವ್ ಬಂದು ದಾಂಡೇಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಉಸಿರಾಟದ ತೊಂದರೆಯ ಕಾರಣಕ್ಕೆ ಕಾರವಾರದ ಕ್ರಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕಳೆದೆರಡು ದಿನಗಳಿಂದ ಚೇತರಿಕೆಯಲ್ಲುದ್ದರು. ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆಂಬ ಮಾಹಿತಿ ಆರೋಗ್ಯ ಇಲಾಖೆಯಿಂದ ಬಂದಿದೆ. ಇದರಿಂದಾಗಿ ಕೊರೊನಾ ಎಂಬ ಮಹಾಮಾರಿ ದಾಂಡೇಲಿಯಲ್ಲಿ ಮತ್ತೊಂದು ಬಲಿ ತೆಗೆದುಕೊಂಡಂತಾಗಿದೆ.

ಮೃತರು ಮಡದಿ ಹಾಗೂ ನಾಲ್ವರ ಮಕ್ಕಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಒಡನಾಡಿ ಬಳಗವೂ ಸೇರಿದಂತೆ ನಗರದ ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ.

ಅರಣ್ಯ ಇಲಾಖೆಯಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಮುನವಳ್ಳಿಯವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನಿವೃತ್ತಿಯಾಗಿದ್ದರು. ಜನಪರ ಅಧಿಕಾರಿಯಾಗಿ ಮೆಚ್ಚುಗೆ ಗಳಿಸಿದ್ದರು.

ನಿವೃತ್ತಿಯ ನಂತರ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಮುನವಳ್ಳಿಯವರು ಲಾಯಿನ್ಸ್ ಕ್ಲಬ್, ಜೈನ್ ಸಮಯದಾಯ ಸಂಘ , ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ಸಕ್ರೀಯರಾಗಿದ್ದರು. ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ಇವರ ಅಗಲುವಿಕೆ ದಾಂಡೇಲಿಗೆ ತುಂಬಲಾರದ ಹಾನಿಯನ್ನುಂಟುಮಾಡಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಅಗಲಿದ ತಮಗಿದೋ ನುಡಿನಮನಗಳು.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*