ಕಳೆದೆರಡು ದಿನ ಒಂದಿಷ್ಟು ನಿರಾಳವೆನಿಸಿದ್ದ ಕೊರೊನಾ ದಾಂಡೇಲಿಯಲ್ಲಿ ಸೋಮವಾರ ಮತ್ತೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.
ಸೋಮವಾರ 21 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ.
ನಗರದ ಟೌನ್ ಶಿಪ್, ಹಳಿಯಾಳ ರಸ್ತೆ, ಗಾಂಧಿನಗರ, ಬಂಗೂರ ನಗರ, ಗಣೇಶನಗರ, ಅಜಾದ ನಗರ, ನಿರ್ಮಲ ನಗರ ಸೇರಿದಂತೆ ಹಲವು ಪ್ರದೇಶಗಳ ಜನರಲ್ಲಿ ಪಾಸಿಟಿವ್ ಬಂದಿದೆ.
ಸೋಮವಾರದ 21 ಜನರೂ ಸೇರಿ ದಾಂಡೇಲಿಯಲ್ಲಿ ಇಲ್ಲಿಯವರೆಗೆ 666 ಜನರು ಸೋಂಕಿಗೊಳಗಾಗಿದ್ದು, ಇವರಲ್ಲಿ ರವಿವಾರ ಗುಣಮುಖರಾದ 8 ಜನರೂ ಸೇರಿ ಇಲ್ಲಿಯವರೆಗೆ 456 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ.
Be the first to comment