ದಾಂಡೇಲಿಯಲ್ಲಿ ಕೊರೊನಾ ಓಟ ಮುಂದುವರೆದಿದ್ದು, ಪರೀಕ್ಷೆ ನಡೆಸಿದ ಹಾಗೆ ಪಾಸಿಟಿವ್ ಪ್ರಕರಣಗಳೂ ಸಹ ಹೆಚ್ಚುತ್ತಿರುವುದು ಆತಂಕಕಾರಿಯಾಗುತ್ತಿದೆ.
ನಗರದಲ್ಲಿ ಮಂಗಳವಾರ ಮತ್ತೆ 27 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಈ ಸೋಂಕು ಬಹುತೇಕ ನಗರವನ್ನು ಆವರಿಸಿರುವ ಜೊತೆಗೆ ನಗರಕ್ಕೆ ಸಮೀಪದ ಗ್ರಾಮೀಣ ಪ್ರದೇಶಕ್ಕೂ ಇತ್ತೀಚೆಗೆ ವ್ಯಾಪಿಸುತ್ತಿರುವುದು ಕಂಡು ಬರುತ್ತಿದೆ.
ಮಂಗಳವಾರದ 27 ಪ್ರಕರಣಗಳೂ ಸೇರಿ ದಾಂಡೇಲಿಯಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 583 ಕ್ಕೆ ಹೆಚ್ಚಿದೆ. ಸೋಮವಾರ 32 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೇ 402 ಜನರು ಗುಣಮುಖರಾಗಿದ್ದಾರೆ. ಮಂಗಳವಾರ ಮತ್ತೆ ಕೆಲವರು ಬಿಡುಗಡೆಯಾಗುವ ಸಾದ್ಯತೆಯಿದೆ.
Be the first to comment