ದಾಂಡೇಲಿಯಲ್ಲಿ ರವಿವಾರ ಮತ್ತೆ 15 ಜನರಲ್ಲಿ ಪಾಸಿಟಿವ್….

ಕೊರೊನಾ ಹರಡದಂತೆ ಮುಂಜಾಗ್ರತೆ ವಹಿಸಿ

ಅದ್ಯಾಕೋ ದಾಂಡೇಲಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ರವಿವಾರ ಮತ್ತೆ 15 ಜನರಲ್ಲಿ ಪಾಸಿಟಿವ್ ಬಂದಿರುವ ಮಾಹಿತಿ ಲಭ್ಯವಾಗಿದೆ.

ಇದರಿಂದಾಗಿ ಇಲ್ಲಿಯವರೆಗೆ ಒಟ್ಟೂ 546 ಜನರು ಸೋಂಕಿಗೊಳಗಾದಂತಾಗಿದೆ. ಶನಿವಾರ 10 ಜನರು ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ 354 ಜನರು ಗುಣಮುಖರಾಗಿದ್ದಾರೆ.

ಕೊರೊನಾ ನಿಯಂತ್ರಿಸುವಲ್ಲಿ ಹಾಗೂ ಪಾಸಿಟಿವ್ ಬಂದವರನ್ನು ಪರೀಕ್ಷಿಸುವಲ್ಲಿ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಆದರೆ ಕೆಲವೆಡೆ ಸಾರ್ವಜನಿಕ ವಲಯದಿಂದಲೇ ಅಸಹಕಾರ ವ್ಯಕ್ತವಾಗುತ್ತಿರುವ ಬಗ್ಗೆ ಅಧಿಕಾರಿಗಳು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.

ಹಿರಿಯ ನಾಗರಿಕರ ಪರೀಕ್ಷೆಗೆಂದು ಬರುವ ಆರೋಗ್ಯ ಸಿಬಂದಿಗಳ ಜೊತೆ ತಕರಾರು ತೆಗೆಯದೇ ಸಹಕರಿಸುವಂತೆ ತಹಶೀಲ್ದಾರ ಶೈಲೇಶ ಪರಮಾನಂದ ಹಾಗೂ ಆರೋಗ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

1 Comment

  1. ಕರುನಾಗೆ ಸಂಬಂಧಪಟ್ಟ ಸಮಗ್ರ ವಿಷಯಗಳು ಬರುತ್ತಾ ಇದ್ದೇವೆ ತುಂಬಾ ಥ್ಯಾಂಕ್ಸ್ ವಂದನೆಗಳು

Leave a Reply

Your email address will not be published.


*