ಯು.ಪಿ.ಎಸ್‌.ಸಿ.ಯಲ್ಲಿ 225 ನೇ ಅಗ್ರ ಶ್ರೇಯಾಂಕದಲ್ಲಿ ಉತ್ತೀರ್ಣಳಾದ ಹೇಮಾ ನಾಯಕ

ಹೇಮಾ ಸಾಧನೆಗೊಂದು ಸಲಾಂ

ಕೇಂದ್ರ ಲೋಕ ಸೇವಾ ಆಯೋಗದ ನಾಗರಿಕ ಸೇವೆಗಳ (ಯು.ಪಿ.ಎಸ್.ಸಿ.) ಪರೀಕ್ಷೆಯಲ್ಲಿ ಅಂಕೋಲಾ ತಾಲೂಕಿನ ವಾಸರಕುದ್ರಿಗೆಯ ಕುಮಾರಿ ಹೇಮಾ ಶಾಂತಾರಾಮ ನಾಯಕ ಈಕೆಯು 225 ನೇ ಅಗ್ರ ಶ್ರೇಯಾಂಕದೊಂದಿಗೆ ಉತ್ತೀರ್ಳಾಣಳಾಗಿ ಸಾಧನೆ ಮಾಡಿದ್ದಾಳೆ.

ವಾಸರಕುದ್ರಿಗೆಯ ಶಾಂತಾರಾತಾಮ ನಾಯಕ ಹಾಗೂ ರಾಜಮ್ಮ ನಾಯಕ ಶಿಕ್ಷಕ ದಂಪತಿಗಳ ಮಗಳಾಗಿರುವ ಹೇಮಾ ಕನ್ನಡ ಮಾದ್ಯಮದ ವಿದ್ಯಾಥಿಯಾಗಿದ್ದವಳು. ಚಿಕ್ಕಂದಿನಿಂದಲೂ ಪ್ರತಿಭಾವಂತ ವಿದ್ಯಾಥಿಯಾಗಿದ್ದ ಈಕೆ ಎಸ್.ಎಸ್ಲ್ಎಲ್.ಸಿ, ಪಿ.ಯು.ಸಿ ಮತ್ತು ಸ್ನಾತ್ತಕೋತ್ತರೆ ಪರಿಕ್ಷೆಯಲ್ಲಿಯೂ ಸಹ ಅಗ್ರಶ್ರೇಯಾಂಕದೊಂದಿಗೆ ಗಮನ ಸೆಳೆದ ಪ್ರತಿಭೆಯಾಗಿದ್ದಾಳೆ.

ಓದಿನ ಜೊತೆ ಪಠ್ಯೇತರ ಚಟುವಟಿಕೆಯಲ್ಲಿಯೂ ಮುಂದಿರುವ ಹೇಮಾ ನಾಯಕ ಎನ್.ಎಸ್ಎಸ್. ಮತ್ತು ಇತರೆ ಚುಟುವಟಿಕೆಯಲ್ಲಿಯೂ ತೊಡಗಿಸಿಕೊಂಡವಳು. ಚರ್ಚಾ ಸ್ಪರ್ದೆ ಸೇರಿದಂತೆ ಹಲವಾರು ಸ್ಪರ್ದೆಗಳಲ್ಲಿ ಬಹುಮಾನ ತೊಡಗಿಸಿಕೊಂಡ ಈಕೆ ಬಹುಮುಖ ಪ್ರತಿಭೆ ಕೂಡಾ. ಇದೀಗ ಯು.ಪಿ.,ಎಸ್‌,ಸಿ.ಯಲ್ಲಿ 225 ನೇ ಸ್ಥಾನ ಪಡೆಯುವ ಮೂಲಕ ಕೀರ್ತಿ ತಂದಿದ್ದಾಳೆ.

ತನ್ನ ಸಾಧನೆಯ ಹಿಂದೆ ತನ್ನ ತಂದೆ, ತಾಯಿಗಳ ಶ್ರಮ ಮತ್ತು ಪ್ರೋತ್ಸಾಹವನ್ನು ನೆನೆಯುವ ಹೇಮಾ, ಅವಿರತ ಶ್ರಮ ಹಾಗೂ ಶೃದ್ದೆಯಿಂದ ನಾವು ನಮ್ಮ ಗುರಿ ತಲುಪಲು ಸಾದ್ಯವಾಗುತ್ತದೆ. ಹೆತ್ತವರಿಗೂ, ಹೊತ್ತ ನೆಲಕ್ಕೂ ನನ್ನಿಂದಾದ ಏನಾದರೊಂದು ಕೊಡುಗೆ ನೀಡಬೇಕು. ಈ ದೇಶಕ್ಕಾಗಿ ಪ್ರಮಾಣಿಕ ಸೇವೆ ಸಲ್ಲಿಸಬೇಕೆಂಬುದೇ ಹೇಮಾಳ ಬಯಕೆಯಾಗಿದೆ.

ಮಗಳ ಸಾಧನೆಯ ಬಗ್ಗೆ ಅಭಿಮಾನದ ಮಾತುಗಳನ್ನಾಡುವ ಶಾಂತಾರಾಮ ನಾಯಕ ಹಾಗೂ ರಾಜಮ್ಮ ನಾಯಕರು ಈ ಬಗ್ಗೆ ನಮಗೆ ನಿಜಕ್ಕೂ ಹೆಮ್ಮೆಯಿದೆ. ಅವಳು ಚಿಕ್ಕಂದಿನಿಂದಲೇ ಪ್ರತಿಭಾನ್ವಿತೆಯಾಗಿದ್ದಳು. ನಾವು ಪ್ರೋತ್ಸಾಹ ನೀಡಿದ್ದೆವು. ಇಂದು ಆಕೆ ಗುರಿ ತಲುಪಿದ್ದಾಳೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*