ಕೇಂದ್ರ ಲೋಕಸೇವಾ ಆಯೋಗದ ಅತ್ಯನ್ನತ ನಾಗರಿಕ ಸೇವೆಗಳ ( ಯು.ಪಿ.ಎಸ್.ಸಿ. ) ಪರೀಕ್ಷೆಯಲ್ಲಿ ದಾಂಡೇಲಿಯ ಸಚಿನ್ ಹಿರೇಮಠ 213 ನೇ ಸ್ಥಾನ ಪಡೆಯುವ ಮೂಲಕ ಕೀರ್ತಿ ತಂದಿದ್ದಾರೆ.
ದಾಂಡೇಲಿಯ ಶಿವಾನಂದ ಎಚ್.ಎಮ್. ಹಾಗೂ ಶರ್ಮಿಳಾ ನಾಯ್ಕ ಶಿಕ್ಷಕ ದಂಪತಿಗಳ ಮಗನಾಗಿರುವ ಸಚಿನ್ ಎಸ್.ಎಸ್.ಎಲ್.ಸಿ, ಹಾಗೂ ಪಿ.ಯು.ಸಿಯಲ್ಲಿ ರೆಂಕ್ ಗಳಿಸಿ ಸಾಧನೆ ಮಾಡಿ ಬಿ.ಇ. ಮೆಕನಿಕಲ್ ಪದವಿ ಪಡೆದಿದ್ದ.
ಇದು ಮೂರನೆಯ ಬಾರಿ ಆತ ಯು.ಪಿ.ಎಸ್.ಸಿ ಪ ರೀಕ್ಷೆ ಬರೆದಿದ್ದು. ಈಗಾಗಲೇ ಈತ ಕೊಲ್ಕತ್ತಾದಲ್ಲಿ ಭಾರತದ ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕನಾಗಿ ಕ್ಲಾಸ್ ಒನ್ ಗ್ರೇಡ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 213 ನೇ ರ್ಯಾಂಕ್ ಪಡೆಯುವ ಮೂಲಕ ತನ್ನ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಮುಂಜಾವು ಜೊತೆ ಮಾತನಾಡಿದ ಸಚಿನ್ ಹಿರೇಮಠ ಇದು ನನ್ನ ಕನಸಾಗಿತ್ತು. ನನ್ನ ತಂದೆ ತಾಯಿಗಳ ಹಂಬಲ ಕೂಡಾ ಆಗಿತ್ತು. ಅದಕ್ಕಾಗಿ ಹಲವು ವರ್ಷಗಳಿಂದ ಸಿದ್ದತೆ ಮತ್ತು ಪ್ರಯತ್ನದಲ್ಲಿದ್ದೆ. ಈಗ ನನ್ನ ಆಶೆ. ನೆರವೇರಿದೆ. ನನ್ನ ಈ ಸಾಧನೆಯ ಹಿಂದೆ ನಿಂತ ತಂದೆ, ತಾಯಿ, ಸಹೋದರಿಯ ಪ್ರೋತ್ಸಾಹವನ್ನು, ಹಾಗೂ ನನಗೆ ಕಲಿಸಿದ ಗುರುಗಳನ್ನು ಸ್ಮರಿಸುತ್ತೇನೆ. ನನ್ನ ಸಾಧನೆಯ ಮೂಲಕ ದೇಶಕ್ಕೆ, ನಾಡಿಗೆ ಏನಾದರೂ ಕೊಡುಗೆ ಕೊಡಬೇಕೆಂಬ ಹಂಬಲ ನನ್ನದು. ಅದಕ್ಕಾಗಿ ಂಯಾವತ್ತೂ ನಾನು ಸಿದ್ದನಿದ್ದೇನೆ ಎಂದರು.
ಮಗನ ಸಾಧನೆಯ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ ತಂದೆ ಶಿವಾನಂದ ತಾಯಿ ಶರ್ಮಿಳಾರವರು ನಮ್ಮ ಮಗ ಚಿಕ್ಕಂದಿನಿಂದಲೂ ಓದಿನಲ್ಲಿ ಮುಂದಿದ್ದ. ಅವನಿಗೆ ಈ ಸಾಧನೆಯ ಗುರಿಯಿತ್ತು. ಅದನ್ನು ಸಾಧಿಸಿದ್ದಾನೆ. ಅವನ ಸಾಧನೆಗೆ ಕಾರಣರಾದ ಅವನ ಗುರುಗಳೂ ಹಾಗೂ ಸಮಾಜದ ಪ್ರತಿಯೊಬ್ಬರನ್ನೂ ನೆನೆಯುತ್ತೇವೆ. ಆತನ ಮೂಲಕ ದೇಶ ಸೇವೆಯ ಮುನ್ನೋಟ ಇಟ್ಟುಕೊಂಡಿದ್ಧೇವೆಂದು ಸಂತಸ ಹಂಚಿಕೊಂಡರು.
Be the first to comment