ದಾಂಡೇಲಿಯ 289 ಜನ ಸೋಂಕಿತರಲ್ಲಿ ಎಷ್ಟು ಜನರು ಗುಣ ಮುಖ ಹೊಂದಿದ್ದಾರೆ ಗೊತ್ತಾ…??

108 ಜನರು ಚಿಕಿತ್ಸೆಯಲ್ಲಿ....

ದಾಂಡೇಲಿಯಲ್ಲಿ ಈವರೆಗೆ 289 ಜನರು ಕೊರೊನಾ ಸೋಂಕಿಗೊಳಗಾಗಿದ್ದು, ಅವರಲ್ಲಿ ಈವರೆಗೆ ಚಿಕಿತ್ಸೆ ಪಡೆದಿರುವ ಒಟ್ಟೂ 181 ಜನರು (ಮಂಗಳವಾರದವರೆಗೆ ) ಗುಣ ಮುಖರಾಗಿ ಮನೆ ಸೇರಿದ್ದಾರೆ.

ಮಂಗಳವಾರ 6 ಜನರಲ್ಲಿ ಕೊರೊನಾ ಪಾಸಿಟಿವ್‌ ಬಂದಿದೆ. ಆದರೆ ಇ.ಎಸ್‌.ಐ. ಆಸ್ಪತ್ರೆ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 17 ಜನರು, ಮುರಾರ್ಜಿ ವಸತಿ ಶಾಲೆಯ ಕೋವಿಡ್‌ ಕೇರ್‌ ಸೆಂಟರ್‌ನಲಿ 45 ಜನರು ಹಾಗೂ ಹೋಮ್‌ ಐಸುಲೇಶನ್‌ನ್ ನಲ್ಲಿದ್ದ 6 ಜನರು ಸೇರಿ .68 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈ ವರೆಗೆ ಒಟ್ಟೂ 181 ಜನರು ಗುಣಮುಖರಾದಂತಾಗಿದೆ.

ನಿಜಕ್ಕೂ ಇದು ಒಂದು ಆಶಾದಾಯಕ ಸಂಗತಿಯಾಗಿದೆ. ದಾಂಡೇಲಿಯಲ್ಲಿ ಸೊಂಕಿಗೊಳಗಾದವರ ಸಂಖ್ಯೆಗಿಂತ ಗುಣಮಖರಾದವರ ಸಂಖ್ಯೆ ಹೆಚ್ಚಿದೆ. ಆದರೂ ಸಹ ಸಹ ನಾಗರಿಕರು ಕೊರೊನಾ ಸೋಮಕು ಹರಡದಂತೆ ಮುಂಜಾಗತೆ ವಹಿಸಬೇಕಾದ ಅಗತ್ಯತೆಯಿದೆ. ಹಾಗೂ ಸೋಂಕಿನ ಗುಣ ಲಕ್ಷಣಗಳಿದ್ದರೆ ತಕ್ಷಣ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸ ಬೇಕು ಎಂದು ತಹಶೀಲ್ದಾರ ಶೈಲೇಶ ಪರಮಾನಂದ ಮನವಿ ಮಾಡಿಕೊಂಡಿದ್ದಾರೆ.

ಅಧಿಕಾರಿಗಳು, ವೈದ್ಯರಿಗೊಂದು ಸಲಾಂ

ದಾಂಡೇಲಿಯಲ್ಲಿ ಕೊರೊನಾ ನಿಯಂತ್ರಿಸುವ್ಲಿ ಹಾಗೂ ಸೊಂಖಕಿತರನ್ನು ಚಿಕಿತ್ಸೆಗೊಳಪಡಿಸುವಲ್ಲಿ ಮತ್ತೆ ಶೀಘ್ರ ಗುಣಪಡಿಸುವಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕಾರ್ಯ ನಿವಹಿಸುತ್ತಿರುವ ಎಲ್ಲ ಇಲಾಖಾ ಅಧಿಕಾರಿಗಳಿಗೂ, ಸಿಬ್ಬಂದಿಗಳಿಗೂ, ವೈದ್ಯಾಧಿಕಾರಿಗಳಿಗೂ, ನರ್ಸಗಳಿಗೂ, ಹಾಗೂ ಆಶಾ, ಅಂಗನವಾಡಿ ಮತ್ತು ಆರೋಗ್ಯ ಸಿಬ್ಬಂದಿಗಳಿಗೂ ನಮ್ಮ ಒಡನಾಡಿ.ಕಾಂ ಬಳಗದಿಂದ ಒಂದು ಅಭಿಮಾನದ ಸಲಾಂ ….

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

1 Comment

  1. It is good development that out of 283 Active cases 181patients are recovered and have been discharged.Hats to all Covid-19 warriors.

Leave a Reply

Your email address will not be published.


*