ದಾಂಡೇಲಿಯಲ್ಲಿ 300 ರ ಗಡಿ ಸಮೀಪಿಸಿದ ಕೊರೊನಾ: ಸೋಮವಾರ ಮತ್ತೆ….

ನಾಗರಿಕರೇ ಕಾಳಜಿಯಿಂದಿರಿ....

ದಾಂಡೇಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಎರಡಂಕಿಯಲ್ಲೇ ಹೆಚ್ಚಿಗೆಯಾಗುತ್ತಿದ್ದು, 300 ರ ಗಡಿ ಸಮೀಪಿಸುತ್ತಿದೆ. ಇದು ನಾಗರಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ.

ಸೋಮವಾರದ ಮಾಹಿತಿಯ ಪ್ರಕಾರ ದಾಂಡೇಲಿಯಲ್ಲಿ ಮತ್ತೆ 20 ಪೊಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದನ್ನೂ ಸೇರಿ ನಗರದಲ್ಲಿ 283 ಜನರು ಸೋಂಕಿಗೊಳಗಾಗಿದಂತಾಗಿದೆ. ಇವರಲ್ಲಿ 80ರಷ್ಟು ಜನರು ಗುಣಮುಖರಾಗಿ ಮನೆ ಸೇರಿದ್ದಾರೆ.

ನಗರದ ಟೌನ್ ಶಿಪ್ ನಲ್ಲಿ ರವಿವಾರ ಸಂಜೆ ವೃದ್ದನೋರ್ವ ಮೃತ ಪಟ್ಟಿದ್ದು, ಅವರ ಗಂಟಲು ದ್ರವದ ಪರೀಕ್ಷೆ ನೆಗೆಟಿವ್ ಬಂದಿದೆ. ಅವರ ಮನೆಯ ಇಬ್ಬರು ಸದಸ್ಯರ ವರದಿ ಪಾಸಿಟಿವ್ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟಾರೆ ಕೊರೊನಾ ಸೋಂಕು ಹರಡುತ್ತಿರುವ ವೇಗ ನಗರದ ಜನರ ಕಳವಳಕ್ಕೆ ಕಾರಣವಾಗಿದೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*