ಪತ್ರಕರ್ತ ಚಂದ್ರಯ್ಯ ಅಂದಕಾರಿಮಠ ಇನ್ನಿಲ್ಲ…

ದಾಂಡೇಲಿಯ ಪತ್ರಕರ್ತ, ಸರ್ವತೋಮುಖ ವಿಕಾಸ ಕೇಂದ್ರದ ಅಧ್ಯಕ್ಷ ಚಂದ್ರಯ್ಯ ಅಂದಕಾರಿಮಠ ರವರು ಶುಕ್ರವಾರ ರಾತ್ರಿ ಅನಾರೋಗ್ಯದಿಂದ ನಿಧನರಾದರು.

ಹಲವು ಹೋರಾಟ, ಸಂಘಟನೆ, ಜನಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಹಳಿಯಾಳದ ಹಳ್ಳಿಯೊಂದರಲ್ಲಿ ತಮ್ಮ ಸಂಸ್ಥೆಯ ಮೂಲಕ ಶಾಲೆಯೊಂದನ್ನೂ ಸಹ ನಡೆಸುತ್ತಿದ್ದರು.

ಉತ್ತಮ ಮಾತುಗಾರರೂ, ಬರಹಗಾರರೂ ಅಗಿದ್ದ ಇವರು ಕೆಲ ಪತ್ರಿಕೆಗಳಲ್ಲಿ ವರದಿಗಾರರಾಗಿಯೂ ಕಾರ್ಯನಿರ್ವಹಿಸಿದ್ದರು. ಅನಾರೋಗ್ಯಕ್ಕೊಳಗಾಗಿದ್ದ ಅವರನ್ನು ಗುರುವಾರ ಧಾರವಾಡ ಜಿಲ್ಲಾ (ಸಿವಿಲ್) ಅಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಮ್ರತರು ತಂದೆ, ತಾಯಿ, ಸಹೋದರ, ಮಡದಿ ಹಾಗೂ ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಗಲಿದ ಪತ್ರಕರ್ತ ಗೆಳೆಯನಿಗೆ ‘ಒಡನಾಡಿ’ ಬಳಗದ ನುಡಿನಮನಗಳು. ಜೊತೆಗೆ ಅವರ ಆಪ್ತರು ಹಾಗೂ ಗೆಳೆಯರನೇಕರು ಸಂತಾಪ ಸೂಚಿಸಿದ್ದಾರೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

2 Comments

Leave a Reply

Your email address will not be published.


*