ಶುಕ್ರವಾರ ದಾಂಡೇಲಿಯಲ್ಲಿ ಎಷ್ಟು ಪಾಸಿಟಿವ್‌ ಪ್ರಕರಣ ಗೊತ್ತಾ…?

ದಾಂಡೇಲಿಗರ ನೆಮ್ಮದಿಯ ನಿಟ್ಟುಸಿರು...

ಕಳೆದ ಕೆಲದಿನಗಳಿಂದ ದಾಂಡೇಲಿಯಲ್ಲಿ ಹೆಚ್ಚುತ್ತಲಿದ್ದ ಕೊರೊನಾ ಸೋಂಕಿತರ ಸಂಖ್ಯೆಯಿಂದ ಆತಂಕಗೊಂಡಿದ್ದ ದಾಂಡೇಲಿಗರು ಶುಕ್ರವಾರ ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಶುಕ್ರವಾರ ಬಂದ ಕೊರರೊನಾ ಹೆಲ್ತ್‌ ಬುಲೆಟಿನ್‌ ವರದಿಯಲ್ಲಿ ನಗರದ ಟೌನ್‌ಶಿಪ್‌ನ 46 ವರ್ಷದ ಪುರಷನೋರ್ವನಲ್ಲಿ ಮಾತ್ರ ಕೊರೊನಾ ಪಾಸಿಟಿವ್‌ ದೃಢವಾಗಿದೆ.‌ ಉಳಿದಂತೆ ಸೋಂಕಿಗೊಳಗಾಗಿ ಗುಣಮುಖನಾಗಿ ಮನೆ ಸೇರಿರುವ ನ್ಯಾಯವಾದಿಯ ಸಂಪರ್ಕದಲ್ಲಿದ್ದವರಿಗೆ ಹಾಗೂ ಖಾಸಗಿ ಆಸ್ಪತ್ರೆಯ ಹಲವು ( ಇಬ್ಬರಿಗೆ ಮಾತ್ರ ಪಾಸಿಟಿವ್‌) ಸಿಬ್ಬಂದಿಗಳ ಗಂಟಲು ದ್ರವದ ಪರೀಕ್ಷಾ ವರದಿ ನೆಗೆಟಿವ್‌ ಬಂದಿರುವ ಮಾಹಿತಿಯಿದೆ.

ಉಳಿದಂತೆ ಕಳೆದ ಮೂರು ದಿನಗಳಿಂದ ಪಾಸಿಟಿವ್‌ ಬಂದು ಆಸ್ಪತ್ರೆ ಸೇರಿರುವರು ದಾಂಡೇಲಿಯ ಮುರಾಜಿ ವಸತಿ ನಿಲಯದಲ್ಲಿ ಪ್ರಾರಭಿಸಿರುವ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ದಾಂಡೇಲಿಯಲ್ಲಿ 85 ಜನರಲ್ಲಿ ಕೊರೊನಾ ಪಾಸಿಟಿವ್‌ ಬಂದಿದ್ದು ಅವರಲ್ಲಿ 15 ರಷ್ಟು ಜನರು ಗುಣಮುಖರಾಗಿ ಮನೆ ಸೇರಿದ್ದಾರೆ. ಒಂದು ಸಾವು ಸಂಭವಿಸಿದೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

8 Comments

  1. ಕಾಯಕ ಜೀವಿಗಳ ನಗರ ದಾಂಡೇಲಿ ಶಾಂತಿ ಸೌಹಾರ್ದತೆಗೆ ಹೆಸರಾದ ಮಾದರಿಯ ನಗರ. ಈಗ ಜಗತ್ತನ್ನೇ ಕಂಗೆಡಿಸಿದ ಕರೋನಾ ಕಬಂಧಬಾಹುವಿನಿಂದ ಅದೇ ಐಕ್ಯತೆಯ ಶಕ್ತಿಯ ಮೂಲಕ ಪಾರಾಗಲು ‘ಸ್ವಯಂ ಲಾಕ್ ಡೌನ್’ಮಾಡುವುದು ಪ್ರಜ್ಞಾವಂತಿಕೆಯ ನಡೆ.ನಗರದ ಸಮಸ್ತ ಜನತೆಗೆ ಹಾರ್ದಿಕ ಅಭಿನಂದನೆಗಳು.*ಅಳಗುಂಡಿ ಅಂದಾನಯ್ಯ*

  2. In the internet of Dandeli it is a very good decision taken by elected representatives and the public of Dandeli to control the spread of COVID-19 Pandemic.

  3. Hard to explain the situation of India or Karnataka or any place where covid exist….stay home stay safe…fear the Creator not Corona….Allah has given the courage and strength to fight every situation…so let’s face this…

Leave a Reply

Your email address will not be published.


*