
ದಾಂಡೇಲಿಯಲ್ಲಿ ಕೊರೋನಾ ಆಕ್ರಮಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಬುಧವಾರ ಲಭ್ಯವಾಗಿರುವ ಮಾಹಿತಿಯ ಪ್ರಕಾರ ನಗರದ 12 ಜನರಲ್ಲಿ ಪಾಸಿಟಿವ್ ವರದಿ ಬಂದಿದೆ ಎನ್ನಲಾಗಿದೆ.
ಸೊಂಕಿತರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆಯುತ್ತಿದೆ. ಬುಧವಾರ ಸೋಂಕು ದೃಢ ಪಟ್ಟವರಲ್ಲಿ ಹೆಚ್ಚಿನವರು ಸೋಂಕಿತ ನ್ಯಾಯವಾದಿಯ ಸಂಪರ್ಕಕ್ಕೆ ಬಂದವರೆನ್ನಲಾಗಿದೆ. ಕೆಲವರು ನ್ಯಾಯವಾದಿಗಳ ಹಾಗೂ ಅವರ ಮನೆಯವರ ಗಂಟಲು ದ್ರವದ ವರದಿ ಪಾಸಿಟಿವ ಬಂದಿರುವ ಮಾಹಿತಿಯಿದೆ.
ದಾಂಡೇಲಿಯಲ್ಲಿ ಬುಧವಾರದವರೆಗಿನ ಸೋಂಕಿತರ ಸಂಖ್ಯೆಯೂ ಸೇರಿ 71 ಜನರು ಕೊರೊನಾ ಸೋಂಕಿಗೊಳಗಾದಂತಾಗಿದೆ. ಇವರಲ್ಲಿ 15 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ. ನಿತ್ಯ ಹೆಚ್ಚುತ್ತಿರುವ ಕೊರೊನಾ ಪ್ರಕರಣದಿಂದಾಗಿ ಜನರಲ್ಲಿ ಆತಂಕ ಹೆಚ್ಚಿದ್ದು ಜನರೂ ಸಹ ಮುಂಜಾಗೃತೆ ವಹಿಸಬೇಕಾದ ಅಗತ್ಯತೆಯಿದೆ.

Be the first to comment