ಶಿವಲೀಲಾ ಹುಣಸಗಿಯವರ ʼಟಂಕಾʼಗಳು…

  • ಕಳೆದು ಹೋದೆ
    ಗೊತ್ತುಗುರಿಯಿಲ್ಲದ..
    ಸಮಾಧಿಯಂತೆ
    ನಿಟ್ಟುಸಿರುಗಳಲಿ
    ಬಿಕ್ಕಳಿಕೆಗಳಲ್ಲಿ.
  • ನಿನ್ನ ಪ್ರೀತಿಸಿ
    ಮುದ್ದುಮಾಡಿದ್ದೆ ಬಂತು
    ಮತ್ತಿನಲಂದು
    ಹೊತ್ತಿಲ್ಲದ ಹೊತ್ನಲ್ಲಿ
    ಬಿಟ್ಟಕೊಂಡಾತು ಮುತ್ನ
  • ಕರುಳ ಹಿಂಡಿ
    ರಕ್ತ ಹರಿಸಿದರು
    ಬಿಡದಾ ನಂಟು
    ಕತ್ತ ನಿವಾಳಿಸಿದೆ
    ಗೋರಿಯ ಸುತ್ತಮುತ್ತ.
  • ನನ್ನದೇನಿದೆ
    ನಿನ್ನದೆ ಅಂದವನು
    ಜಿಪುಣನಾದ
    ಮೊಬೈಲ್ ಕೊಡಿಸಿಲ್ಲ
    ಕರೆನ್ಸಿ ಹಾಕಿಸಿಲ್ಲ..
  • ಮಾತು ಮಾತಿಗೆ
    ಬಿಸಿಯುಸಿರು ಮಾಗಿ
    ಮೋಡ ಕವಿದು
    ಇರುಳು ಹೊದ್ದಂಗಾತು
    ಮಿಂಚಿನ ದೀಪದಾಂಗ
ಶಿವಲೀಲಾ ಹುಣಸಗಿ, ಯಲ್ಲಾಪುರ

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

16 Comments

  1. ಗೆಳತಿ ತಮ್ಮ ಬರಹದ ಸಾಲುಗಳು ತುಂಬಾ ಚೆನ್ನಾಗಿದೆ.. ಬೇಡ ಎಂದರು ಮನವ ಸೆಳೆದಿವೆ…ತಮ್ಮ ಸಾಹಿತ್ಯ ಸಿಂಚನವು ನಮಗೆ ಕೊಟ್ಟಷ್ಟು ಮೃಷ್ಟಾನ್ನ ಭೋಜನವು.

  2. ಕವನದ ಪ್ರತಿಯೊಂದು ಸಾಲುಗಳು ಅಧ್ಬುತವಾಗಿವೆ.👍👌👌😍

  3. ಜೀವನದಲ್ಲಿ ಸುಖ ದುಃಖಗಳಲಿ ಅಲವತ್ತುಕೊಂಡ ಭಾವದ ಎಳೆಗಳನ್ನು ಚೆನ್ನಾಗಿ ಬಿಂಬಿಸಿದ್ದೀಯಾ!ಗೆಳತಿ.ಅರ್ಥಪೂರ್ಣವಾದ ಟಂಕಾಗಳು. ಹೊಸ ಸಾಹಿತ್ಯ ಪ್ರಕಾರದ ಅಭಿವ್ಯಕ್ತಿಗೆ ತುಂಬಾ ತುಂಬಾ ಧನ್ಯವಾದಗಳು. ನಿನ್ನ ಯಶಸ್ಸಿನ ಪಯಣ ಹೀಗೆ ಮುಂದುವರೆಯಲಿ ಎಂದು ಹಾರೈಸುತ್ತೇನೆ ಗೆಳತಿ.

  4. ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುವ ರೀತಿ ಅತ್ಯದ್ಭುತವಾಗಿದೆ. ಸಾಹಿತ್ಯದ ವಿಭಿನ್ನ ಪ್ರಕಾರಗಳನ್ನು ಅತ್ಯುತ್ತಮ ರೀತಿಯಲ್ಲಿ ಪ್ರಯತ್ನಿಸುವ ನಿಮ್ಮ ಪ್ರಯತ್ನಕ್ಕೆ ನನ್ನ ನಮನಗಳು.

    • ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುವ ರೀತಿ ಅತ್ಯದ್ಭುತವಾಗಿದೆ. ಸಾಹಿತ್ಯದ ವಿಭಿನ್ನ ಪ್ರಕಾರಗಳನ್ನು ಅತ್ಯುತ್ತಮ ರೀತಿಯಲ್ಲಿ ಪ್ರಯತ್ನಿಸುವ ನಿಮ್ಮ ಪ್ರಯತ್ನಕ್ಕೆ ನನ್ನ ನಮನಗಳು.

  5. ಚುಟುಕು ಕವಿತೆಗಳು ಚೆನ್ನಾಗಿವೆ…👌👌👌👌👌

Leave a Reply

Your email address will not be published.


*