ಇವತ್ತೇನಾಯಿತು ನನಗೆ
ನೀನು ದೂರವಾಗಿರುವೆ
ನೀ ಕೊಟ್ಟ ಗಡಿಯಾರ ಕೈ ತಪ್ಪಿದೆ
ಗಡಿಯಾರ ನೆಲಕ್ಕೆ ಬಿದ್ದಾಗ……
ನೀ ಕೈ ತಪ್ಪಿದೆ ಎಂದುಕೊಂಡ ಮನ! ದುಖಿ:ದುಖಿ ಕೇಳುತ್ತಿದೆ
ನನ್ನ ಟೈಮ ಸರಿಯಿಲ್ಲ ಎಂದ ಮನ
ಗಡಿಯಾರ ಚೆಕ್ ಎಂದಾಗ ಮನ
ಗಲ್ಲ ಎಂದಿತ್ತು.
ಅದರ ನಗು ಮರೆಯಾದಾಗ
ನಿನ್ನ ನೆನಪಾಯಿತು !
ಗಡಿಯಾರದ ಬಿರುಕುಗಳು
ಮನದ ಬಿರುಕುಗಳಾಗಿವೆ.
ಪ್ರತಿ ಮುಳ್ಳು ಮನ ಚುಚ್ಚಿದೆ ಗೆಳತಿ !
ಟೈಮ್ ಹೇಳುತಿತ್ತು ನಾನು ಸರಿಯಿಲ್ಲ ಎಂದು,
ನಾನು ಕೇಳದೆ ಹೋದೆ ಕ್ಷಮಿಸು ನನ್ನನ್ನು.
ಲೇಖಕರ ಪರಿಚಯ: ಹ.ರಾ ಕಾವ್ಯನಾಮದಿಂದ ಬರೆಯುವ ರಾಮದಾಸ ಹಕ್ಕರಕಿಯವರು ಅಳ್ನಾವರದಲ್ಲಿ ಬಿ.ಎ. ದ್ವಿತೀಯ ವರ್ಷದ ವಿದ್ಯಾರ್ಥಿ. ಅಪ್ಪಟ ಗ್ರಾಮೀಣ ಪ್ರತಿಭೆ. ಉದಯೋನ್ಮುಖ ಬರಹಗಾರರು.
Be the first to comment