ದಾಂಡೇಲಿ: ಮುಂಬೈನಿಂದ ರಿಟರ್ನ ಆಗಿದ್ದ ದಾಂಡೇಲಿಯ ಪಟೇಲ ನಗರದ ವ್ಯಕ್ತಿಯೋರ್ವನಿಗೆ ರವಿವಾರ ಕೊರನಾ ಸೋಂಕು ದೃಢ ಪಟ್ಠಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈತ ಮುಂಬೈನಿಂದ ಮರಳಿ ನಿಗದಿತ ಸಮಯದವರೆಗೆ ಹಾಸ್ಟೆಲ್ ಕ್ವಾರೆಂಟೈನ್ ನಲ್ಲಿದ್ದು ನಂತರ ಹೋಮ್ ಕ್ವಾರೆಂಟೈನ್ ನಲ್ಲಿದ್ದರು. ನಂತರ ಹೋಮ್ ಕ್ವಾರೆಂಟೈನ್ ನಲ್ಲಿದ್ದರು. ರವಿವಾರ ಇವರ ಗಂಟಲು ದ್ರವದ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಸೋಂಕಿತನನ್ನು ರವಿವಾರ ಮುಂಜಾನೆ ಸರಕಾರಿ ಅಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಈತನ ಜೊತೆಗಿದ್ದ ಈತನ ಮಡದಿಯ ಗಂಟಲು ದ್ರವದ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎನ್ನಲಾಗಿದೆ. ಇಂದಿನ ಪ್ರಕರಣವೂ ಸೇರಿ ದಾಂಡೇಲಿಯಲ್ಲಿ 7 ಕೊರೊನಾ ಪಾಸಿಟಿವ್ ಪ್ರಕರಣಗಗಳು ದಾಖಲಾದಂತಾಗಿದೆ.
Be the first to comment