ಮದಿರಾಲಯದಲ್ಲಿ…

ನರೇಶ್‌ ನಾಯ್ಕರ ಕವಿತೆ...

ಎ೦ದೋ ಮಾತು ಬಿಟ್ಟವನು ಅ೦ದು
ಆಕಸ್ಮಿಕವಾಗಿ ಸಿಕ್ಕ ಮದಿರಾಲಯದಲ್ಲಿ,
ಡಿಮ್ ಲೈಟಿನ ಕೆಳಗೆ ಕುಡಿದ ಅಮಲಿನಲಿ
ದ್ವೇಷವೆಲ್ಲಾ ಮರೆತುಹೋಯಿತು ಅ೦ದು
ಮದಿರಾಲಯದಲ್ಲಿ

ಬದುಕಿನ ದಾರಿಯಲ್ಲಿ ಮುಳ್ಳು ಬೇಲಿಗಳೇ
ನೆಟ್ಟಿದರು ನನ್ನವರು,
ನಿನಗೆ ನಾವು ನಮಗೆ ನೀನು ಹೇಳು
ಯಾರು ಅವರು ಎ೦ದರು ಕುಡುಕರು
ಬಿಯರಿನ ಬಾಟಲಿ ಒಡೆದು
ಕೆ೦ಡಕಾರಿದರು ಮದಿರಾಲಯದಲ್ಲಿ

ಮಾತು ಮಾತಿಗೂ ಸಿಡಿಯಬೇಡಿ
ಅವನೆ೦ದೂ ಸತ್ಯ ಹೇಳಲಿಲ್ಲವೆ೦ದು,
ಸುಳ್ಳಿನ ಸಾಮ್ರಾಜ್ಯದಲ್ಲಿ
ಬದುಕಿಕೊ೦ಡವನಿಗೆ ಸತ್ಯವನ್ನು ಬಿಟ್ಟು
ಬೇರೇನೂ ಹೇಳಲು ಸಾಧ್ಯವಾಗಲಿಲ್ಲ
ಮದಿರಾಲಯದಲ್ಲಿ

ಮತ ಧರ್ಮದ ಪಣತಿ ಬೆಳಗಿಸಿ
ರು೦ಡ ಕಡಿಯುವ ರಕ್ಕಸರು
ಈ ನಗರದಲಿ,
ನೀನು ಯಾರು ನಾನು ಯಾರು
ಒ೦ದೇ ಗ್ಲಾಸಿಗೆ ತುಟಿಗಳು ನೂರಾರು
ಸ್ವರ್ಗ ನರಕ ಎಲ್ಲವೂ ಇಲ್ಲಿ
ಮದಿರಾಲಯದಲ್ಲಿ…

  • ನರೇಶ ನಾಯ್ಕ, ದಾಂಡೇಲಿ
ಲೇಖಕರ ಪರಿಚಯ: ದಾಂಡೇಲಿ ಕಾಗದ ಕಂಪನಿಯ ಉದ್ಯೋಗಿಯಾಗಿರುವ ನರೇಶ ನಾಯ್ಕರು ಉದಯೋನ್ಮುಖ ಬರಹಗಾರರು. ತಮ್ಮ ಕವಿತೆ, ಲೇಖನಗಳ ಮೂಲಕ ನಾಡಿಗೆ ಪರಿಚಿತರಾದವರು. ಇವರ ಕವನ ಸಂಕಲನ, ಕಥಾ ಸಂಲಕನಗಳು ಪ್ರಕಟವಾಗಿವೆ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

1 Comment

  1. ತುಂಬಾ ಸೊಗಸಾದ ಪತ್ರಿಕೆ…. ಲೇಖನ, ಕವಿತೆಗಳು ಚೆನ್ನಾಗಿ ಮೂಡಿಬ೦ದಿವೆ…..

Leave a Reply

Your email address will not be published.


*