ದಾಂಡೇಲಿಯಲ್ಲಿ ಇಲ್ಲಿಯವರೆಗೆ ಆರು ಜನರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಅವರಲ್ಲಿ ಐವರೂ ಈಗಾಗಲೇ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆ ಸೇರಿದ್ದಾರೆ.
ಬುಧವಾರ ರಾತ್ರಿ. ದೆಹಲಿಯಿಂದ ಊರಿಗೆ ಆಗಮಿಸಿದ ಹಳೆದಾಂಡೇಲಿಯ 50 ವರ್ಷದ ಸಿ.ಆರ್.ಪಿ.ಎಪ್. (ಕೇಂದ್ರ ಶಶಸ್ತ್ರ ಮೀಸಲು ಪೊಲೀಸ್ ಪಡೆ) ಯೋಧನಲ್ಲಿ ಕೊರೊನಾ ಸೋಂಕು ದೃಢವಾಗಿದ್ದು ಆತನನ್ನು ಕಾರವಾರದ ಕಿಮ್ಸ್ ಕೊರೊನಾ ವಾರ್ಡಗೆ ದಾಖಲಿಸಲಾಗಿದೆ. ಇದೂ ಸೇರಿ ಇಲ್ಲಿಯವರೆಗೂ ಒಟ್ಟೂ ಆರು ಕೊರೊನಾ ಪ್ರಕರಣಗಳು ದಾಂಡೇಲಿಯಲ್ಲಿ ದಾಖಲಾದಂತಾಗಿದೆ.
ಹಿಂದೆ ಪಾಸಿಟಿವ್ ಬಂದು ಆಸ್ಪತ್ರೆ ಸೇರಿದ್ದ ಐವರೂ ಸಹ ಗುಣಮುಖರಾಗಿ ಮನೆ ಸೇರಿದ್ದಾರೆ. ಹಳಿಯಾಳ ರಸ್ತೆಯ 9 ವರ್ಷದ ಮಗು ಸಹ ನಿನ್ನೆ ಗುಣ ಮುಖಳಾಗಿ ಮನೆಗೆ ಬಂದಿದ್ದಾಳೆ. ಈ ಮಗುವಿನ ಸಂಪರ್ಕದಲ್ಲಿದ್ದು ಕ್ವಾರೆಂಟೈನ್ ಒಳಗಾಗಿದ್ದವರೆಲ್ಲರ ಗಂಟಲು ದ್ರವದ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ದಾಂಡೇಲಿ ಸದ್ಯ ಸಮಾದಾನದ ನಿಟ್ಟುಸಿರುವ ಪಡುವಂತಾಗಿದೆ.
Be the first to comment