ಅಪ್ಪನೆಂಬ ಹೆಗ್ಗಳಿಕೆ
ಅವ್ವನಿಗೆ ನಾಯಕನಾಗಿ ಕುಟುಂಬಕ್ಕೆ ಕಾವಲು ಬದುಕು ಬಾಳಿಗೆ ಹೆಸರಾಗಿ
ನಾ ಕಂಡ ಮೊದಲ ವ್ಯಕ್ತಿ, ವ್ಯಕ್ತಿತ್ವ …
ಅಮ್ಮ ಹೊತ್ತಿದ್ದು ಒಂಭತ್ತು ತಿಂಗಳು
ಅಪ್ಪ ಹೊತ್ತಿದ್ದು ಅವನು ಇಲ್ಲವಾಗುವರೆಗೊ
ನನ್ನ ಆಟಕ್ಕ ಕೀಲು ಕುದುರೆಯಾಗಿ
ಊರು ಸುತ್ತಲು ಹೆಗಲ ಗಾಡಿಯಾಗಿ
ಜಾತ್ರೆ ತೇರಿನ ಹೂ ಹಣ್ಣುಗಳಿಗಾಗಿ ಏಣಿಯಾಗಿದ್ದು
ಆಡಿಸಿ ನಲಿಸಿ ನಕ್ಕು ನಕ್ಕಿದ್ದು….!
ನಾ ಹಠಮಾಡಿ ಕೇಳಿದ್ದು ಅಪ್ಪ ಇಲ್ಲವೆಂದಾಗ
ಅವ್ವನ ಶಿಫಾರಸ್ಸಿಗೆ ಮುನಿಸಿಗೆ ಅದು ಮುಂಜೂರಾಗಿದ್ದು
ನಮ್ಮ ಕನಸುಗಳಿಗೆ ಇಂಧನ
ಮನಸಿಗೆ ಸಂತಸದ ಚಿಲುಮೆ….!
ಅಪ್ಪನ ಜವಾಬ್ದಾರಿಯನ್ನು ಅರಿಯಲು
ನಾನು ಅಪ್ಪನಾಗಲೇಬೇಕಾಯಿತು
ಬದುಕಿನ ನೈಜ ಸತ್ಯವನು ಹುಸಿ ಕೋಪದಲಿ
ಹೇಳಿದ್ದು ಬದುಕಿನ ಮಾರ್ಗಗಲ್ಲು
ಕೊಟ್ಟ ಎರೆಡೆಟ್ಟು ಬದುಕಿನ ನಿಲುಗನ್ನಡಿ…!
ಅಪ್ಪ ಹೋಗುವರೆಗೂ ಅಪ್ಪ ಅರ್ಥವಾಗಲಿಲ್ಲ
ಅಪ್ಪ ಬದುಕಿದ್ದು ತನಗಾಗಿಯೇ ನಮ್ಮಗಾಗಿಯೇ ಬಾರಿ ಪ್ರಶ್ನೆ ಅಪ್ಪ ಎತ್ತರದಲ್ಲಿದ್ದ
ಮಗ ಬಂದು ಕರೆದಾಗಲೇ ಎಚ್ಚರವಾಗಿದ್ದು
ಅಪ್ಪನ ಫೋಟೋ ಕಣ್ಣ ಮುಂದಿತು
ಕಣ್ಣುಗಳು ಹನಿ ತುಂಬಿಕೊಂಡಿದ್ದವು… !
Be the first to comment