ರಾಷ್ಟ್ರೀಯ ತಂದೆಯಂದಿರ ದಿನಾಚರಣೆ ಸಮಿತಿಯ ಪ್ರಕಾರ 1910ರಲ್ಲಿ ವಾಷಿಂಗ್ಟನ್‌ನಲ್ಲಿ ಮೊದಲ ಬಾರಿಗೆ ತಂದೆಯಂದಿರ ದಿನಾಚರಣೆ ಪ್ರಾರಂಭಿಸಿದ್ದು, ಪ್ರತಿವರ್ಷ ಜೂನ್ ತಿಂಗಳ ಮೂರನೇ ರವಿವಾರ “ವಿಶ್ವ ಅಪ್ಪಂದಿರ ದಿನ” ಎಂದು ಆಚರಿಸಲಾಗುತ್ತದೆ. ಈ ದಿನ ತಂದೆಯ ತ್ಯಾಗ, ಕುಟುಂಬದ ಸುಖಕ್ಕಾಗಿ ಆತ ಪಡುವ ಕಷ್ಟ ಎಲ್ಲವನ್ನೂ ಸ್ಮರಿಸುತ್ತಾ ಆತನಿಗೆ ಅಭಿನಂದನೆ ಮತ್ತು ಗೌರವ ಸಲ್ಲಿಸಲಾಗುತ್ತದೆ.
ಬದುಕಿಗೆ ಅರ್ಥ, ಸಮಾಜದಲ್ಲಿ ಅಸ್ತಿತ್ವವನ್ನು ಒದಗಿಸಿಕೊಟ್ಟವರು ಅಪ್ಪ. ಈ ಅಪ್ಪ ಎಂಬ ಅಪರೂಪದ ಮನುಷ್ಯ ಅಮ್ಮನಂತೆ ಸಲುಗೆಯಿಂದ ಇರುವುದು ಕಡಿಮೆ. ಹೀಗಾಗಿ ಅಪ್ಪನಿಗೆ ಸಲ್ಲಬೇಕಾದ ಪ್ರೀತಿಯ ಪಾಲು ಕೂಡ ಅಮ್ಮನತ್ತವೇ ಹರಿದು ಬಿಡುತ್ತದೆ. ಮಕ್ಕಳ ಭವಿಷ್ಯಕ್ಕಾಗಿ ಶಿಸ್ತಿನ ಸಿಪಾಯಿಯ ಪಾತ್ರ ನಿರ್ವಹಿಸುವ ಆತ ಜೀವನದುದ್ದಕ್ಕೂ ಕೊಂಚ ಗಡುಸಾಗಿಯೇ ಕಾಣಿಸಿಕೊಳ್ಳುತ್ತಾನೆ. ಆದರೆ ಅವನಲ್ಲಿಯೂ ಆಕಾಶದಷ್ಟು ಪ್ರೀತಿ, ವಾತ್ಸಲ್ಯ, ಮಮತೆಯಿರುತ್ತದೆ. ಅವುಗಳನ್ನು ನಮ್ಮ ಮೂಲಕ ನನಸು ಮಾಡಿಕೊಳ್ಳುವ ಪ್ರಯತ್ನ ಆತನನ್ನು ಕೊಂಚ ಕಠಿಣನನ್ನಾಗಿ ಮಾಡುತ್ತದೆ
(ಕೊಡುಗೆ: ಉದಯವಾಣಿ)
Be the first to comment