ಬೀರಣ್ಣನ ಚುಟುಕು- ಕುಟುಕು…

ಅಧ್ಯಾತ್ಮ
ತತ್ವ-ಪರತತ್ವ ಮೀಮಾಂಸೆ ಅಧ್ಯಾತ್ಮ.
ಎಂದು ನುಡಿ ದೆಚ್ಚರಿಸಿತೆನ್ನಂತರಾತ್ಮ.
ಇಹ-ಪರದ ಸ್ಥೂಲ-ಸೂಕ್ಷ್ಮಗಳ ಭಾವಾರ್ಥ;
ಅರಿಯದೇ ವ್ಯಾಖ್ಯಾನ ಮಾಡುವುದು ವ್ಯರ್ಥ.

ಅಧ್ಯಾತ್ಮ.
ನಿಲುವಿಗೇ ಜಿಗಿಯಲಾಗದ ಬೆಕ್ಕು ಗಗನ
ಜಿಗಿಯಲೆತ್ನಿಸಿದಂತೆ ನನ್ನೀ ಪ್ರಯತ್ನ.
ಅಧ್ಯಾತ್ಮ ವಿಷಯವೇ ಕಬ್ಬಿಣದ ಕಡಲೆ;
ಅರ್ಥೈಸಿಕೊಂಡವಗೆ ಬೆಂದ ನೆಲಗಡಲೆ.

ಆತ್ಮ-ಪರಮಾತ್ಮ.
ಆತ್ಮವೆನ್ನುವುದು ಪರಮಾತ್ಮ ನೊಂದಂಶ,
ಪ್ರತಿ ಜೀವಿಯಲ್ಲಿರುವ ಅಮರ ಅವಿನಾಶ.
ಅವಗಿಲ್ಲ ಬಾಹ್ಯ ಶಕ್ತಿಗಳಿಂದಪಾಯ,
ದೇಹವಳಿದಾಕ್ಷಣಕೆ ಜೀವಾತ್ಮ ಮಾಯ.

ಉಪವಾಸ.
ವಾರದಲ್ಲೊಂದು ದಿನ ಮಾಡು ಉಪವಾಸ.
ಹೊಟ್ಟೆಯೊಳಗಪಚನ ಪದಾರ್ಥ ನಿ:ಶ್ಶೇಷ.
ಪಚನಾಂಗಕಾಗಾಗ ದೊರೆವ ವಿಶ್ರಾಂತಿ,
ಪುನ:ಶ್ಚೇತನದಿ ಚುರುಕಾಗಿರಲು ಈಟಿ

ಬೀರಣ್ಣ ನಾಯಕ, ಹಿರೇಗುತ್ತಿ (ಹೆರವಟ್ಟಾ) ಕುಮಟಾ
About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*