ಒಂದು ಕಾಲದಲ್ಲಿ ನಿರುದ್ಯೋಗಿ ಯುವಜನರ ಸ್ವಯಂ ಉದ್ಯೋಗವಾಗಿಯೇ ಬೆಳೆದು ನಿಂತಿದ್ದ ಟೆಲಿಪೋನ್ ಎಸ್.ಟಿ.ಡಿ. ಬೂತ್‌ಗಳು ಇಂದು ಭಾಗಶಹ ಕಣ್ಮರೆಯಾಗಿವೆ. ಮೊಬೈಲ್ ಎಂಬ ಮಾಯೆ ಈ ಟೆಲಿಪೋನ್ ಬೂತಗಳನ್ನು ನುಂಗಿ ಹಾಕಿದೆ ಎನ್ನಬಹುದು.
ಹೆಚ್ಚೆಂದರೆ ಹತ್ತು-ಹದಿನೈದು ವರ್ಷಗಳ ಹಿಂದಿನ ಒಂದು ಕಾಲವಿತ್ತು. ಈ ಟೆಲಿಪೋನ್ ಎಸ್.ಟಿ.ಡಿ. ಬೂತ್ ನಡೆಸುವುದೇ ಒಂದು ಸ್ವಯಂ ಉದ್ಯೋಗವಾಗಿತ್ತು. ಒಂದೊಂದು ನಗರ ಪ್ರದೇಶದಲ್ಲಿಯೂ ಅದೆಷ್ಟೂ ನಿರುದ್ಯೋಗಿಗಳು ಈ ಎಸ್.ಟಿ.ಡಿ. ಬೂತ್ ನಡೆಸುವುದನ್ನೇ ಉದ್ಯೋಗವನ್ನಾಗಿಸಿಕೊಂಡಿದ್ದರು. ಕೊನೆ ಕೊನೆಗಂತೂ ಈ ಎಸ್ಟಿಡಿ ಗ್ರಾಮೀಣ ಪ್ರದೇಶದವರೆಗೂ ತಲುಪಿತ್ತು. ಕಿರಾಣಿ ಅಂಗಡಿಯವನೂ ಸಹ ತನ್ನ ಅಂಗಡಿಯೆದುರು ಒಂದುಟೆಲಿ ಪೋನ್ ಬೂತ್ ಹಾಕಿ ಉಪ ದಂದೆ ಮಾಡಿಕೊಳ್ಳುತ್ತಿದ್ದ. ಎಸ್‍ಟಿಡಿ ಬೂತ್‍ಗಳು ಕೇವಲ ದೂರವಾಣಿ ಕರೆ ಮಾಡುವ ಒಂದು ಮಾದ್ಯಮವಷ್ಟೇ ಆಗಿದೇ ಹಲವು ರೀತಿಯ ಸಂಪರ್ಕ ಸೇತುವಾಗಿದ್ದವು. ಪ್ರೇಮಿಗಳಿಗಂತೂ ಈ ಟೆಲಿಪೋನ್ ಬೂತ್‍ಗಳು ನಿತ್ಯ ಸಂದೇಶ ವಿನಿಮಯ ಕೇಂದ್ರಗಳಂತಾಗಿದ್ದವು. ಇನ್ನು ಹಲವೆಡೆ ಎಸ್.ಡಿ.ಡಿ. ಬೂತ್‍ಗಳೆದುರು ಜನರ ಸಾಲೋ ಸಾಲು.
ಇದರಜೊತೆ ಒಂದು ರೂಪಾಯಿ ಹಾಕಿ ಮಾತನಾಡುವ ಕಾಯಿನ್ ಬಾಕ್ಸ್ ಕೂಡಾ. ಆದರೆ ಈಗ ಆ ಕಾಲ ಕಳೆದು ಹೋಗಿದೆ. ತಂತ್ರಜ್ಞಾನ ಬೆಳೆದಂತೆ ಬದುಕೂ ಬದಲಾಗುತ್ತದೆ ಎಂಬ ಮಾತಿನಂತೆ, ಈಗ ಎಲ್ಲರ ಕೈಗಳಲ್ಲಿ ಮೊಬೈಲ್‍ಗಳು ಬಂದಿವೆ. ಈಗ ಭಾಗಶಹ ಯಾರಿಗೂ ಎಸ್.ಟಿ.ಡಿ ಬೂತ್‍ಗಳ ಜರೂರತ್ತಿಲ್ಲ. ಹಾಗಾಗಿ ಕ್ರಮೇಣ ಎಸ್.ಟ.ಡಿ. ಬೂತ್‍ನ ದಂದೆ ನೇಪಥ್ಯಕ್ಕೆ ಸರಿದು ಹೋಯಿತು. ಈಗ ಎಲ್ಲೇ ಹುಡಿಕಿದರೂಎಸ್.ಟಿ.ಡಿ ಬೂತ್‍ಗಳು ಕಾಣುವುದಿಲ್ಲ. ಒಂದೊಮ್ಮೆ ಎಸ್ಟಿಡಿ ಇದ್ದರೂ ಅದರಲ್ಲಿ ಮಾತನಾಡುವುದೇ ಮೊಬೈಲ್‍ಗಿಂತ ದುಬಾರಿಯಾಗುತ್ತದೆ. ಅಲ್ಲಲ್ಲಿಈ ಎಸ್.ಟಿ.ಡಿ. ಬೂತ್‍ಗಳ ಪಳೆಯುಳಿಕೆಗಳು ಪಾಳು ಬಿದ್ದ ಸ್ಥೀತಿಯಲ್ಲಿ ಕಾಣುತ್ತಿವೆಯಷ್ಟೆ. ಮೊಬೈಲ್ ಎಂಬ ಮಾಯಾ ಯಂತ್ರದಲ್ಲಿ ಈ ಟೆಲಿಪೋನ್ ಬೂತ್‍ಗಳು ಕಾಣೆಯಾಗಿರುವುದಂತೂ ಸುಳ್ಳಲ್ಲ.
- ಒಡನಾಡಿ
Be the first to comment