ಕೆಲ ದಿನಗಳ ಹಿಂದಷ್ಟೇ ದಾಂಡೇಲಿಯ ಕೆ.ಎಸ್.ಆರ್.ಟಿ.ಸಿ. ಯ ಮಹಿಳಾ ಕಂಡಕ್ಟರ್ ಹಾಗೂ ಚಾಲಕರು ಬಸ್ ನಿಲ್ದಾಣದಲ್ಲಿಯೇ ನಡೆಸಿದ ಟಿಕ್ ಟಾಕ್ ನೃತ್ಯ ಎಲ್ಲೆಡೆ ವೈರಲ್ ಆಗಿ ಗಮನ ಸೆಳೆದಿತ್ತು. ಈಗ ಮತ್ತೆ ಅದೇ ಮಹಿಳಾ ಕಂಡಕ್ಟರ ಹಾಗೂ ಸಿಬ್ಬಂದಿಗಳು ಬಸ್ಸಿನೊಳಗಡೆಯೇ ನಡೆಸಿದ ಮತ್ತೊಂದು ಟಿಕ್ ಟಾಕ್ ನೃತ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಸಾರಿಗೆ ನೌಕರರು ಕರ್ತವ್ಯದ ಸಮಯದಲ್ಲಿ ಈ ಟಿಕ್ ಟಾಕ್ ಮಾಡಿದ್ದು ಸರಿನೋ… ತಪ್ಪೋ… ಪ್ರಶ್ನೆಗಳ ನಡುವೆಯೇ ಈ ವಿಡಿಯೋ ಜನರಿಗೆ ಸಖತ್ ಮನರಂಜನೆ ನೀಡುತ್ತಿರುವುದಂತೂ ಸುಳ್ಳಲ್ಲ.
Be the first to comment