ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರದರೂ ಸಹ ಕೆಲ ಪಾರಂಪರಿಕ ಸಂಗತಿಗಳು ಈಗಲೂ ಜೀವಂತಿಕೆಯನ್ನಿಟ್ಟುಕೊಂಡಿವೆ ಅವುಗಳಲ್ಲಿ ನಾಟಿ ವೈದ್ಯ ಕ್ಷೇತ್ರವೂ ಒಂದು. ಇಂದು ಬಹಳಷ್ಟು ಜನ ಈ ನಾಟಿ ವೈದ್ಯರ ಔಷಧಿಯನ್ನೆ ನೆಚ್ಚಿಕೊಂಡವರಿದ್ದಾರೆ, ಬಳಸಿ ಗುಣಮುಖರಾದವರೂ ಇದ್ದಾರೆ. ಹೀಗೆ ನಾಟಿ ಔಷಧಿ ನೀಡುವವರಲ್ಲಿ ಬಹಳಷ್ಟು ಹೆಸರು ಪಡೆದವರುಲ್ಲೊಬ್ಬರೆಂದರೆ ದಾಂಡೇಲಿಯ ವನಶ್ರೀ ನಗರದ ಇಸ್ಮಾಯಿಲ್ ಮಹಮ್ಮದ್ ಉಸ್ಮಾನ ಶೇಖ್ ( ಬಾಬಾ) ಕೂಡಾ ಒಬ್ಬರು.
ಇದು ಇವರಿಗೆ ಇವರ ತಂದೆ ಹಾಜಿ ಮಹಮ್ಮದ್ ಉಸ್ಮಾನ್ ಶೆಖರಿಂದ ಬಳುವಳಿಯಾಗಿ ಬಂದಿದ್ದು.ಅರಣ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಹಾಜಿ ಉಸ್ಮಾನ್ ಶೇಖರು ಅರಣ್ಯದಲ್ಲಿ ಸಿಗುವ ಗಿಡಮೂಲಿಕೆಗಳಿಂದ ಔಷಧಿ ನೀಡುವುದ್ನು ತಿಳಿದಿಕೊಂಡಿದ್ದರು. ಆ ವಿದ್ಯೆಯನ್ನು ಹಿರಿಯ ಮಗ ಬಾಬಾ ರವರಿಗೆ ಧಾರೆಯೆರೆದಿದ್ದರು. ಕಿಡ್ನಿಯಲ್ಲಿ ಕಲ್ಲು( ಸ್ಟೋನ್) ಹಾಗೂ ಜಾಯಿಂಡೀಸ್ (ಅರಿಶಿನ ಕುಂಡಿಕೆ) ಆದವರಿಗೆಇವರು ನೀಡುವ ಔಷಧಿ ಅತ್ಯಂತ ಪರಿಣಾಮಕಾರಿಯಾಗಿದೆ. ಇದರ ಜೊತೆಗೆ ಇವರು ಪೈಲ್ಸ್ (ಮೂಲವ್ಯಾಧಿ), ಸರ್ಪಸುತ್ತು ರೋಗಕ್ಕೂ, ಹೆಂಗಸರ ಮಾಸಿಕ ಸಮಸ್ಯೆ, ಧಮ್ಮು, ಸಂಧು ನೋವು ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಗೂ ಕೂಡಾ ಇವರು ಔಷಧಿ ನೀಡುತ್ತಾರೆ.
ಇವರಿಂದ ಔಷಧಿ ಪಡೆಯಲೆಂದು ಕೇವಲ ದಾಂಡೇಲಿಯಿಂದಷ್ಟೇ ಅಲ್ಲ. ಉತ್ತರಕನ್ನಡ ಜಿಲ್ಲೆಯೂ ಸೇರಿದಂತೆ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮುಂಬೈ, ಗೋವಾ ಹಾಗೂ ವಿವಿದೆಡೆಯಿಂದ ಜನ ಬರುತ್ತಾರೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಇವರ ಹತ್ತಿರ ಹಲವು ವೈದ್ಯರು, ನರ್ಸ್‍ಗಳೂ ಸೇರಿದಂತೆ ಆರೋಗ್ಯ ಕ್ಷೇತ್ರಲ್ಲಿ ಕೆಲಸ ಮಾಡುವ ಹಲವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಔಷಧಿ ಪಡೆದು ಗುಣ ಮುಖರಾಗಿರುವುದು ವಿಶೇಷವಾಗಿದೆ. ಇನ್ನುಇವರು ತಾವು ನೀಡಿದ ಔಷಧಿಗಾಗಿ ಹೆಚ್ಚಿನ ಹಣವನ್ನೇನೂ ಬೇಡಿಕೆ ಇಡುವುದಿಲ್ಲ. ಔಷಧಿ ಪಡೆದವರೇ ಕೊಟ್ಟು ಹೋಗುತ್ತಾರೆ. ಈಗೀಗ ಕಾಡಿನಿಂದ ಗಿಡ ಮೂಲಿಕೆ ಎಲೆಗಳನ್ನು ತರುವುದೂ ಕೂಡಾ ಕಷ್ಟದ ಕೆಲಸವಾಗಿದ್ದು, ಅವರ ಔಷಧಿಗೂ ಒಂದಿಷ್ಟು ಖರ್ಚಾಗುತ್ತದೆ. ಹಾಗಾಗಿ ಅದರ ಖರ್ಚನ್ನಷ್ಟೇ ಅವರು ಪಡೆಯುತ್ತಾರೆ.
‘ಇದು ನನಗೆ ನನ್ನತಂದೆಯವರು ಕೊಟ್ಟು ಹೋದ ಬಳುವಳಿ. ಇದನ್ನು ನಾನು ಒಂದು ಸೇವೆ ಎಂಬ ರೀತಿಯಲ್ಲಿ ಮಾಡುತ್ತಿದ್ದೇನೆ’ ಎನ್ನುವ ಇಸ್ಮಾಯಿಲ್ ಅಲಿಯಾಸ ಬಾಬಾರವರು ‘ಪಾರಂಪಾರಿಕ ಔಷಧಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ’ ಎನ್ನುತ್ತಾರೆ. ಈಗಾಗಲೇ ಈ ಔಷಧಿಗಳ ಬಗ್ಗೆ ತನ್ನ ಮಡದಿ ನೂರಝಹತ್ ಶೇಖ್ ಹಾಗೂ ಮಗ ಮಲ್ಲಿಕ ಶೇಖ್‍ನಿಗೂ ಹೇಳಿಕೊಟ್ಟಿದ್ದು ಅವರೂ ಸಹ ಔಷಧಿ ನೀಡಲಾರಭಿಸಿದ್ದಾರೆ. ಇದೀಗ ದಾಂಡೇಲಿಯ ವನಶ್ರೀ ನಗದ ‘ಅಮೀನ ಮಂಜಿಲ್’ ಇದು ನಾಟಿ ಔಷಧಿ ನೀಡುವ ಒಂದು ಆರೋಗ್ಯ ಕೇಂದ್ರದಂತಾಗಿರುವುದಂತೂ ಸುಳ್ಳಲ್ಲ.
- ಬಿ.ಎನ್. ವಾಸರೆ
Be the first to comment