ರಾಜ್ಯದ ಎಲ್ಲಾ ಜಂಗಲ್ ಲಾಡ್ಜ್ ಎಂಡ್ ರೆಸಾರ್ಟ, ಹಾಗೂ ಇದೇ ರೀತಿಯ ಆತಿಥ್ಯ ಸೇವೆಗಳನ್ನು ನೀಡುವ ಖಾಸಗಿ ಸಂಸ್ಥೆಗಳನ್ನು ಪ್ರಾಂಭಿಸುವಂತೆ ಜೂನ್ 8 ರಿಂದ ಪ್ರಾರಭಿಸುವಂತೆ ಸರಕಾರವೇನೋ ಆದೇಶಿಸಿದೆ. ಆದರೆ ಒಂದು ಕಡೆ ಮಳೆಗಾಲ, ಮತ್ತು ಕಡೆ ಕೊರೊನಾದ ಆತಂಕ ಕಾಲ. ಈ ಎರಡು ಸಂಗತಿಗಳಿಂದಾಗಿ ಮೊದಲಿನಂತೆ ಪ್ರವಾಸಿಗರೂ ಕೂಡಾ ಬರುವುದು ಕಷ್ಟ ಎಂದೇ ಹೇಳಲಾಗುತ್ತಿದೆ.
ಕೊರೊನಾ ದೇಶಕ್ಕೆ ಕಾಲಿಡುತ್ತದಂತೆಯೇ ದಾಂಡೇಲಿ ಸೇರಿದಂತೆ ಭಾಗಶಹ ಎಲ್ಲ ಪ್ರವಾಸಿ ಕೇಂದ್ರ, ಉದ್ಯಮ ನಗರಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿತ್ತು. ಮೊದಲಿಗೆ ಜಂಗಲ್ ಲಾಡ್ಜ್ ಹಾಗೂ ಎಲ್ಲ ರೆಸಾರ್ಟ ಹೋಮ್ ಸ್ಟೇಗಳನ್ನು, ಲಾಡ್ಜ್‍ಗಳನ್ನು ಬಂದ್ ಮಾಡಲಾಯಿತು. ಅಂದರೆ ಇಲ್ಲಿಗೆ ಇವು ಬಂದ್ ಆಗಿ ಸರಿ ಸಮಾರು ಮೂರು ತಿಂಗಳೆ ಕಳೆÉದಿದೆ. ಈ ರೆಸಾರ್ಟ, ಹೋಮ್ ಸ್ಟೇನ ಮಾಲಕರೂ ಸೇರಿದಂತೆ ಸಿಬ್ಬಂದಿಗಳೂ ಸಹ ತೊಂದರೆಗೊಳಗಾಗಿದ್ದರೆ. ಭಾಗಶಹ ಹಲವು ರೆಸಾರ್ಟಗಳಲ್ಲಿ ಹೊರ ಜಿಲ್ಲೆ, ರಾಜ್ಯದ ಜನರು ಕೆಲಸಕ್ಕಿದ್ದರು. ಈಗ ಅವರೆಲ್ಲ ಅವರವರ ಊರು ಸೇರಿಕೊಂಡಿದ್ದಾರೆ. ಈಗ ತಕ್ಷಣ ಎಂದರೆ ಅವರು ಕೊರೊನಾ ಭಯದಲ್ಲಿ ಕೆಲಸಕ್ಕೆ ಬರುವುದೂ ಕಷ. ಕೆಲಸಗಾರರು, ಅಡುಗೆಯವರು ಬಾರದಿದ್ದರೆ ನಡೆಯುವುದಾದರೂ ಹೇಗೆ ಎಂಬ ಪ್ರಶ್ನೆ ಮಾಲಕರದ್ದೂ ಆಗಿದೆ.
ಕೊರೊನಾ ಭಯದಿಂದ ಮನೆಯಿಂದ ಹೊರಗೆ ಹೋಗುವುದೇ ಕಷ್ಟ. ಹೀಗಿರುವಾಗ ಪ್ರವಾಸಿಗರೂ ಸಹ ಈ ಕೊರೊನಾ ಆತಂಕದ ದಿನಗಳಲ್ಲಿ ಪ್ರವಾಸಕ್ಕೆಂದು ಬಂದು ರೆಸಾರ್ಟ, ಹೋಮ್ ಸ್ಟೇಗಳಲ್ಲಿ ವಾಸ್ತವ್ಯವಿರುವುದು ದೂರದ ಮಾತಾಗಿದೆ. ಅದರಲ್ಲೂ ಒಂದೊಮ್ಮೆ ಪ್ರವಾಸಿಗರು ಬಂದರಾದರೂ (ಕೆಲ ಬೆರಳೇಣೆಕೆಯಷ್ಟು) ಸರಕಾರ ಹಾಗೂ ಆರೋಗ್ಯ ಇಲಾಖೆಯ ಕೆಲ ನಿಯಮಗಳ ಪಾಲನೆಯೂ ಸಹ ಕಿರಿಕಿರಿಯಾಗಲಿವೆ.
ಇನ್ನು ಮಳೆಗಾಲ ಆರಭವಾಗಿದೆ. ಪ್ರತೀ ಮಳೆಗಾಲದಲ್ಲಿ ರೆಸಾರ್ಟ ಹೋಮ್ ಸ್ಟೇಗಳಿಗೆ ಜನ ಬರುವುದೇ ಕಡಿಮೆ. ಅದನ್ನು ಆಪ್ ಸೀಜನ್ ಎಂದೇ ಕರೆಯುತ್ತಾರೆ ಪ್ರವಸೀದ್ಯಮದಲ್ಲಿ ಹೀಗೆ ಮಳೆಗಾಲವಿರುವಾಗ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಿರುತ್ತದೆ. ಹಾಗಾಗಿ ಒಂದು ಕಡೆ ಕೊರೊನಾ ಮತೊಂದು ಕಡೆ ಮಳೆಗಾಲ ಈ ಎರಡ ಸಂದಿಗ್ಧ ಸ್ಥಿತಿಯಿಂದಾಗಿ ಪ್ರವಾಸಿಗರು ವಿರಳವಾಗಲಿದ್ದಾರೆ. ಒಂದೊಮ್ಮೆ ರೆಸಾರ್ಟ ಹೋಮ್ ಸ್ಟೇ ಪ್ರಾರಂಭಿಸಿದರೆ ಸಿಬ್ಬಂದಿಗಳ ವೇತನ ನೀಡುವುದು ಹಾಗೂ ನಿರ್ವಹಣೆ ಮಾಡುವುದೂ ಕಷ್ಟವಾಗಲಿದೆ ಎನ್ನುತ್ತಿದ್ದಾರೆ ಕೆಲ ಮಾಲಕರು.
ಆನ್‍ಲೈನ್ ಬುಕ್ಕಿಂಗ್ ಆಗ್ತಿಲ್ಲ
ಪ್ರವಾಸೋದ್ಯಮಕ್ಕೆ ಆನ್‍ಲೈನ್ ಬುಕ್ಕಿಂಗ್ ಇದು ದೊಡ್ಡ ಸಂಪರ್ಕ. ಇದರಿಂದ ಬರುವ ಪ್ರವಾಸಿಗರೇ ಹೆಚು. ಸರಕಾರ ರೆಸಾರ್ಟಗಳ ಆರಂಭಕ್ಕೆ ಅನುಮತಿ ನೀಡಿದೆಯಾದರೂ ಇನ್ನೂ ಕೂಡಾ ರೆಸರ್ಟಗಳ ವೆಬ್‍ಸೈಟ್‍ಗಳಲ್ಲಿ ಆನ್‍ಲೇನ್ ಎನ್‍ಕ್ವಾಯಿರಿಯಾಗಲೀ, ಬುಕ್ಕಿಂಗ್ ಆಗಲೀ ಪ್ರಾರಂಭವಾಗಿಲ್ಲ. ಸ್ಥಳೀಯರು ರೆಸಾರ್ಟನಲ್ಲಿ ವಾಸ್ತವ್ಯವಿರುವುದಿಲ್ಲ.
ಕ್ವಾರೆಂಟೈನ್ ನಿಯಮ ಜಾರಿಯಿದೆ:
ಹೊರ ರಾಜ್ಯದಿಂದ ಬರುವವರಿಗೆ ಈಗಲೂ ಕ್ವಾರೆಂಟೈನ್ ನಿಯಮ ಜಾರಿಯಿದೆ. ಹಾಗೂ ಇ ಪಾಸ್ ಕೂಡಾ ಕಡ್ಡಾಯವಾಗಿದೆ. ಈ ಎರಡು ನಿಯಮ ಚಾಲ್ತಿಯಲ್ಲಿರುವವರೆಗೆ ಪ್ರವಾಸಿಗರು ಬರುವುದು ಬಹಳ ಕಷ್ಟ. ಒಂದೊಮ್ಮೆ ಕ್ವಾರೆಂಟೈನ್‍ಗೊಳಗಾದರೆ ಎಂಬ ಭಯ ಪ್ರವಾಸಿಗರಲ್ಲಿ ಇದ್ದೇ ಇರುತ್ತದೆ. ಜೊತೆಗೆ ಸರಕಾರ ಲಾಕ್‍ಡೌನ್ ಸಮಯದಲ್ಲಿ ಹೆಚ್ಚು ಕೊರೊನ ಸಂಪರ್ಕಿತರನ್ನು ಹೊಂದಿದ್ದ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಮದ್ಯಪ್ರದೇಶ, ರಾಜಸ್ತಾನಗಳಿಗೆ ಹೆಚ್ಚಿನ ನಿಶೇಧ ಹೇರಿತ್ತು. ಈ ರಾಜ್ಯಗಳಿಂದ ಯಾವ ಸಂಪರ್ಕ ಇರ ಕೂಡದೆಂಬ ಆದೇಶ ಮಾಡಿತ್ತು. ಪ್ರವಸೋದ್ಯಮಕ್ಕೆ ಹೊರ ರಾಜ್ಯದ ಜನರೇ ಹೆಚ್ಚಿಗೆ ಬರಬೇಕು. ಅದರಲ್ಲೂ ದಾಂಡೇಲಿಗೆ ಕೇರಳಾ, ಮಹಾರಾಷ್ಟ್ರ ತಮಳುನಾಡಿನಿಂದಲೆ ಹೆಚ್ಚಿನ ಜನರು ಬರುವುದು. ಈಗ ಈ ನಿಯಮವಿರುವಾಗ ಹೊರ ರಾಜ್ಯದ ಪ್ರವಾಸಿಗರು ಬರುವುದು ಅಸಾಧ್ಯವಾಗುತ್ತದೆ. ಈ ಕಾರಣಗಳಿಂದ ಪ್ರವಾಸಿಗರು ಬರುವುದು ಕಷ್ಠ ಎನ್ನಲಾಗುತ್ತಿದೆ.
ಬಹಳ ಕಷ್ಠದ ಸಮಯ
ಈಗಾಗಲೇ ಮೂರು ತಿಂಗಳು ಕೊರೊನಾ ಲಾಕ್‍ಡೌನ್ ರೆಸಾರ್ಟಗಳು ಬಂದಾಗಿದ್ದವು. ಸೀಜನ್‍ನಲ್ಲಿ ಬಂದ್ ಆಗಿದ್ದರಿಂದ ಬಹಳ ನಷ್ಠ ಎಲ್ಲ ರೆಸಾರ್ಟ, ಹೋಮ್‍ಸ್ಟೇ ಮಾಲಕರಿಗಾಗಿದೆ. ಈಗ ಸರಕಾರ ಆರಭಿಸಲು ಹೇಳಿದೆ. ನಾವು ಸರಕಾರದ ನಿಮಾವಳಿಯಂತೆ ರೆಸಾರ್ಟ ಪ್ರಾರಂಭಿಸಬಹುದು. ಆದರೆ ಕೊರೊನಾ ಮತ್ತು ಮಳೆಗಾಲದ ಕಾರಣಕೆ ಹಿಂದಿನ ಹಾಗೆ ಪ್ರವಾಸಿಗರು ಬರುವುದು ಸಾದ್ಯವುಲ್ಲದ ಮಾತು. ಬಹಳ ಕಷ್ಟದ ಸಮಯ ಇದಾಗಿದೆ.
–ಶ್ರೀಪತಿ ಭಟ್ಟ, ಹಾರ್ನಬಿಲ್ ರೆಸಾರ್ಟ ಮಾಲಕರು, ಗಣೇಶಗುಡಿ
ಸಿದ್ದತೆ ಮಾಡಿಕೊಂಡಿದ್ದೇವೆ
ಸರಕಾರ ಜಂಗಲ್ ಲಾಡ್ಜ್ ರೆಸಾರ್ಟನ್ನು ಪ್ರಾಂಭಿಸಲು ನಿರ್ದೇಶಿಸಿರುವಂತೆಯೇ ನಾವು ಸೋಮವಾರದಿಂದ ಪ್ರಾಂಭಿಸಲು ಅವಶ್ಯವಿರುವ ಎಲ್ಲ ಸಿದ್ದತೆ ಮಾಡಿಕೊಂಡಿದ್ದೇವೆ. ಸರಕಾರ ಹಾಗೂ ಆರೋಗ್ಯ ಇಲಾಖೆಯ ನಿಯಮ ಪಾಲಿಸಲಾಗುವುದು, ಬರುವ ಪ್ರವಾಸಿಗರಿಗೂ ಸಹ ನಿಯಮ ಪಾಲಿಸಲು ಹೇಳಲಾಗುವುದು.
-ಪಂಪಾಪತಿ, ವ್ಯವಸ್ಥಾಪಕರು, ಜಗಲ್ ಲಾಡ್ಜ್ ಎಂಡ್ ರೆಸಾರ್ಟ, ದಾಂಡೇಲಿ
- ಒಡನಾಡಿ ಸುದ್ದಿ
Be the first to comment