ಕಾರ್ಮಿಕ ಸಚಿವ ಹೆಬ್ಬಾರಿಂದ ಅಂಕೋಲಾದಲ್ಲಿ ಪರಿಸರ ದಿನಾಚರಣೆ

ಅಂಕೋಲಾ: ಕಾರ್ಮಿಕ ಹಾಗೂ ಸಕ್ಕರೆ ಇಲಾಖಾ ಸಚಿವ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್‌ ಹೆಬ್ಬಾರವರು ಅಂಕೋಲಾ ತಾಲೂಕಿನ ಸತ್ಯಾಗ್ರಹ ಸ್ಮಾರಕ ಭವನದ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು

ಅಂಕೋಲಾ ಪುರಸಭೆ ಹಾಗೂ ಅರಣ್ಯ ಇಲಾಖೆಯವರು ಈ ಕಾಯಕ್ರಮ ಆಯೋಜಿಸದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶಿವರಾಂ ಹೆಬ್ನಾರವರು ಪರಿಸರ ರಕ್ಷಣೆ ಕೇವಲ ಸರಕಾರ ಹಾಗೂ ಇಲಾಖೆಯದ್ದಲ್ಲ. ಇದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದರು.

ಇದೇ ಸಂದಭದಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಹಾಗೂ ಆರ್.‌ ಎಸ್.ಪಿ.ಡಿ. ಯೋಜನೆಯಡಿಯಲ್ಲಿ ಗಿಡಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ, ಹಾಗೂ ಅಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*