ಪರಿಸರ ದಿನಾಚರಣೆಯ ಪ್ರಯುಕ್ತ ಬೀರಣ್ಣ ನಾಯಕರ ಚುಟುಕುಗಳು

ಪರಿಸರ ದಿನಾಚರಣೆ!
ವಿಶ್ವ ಪರಿಸರ ದಿನಾಚರಣೆಗೊಂದು ದಿನ!…..
ಅನುಸರಣೆಗಾಗಿ ಅನವರತ ಶ್ರಮಿಸೋಣ.
ಹಸಿರು ಪರಿಸರ ಜೀವ ಸಂಕುಲದ ಉಸಿರು.
ರಕ್ಷಿಸದಿರುಳಿದೀತೇ ಜೀವಿಗಳ ಹೆಸರು?!

ಹಸಿರೇ ಉಸಿರು.
ಹಸಿರು ಪರಿಸರದುಳಿವು ಜೀವಿಗಳ ಉಳಿವು.
ಪ್ರಕೃತಿ ಪರಿಸರ ರಕ್ಷಣೆಯಲಿರಲಿ ಒಲವು. ಹಸುರಿಂದ,ಫಲ,ಪುಷ್ಪದಿಂದ ಈ ಪ್ರಕೃತಿ
ನೀಡಿ ಹರಸದೆ ಕಷ್ಟ ಕೋಟಲೆಗೆ ಮುಕುತಿ.

ಮಳೆರಾಯನಾಗಮನ
ಮೊರೆಯಿಡುವ ಮುನ್ನ ಮಳೆರಾಯನಾಗಮನ!
ಹರ್ಷ ಪುಲಕಿತರಾಗಿ ತಕಧಿನ್ನ ತನನ!
ಜೀವ ಜಲದಿಂದ ಪ್ರಕೃತಿಯಲಿ ಚೈತನ್ಯ;
ಸ್ಫುರಿಸಿರುವ ವರುಣನೌದಾರ್ಯವೆ ಅನನ್ಯ!.

  • ಬೀರಣ್ಣ ನಾಯಕ, ಹಿರೇಗುತ್ತಿ
ಲೇಖಕರ ಪರಿಚಯ: ನಿವೃತ್ತ ಅದ್ಯಾಪಕರಾಗಿರುವ ಬೀರಣ್ಣ ನಾಯಕ ಹಿರೇಗುತ್ತಿಯವರು ತಮ್ಮ ಚುಟುಕುಗಳ ಮೂಲಕವೇ ಚಿರ ಪರಿಚಿತರಾದವರು. ಹಲವು ಚುಟುಕು ಸಂಕಲನ ಹಾಗೂ ಇತರೆ ಕೃತಿಗಳನ್ನು ಹೊರ ತಂದಿರುವ ಇವರು ಸದ್ಯ ಕುಮಟಾದ ಹೆರವಟ್ಟಾದಲ್ಲಿ ವಾಸಿಸುತ್ತಿದ್ದಾರೆ.
About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*