‘ದಲಿತ’ ಪದ ಬಳಕೆ ನಿಷೇಧ : ಪರಿಶಿಷ್ಟ ಜಾತಿ/ಪಂಗಡ ಎಂದೇ ಬಳಸಲು ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ವ್ಯವಹಾರದಲ್ಲಿಯೂ ‘ದಲಿತ’ ಎಂಬ ಪದವನ್ನು ಬಳಕೆ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.

ಕೇಂದ್ರ ಗೃಹ ಸಚಿವಾಲಯ ಮತ್ತು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ನಿರ್ದೇಶನದಂತೆ ರಾಜ್ಯ ಸರ್ಕಾರ ಈ ಮಹತ್ವದ ನಿರ್ಣಯ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಯಾವುದೇ ಕಡತ, ಪತ್ರ ವ್ಯವಹಾರ, ಆಡಳಿತ ಭಾಷೆ, ಪ್ರಮಾಣ ಪತ್ರ ಸೇರಿದಂತೆ ಇನ್ಯಾವುದೇ ವಿಚಾರಗಳಲ್ಲಿಯೂ ದಲಿತ ಪದ ಬಳಕೆ ಸಲ್ಲ. ಬದಲಾಗಿ ಪರಿಶಿಷ್ಟ ಜಾತಿ/ಪಂಗಡ ಎಂದೇ ಬಳಕೆ ಮಾಡಬೇಕು ಎಂಬುದಾಗಿ ಸಮಾಜ ಕಲ್ಯಾಣ ಇಲಾಖೆ ಕೂಡಾ ಇದಕ್ಕೆ ಸ್ಪಷ್ಟೀಕರಣ ನೀಡಿದೆ.

ಈ ಬಗ್ಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸಹ ಮಾತನಾಡಿದ್ದು, ಹರಿಜನ, ಗಿರಿಜನ ಎಂಬ ಪದಗಳ ಮೂಲಕವೂ ಪಂಗಡಗಳ ಗುರುತಿಸುವಿಕೆ ಮಾಡಬಾರದು. ಬದಲಾಗಿ ಎಸ್ ಸಿ, ಎಸ್ ಟಿ ಎಂದೇ ಇಂಗ್ಲಿಷ್ ಭಾಷೆಯಲ್ಲಿ ಬಳಕೆ ಮಾಡಬಹುದು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ದಲಿತ ಎಂಬ ಪದವನ್ನು ಬಳಕೆ ಮಾಡಿ ಜಾತಿ ನಿಂದನೆಯಂತಹ ಪ್ರಕರಣಗಳು ನಡೆಯುತ್ತಲೇ ಇದೆ. ಇಂತಹ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ಸದೇಶದಿಂದ ಈ ಮಹತ್ವದ ಬದಲಾವಣೆಗೆ ಮುಂದಾಗಿರುವುದಾಗಿಯೂ ತಿಳಿದು ಬಂದಿದ್ದು, ಇತರ ಭಾಷೆಗಳಲ್ಲಿ ಈ ಪದಕ್ಕೆ ಪರ್ಯಾಯವಾಗಿ ಭಾಷಾಂತರ ಮಾಡಲಾದ ಶಬ್ಧಗಳನ್ನು ಬಳಕೆ ಮಾಡುವಂತೆಯೂ ತಿಳಿಸಲಾಗಿದೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*