ದಾಂಡೇಲಿಯ ಕೆ.ಎಸ್.ಆರ್.ಟಿ.ಸಿ ಘಟಕದವರು ಪ್ರಯಾಣಿಕರನ್ನು ಆಕರ್ಶಿಸಲು ಸ್ವಾಗತ ಕಮಾನೊಂದನ್ನು ನಿರ್ಮಿಸಿ ಗಮನ ಸೆಳೆದಿದ್ದಾರೆ
ಲಾಕ್‍ಡೌನ್ ಸಂಪೂರ್ಣವಾಗಿ ತೆರವಾಗಿದ್ದರೂ ಕೊರೊನಾ ಸೋಂಕಿನ ಭಯದಿಂದ ಬಸ್ಸುಗಳ ಮೇಲೆ ಓಡಾಡುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಹೊರಗಡೆ ಹೋಗುವವರು ಹಲವರು ಕಾರುಗಳ ಮೆಲೆ ಹೋಗಿ ಬರುತಿದ್ದಾರೆ. ಸಾರಿಗೆ ಇಲಾಖೆ ಕೆಲ ಮುಂಜಾಗೃತೆ ಕೈಗೊಂಡರೂ ಬಸ್ಸುಗಳಲ್ಲಿ ಹಿಂದಿನಂತೆ ಜನ ಮುಕ್ತವಾಗಿ ಪ್ರಯಾಣಿಸುತ್ತಿಲ್ಲ. ಹಾಗಾಗಿಯೇ ಏನೋ, ಹಿಂದೆಲ್ಲಾ ಪ್ರಾಯಾಣಿಕರ ಬಗ್ಗೆ ಅಷ್ಟೊಂದು ಕಾಳಜಿ ತೋರಿಸದ ಕೆ.ಎಸ್.ಆರ್.ಟಿ.ಸಿ ಇಂದು ಬಸ್ ನಿಲ್ದಾಣದಲ್ಲಿ ‘ಪ್ರಯಾÁಣಿಕರಿಗೆ ಸ್ವಾಗತ’ ಎಂಬ ಸ್ವಾಗತ ಕಮಾನು ಹಾಕಿ ಗಮನ ಸೆಳೆಯುತ್ತಿದೆ. ಈ ಕಮಾನು ನೋಡಿ ಅದೆಷು ್ಟಜನ ಪ್ರಯಾಣಿಕರು ಬಸ್ ಏರಲು ಬರುತ್ತಿದ್ದಾರೋ ಗೊತ್ತಿಲ್ಲ. ಆದರೆ ದಾಂಡೇಲಿ ಕೆ.ಎಸ್.ಆರ್.ಟಿ.ಸಿ ಘಟಕದವರು ಇಂತಹದ್ದೊಂದು ಕೆಲಸ ಮಾಡುವ ಮೂಲಕ ಜನರ ಗಮನ ಸೆಳೆದಿದ್ದಾರೆ. ಜೊತೆಗೆ ಈ ಕಮಾನಿನಲ್ಲಿ ಕೊರೋನಾ ಸೋಂಕಿನಿಂದ ದೂರವಿರಲು ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಚಿತ್ರ ಸಹಿತ ಬರೆದಿರುವುದೂ ಸಹ ಸ್ವಾಗತಾರ್ಹವೇ ಆಗಿದೆ. ಪ್ರಯಾಣಿಕರ ಮೇಲಿನ ಈ ಕಾಳಜಿ ಸಾರಿಗೆ ಇಲಾಖೆಗೆ ನಿರಂತರವಾಗಿದ್ದರೆ ಒಳ್ಳೆಯದ್ದು.
Be the first to comment