ದಾಂಡೇಲಿ: ಕೊರೊನಾ ರೋಗಾಣು ಸೋಂಕು ಬಂದಿದ್ದ ಕಾರಣಕ್ಕೆ ಕಾರವಾರದ ಕಿಮ್ಸ್ ಆಸ್ಪ್ಪತ್ರೆಗೆ ಸೇರಿದ್ದ ಗಾಂಧಿನಗರ ಪಠಾಣಗಲ್ಲಿಯ 34 ವರ್ಷಧ ಎಲೆಕ್ಟ್ರಿಶಿಯನ್‍ನ ಎರಡನೆಯ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಆತನನ್ನು ಮರಳಿ ದಾಂಡೇಲಿಯ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಗಾಂಧಿನಗರದ ಈ ವ್ಯಕ್ತಿ ( ಪಿ. 2847) ಯಾರ ಸಂಪರ್ಕದಲ್ಲಿರಲಿಲ್ಲ. ಹೊರಗಡೆಯೂ ಹೋಗಿ ಬಂದಿರಲಿಲ್ಲ. ಮನೆಯೊಳಗಡೆಯಿರುವಾಗ ಈತ ಜ್ವರ, ಶಿತ ಬಾಧೇಗೊಳಗಾಗಿದ್ದ. ಮೇ 20 ರಂದು ಆತ ದಾಂಡೇಲಿ ಸರಕಾರಿ ಆಸ್ಪತ್ರೆಗೆ ಜ್ವರ ತಪಾಸಣೆಗೆ ಬಂದಿದ್ದ ಸಂದರ್ಭದಲ್ಲಿ ಆತನ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಕೆಲದಿನಗಳ ನಂತರ ಆತನ ಪರೀಕ್ಷಾ ವರದಿ ಬಂದಿದ್ದು ಅದು ಪಾಸಿವ್ ಎಂದು ತೋರಿಸಿದ್ದ ಕಾರಣ ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಲಾಗುತ್ತು. ನಂತರ ಕಾರವಾರ ಕಿಮ್ಸ್‍ಗೂ ಕಳುಹಿಸಲಾಗಿತ್ತು.
ನಂತರ ಮತ್ತೆ ಆತನ ಗಂಟಲು ದ್ರವದ ಪರೀಕ್ಷೆಗೆ ಕಳುಹಿಸಿದ್ದ ಸಂದರ್ಭದಲ್ಲಿ ಅದು ನೆಗೆಟಿವ್ ಎಂದು ಬಂದಿದೆ. ಕಾರವಾರದಲ್ಲಿ ಎರಡು ಮೂರು ದಿನ ಇದ್ದ ಆತನನ್ನು ಬುಧವಾರ ಮರಳಿ ದಾಂಡೇಲಿಗೆ ಕಳುಹಿಸಲಾಗಿದ್ದು, ಆತ ದಾಂಡೇಲಿ ಸರಕಾರಿ ಆಸ್ಪತ್ರೆಯಲ್ಲಿಯೂ ಇನ್ನೆರಡು ದಿನ ಚಿಕಿತ್ಸೆ ಪಡೆದ ನಂತರ ಮನೆಗೆ ಹೋಗುವ ಸಾಧ್ಯತೆಯಿದೆ.
ಆರಂಭದಲ್ಲಿ ಪಾಸಿಟಿವ್ ಬಂದು ಆತಂಕಕ್ಕೆ ಕಾರಣವಾಗಿದ್ದ ದ್ವಿತೀಯ ಸೋಂಕಿತ ಎಕೆಕ್ಟ್ರಿಶಿಯನ್‍ನ ಎರಡನೆಯ ಪರೀಕ್ಷಾ ವರದಿ ನೆಗೆಟಿವ್ ಬಂದಿರುವುದ ಇದೀಗ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಆದರೆ ಹೀಗೆ ಆಗುವ ಸಾದ್ಯತೆಗಳಿರುತ್ತವೆ. ವ್ಯಕ್ತಿಯೊಳಗಡೆ ರೋಗ ನಿರೋಧಕ ಶಕ್ತಿಯಿದ್ದರೆ ಪಾಸಿಟಿವ್ ಬಂದು ನಂತರ ಅಲ್ಲಿಯೇ ಕಡಿಮೆಯಾಗುವ ಸಾದ್ಯತೆಯಿದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಕ್ವಾರೆಂಟೈನ್‍ನಲ್ಲಿದ್ದವರ ಬಿಡುಗಡೆ: ಎರಡನೆಯ ಸೋಂಕಿತ ಗಾಂಧಿನಗರದ ಎಲೆಕ್ಟ್ರಿಶಿಯನ್‍ನ ಪ್ರಥಮ ಸಂಪರ್ಕದಲ್ಲಿದ್ದು ಕ್ವಾರೆಂಟೈನ್ ಸೇರಿದ್ದ 25 ಜನರನ್ನು ಬುಧವಾರ ಬಿಡುಗಡೆಗೊಳಿಸಿ ಮನೆಗೆ ಕಳುಹಿಸಲಾಗಿದೆ. ಇನ್ನು ಸಾಂಸ್ಥಿಕ ಕ್ವಾರೆಂಟೈನ್‍ನಲ್ಲಿ ಕೇರಳ ಮತ್ತು ತಮೀಳು ನಾಡಿನಿಂದ ಬಂದಿರುವ ಆರು ಜನರು ಮಾತ್ರ ಇದ್ದಿರುತ್ತಾರೆ ಎಂದು ತಹಶೀಲ್ದಾರ್ ಶೈಲೇಶ ಪರಮಾನಂದ ತಿಳಿಸಿದ್ದಾರೆ.
Be the first to comment