ಅಸಂಘಟಿತ ಕಾರ್ಮಿಕರಿಗೆ ಸರಕಾರದ ಕಿಟ್ ವಿತರಿಸಿದ ಸುನೀಲ್ ಹೆಗೆಡೆ

ದಾಂಡೇಲಿ:  ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯಿಂದ   ಸಂಕಷ್ಠದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಕೊಡ ಮಾಡಿದ ಆಹಾರ ಧಾನ್ಯಗಳ ಕಿಟ್‍ನ್ನು ಮಾಜಿ ಶಾಸಕ ಸುನೀಲ್ ಹೆಗಡೆಯವರು ದಾಂಡೇಲಿಯಲ್ಲಿ ವಿತರಿಸಿದರು. 

  ನಗರದ ಸವಿತಾ ಸಮಾಜ, ಪೇಂಟರ್ ಅಸೋಶಿಯೇಶನ್,  ಛಾಯಾಚಿತ್ರ ಗ್ರಾಹಕರ ಸಂಘ,  ಪರಿಜ್ಞಾನಾಶ್ರಮ ಶಾಲೆಯ ಹಂಗಾಮಿ ಶಿಕ್ಷಕರು,  ದಾಂಡೇಲಪ್ಪ ಪ್ರಯಾಣಿಕರ ವಾಹನ, ಮಾಲಕರ ಚಾಲಕರ ಸಂಘ, ಭಾರತೀಯ ಸಂಗೀತ ವಿದ್ಯಾಲಯದ ಶಿಕ್ಷಕರು ಸೇರಿದಂತಂತೆ ಒಟ್ಟೂ  290 ಕಿಟ್‍ನ್ನು ವಿತರಿಸಿದರು.

  ಈ ಸಂದರ್ಭದಲ್ಲಿ ಮಾತನಾಡಿದ ಸುನೀಲ ಹೆಗಡೆ ಕೊವಿಡ್ 19 ಕೊರೊನಾ ವೈರಾಣುವಿನಿಂದ ಇಡೀ ದೇಶ-ವಿಶ್ವವೇ ತತ್ತರಿಸಿದೆ.  ಇದರ ನಿಯಂತ್ರ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಸಂಕಷ್ಠದಲ್ಲಿರುವ ಜನರಿಗಾಗಿ ಹಲವು ಸಹಾಯ ಮಾಡುತ್ತಿದೆ.  ಆಟೋರಿಕ್ಷಾ, ಸವಿತಾ ಸಮಾಜ, ಕಟ್ಟಡ ಕಾರ್ಮಿಕರು ಸೇರಿದಂತೆ ಹಲವು ಅಸಂಘಟಿತ ವಲಯಗಳಿಗೆ ಸರಕಾರ ಧನ ಸಹಾಯ ಘೋಷಿಸಿದೆ. ಇದೀಗ ಕಾರ್ಮಿಕ ಸಚಿವರಾದ ಶಿವರಾಂ ಹೆಬ್ಬಾರವರು ತಮ್ಮ ಖಾತೆಯಿಂದ ಬಡ ಕಾರ್ಮಿಕರಿಗಾಗಿ ಈ ಕಿಟ್ ಕೊಡುವ ಯೋಜನೆಯನ್ನು ರಾಜ್ಯದಾದ್ಯಂತ ಹಮ್ಮಿಕೊಂಡಿದ್ದಾರೆ. ಆ ಕಿಟನ್ನು ಈಗ ವಿತರಿಸಲಾಗಿದ್ದು ಇದು ಸರಕಾರದ ಒಂದು ಅಳಿಲು ಸೇವೆಯಾಗಿದೆ. ಜನರು ಕೊರೊನಾ ನಿಯಂತ್ರಿಸುವಲ್ಲಿ ಸರಕಾರದ ನಿಯಮ ಪಾಲಿಸಬೇಕು. ಸಾಮಾಜಿಕ ಅಂತರವನ್ನಿಟ್ಟಿಕೊಂಡು ಜೀವನ ನಡೆಸಬೇಕು ಎಂದರು. 

  ಈ ಸಂದರ್ಭದಲ್ಲಿ ಭಾ.ಜ.ಪ ಅಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ, ಕಾರ್ಯದರ್ಶಿ ಗುರು ಮಠಪತಿ,  ಜಿಲ್ಲಾ ಕಾರ್ಯದರ್ಶಿ ಬಸವರಾಜ ಕಳಶೆಟ್ಟಿ,  ನಗರಸಭಾ ಸದಸ್ಯರಾದ ನರೇಂದ್ರ ಚೌಹಾಣ,   ಬುದ್ದಿವಂತಗೌಡ ಪಾಟೀಲ, ರೋಷನ್‍ಜಿತ್, ದಶರಥ ಬಂಡಿವಡ್ಡರ,  ವಿಜಯಕುಮಾರ ಕೋಲೇಕರ, ವಿಷ್ಣು ವಾಜ್ವೆ,  ಮಾದೇವಿ ಭದ್ರಶೇಟ್ಟಿ,  ರಮಾ ರವೀಂದ್ರ,  ಪ್ರಮುಖರಾದ ವಾಸುದೇವ ಪ್ರಭು,  ಮಂಜು ಪಾಟೀಲ, ರವೀಂದ್ರ ಷಾ, ರಫಿಕ ಹುದ್ದಾರ,  ಈರಯ್ಯ ಸಾಲಿಮಠ,  ಸುಭಾಸ ಅರವೇಕರ,  ಸಂಜು ಜಾಧವ್,  ಸಂತೋಷ್ ಸೋಮನಾಚೆ,  ಸುಧಾಕರ ರೆಡ್ಡಿ,  ಸುರೇಶ ಪಾಲನಕರ ಮುಂತಾದವರಿದ್ದರು. 

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*