‘ನನ್ನ ತಬಲಾದ ಮೇಲೆ ನನ್ನ ಕೈ ಬೆರಳು ಆಡಲಿಲ್ಲ ಅಂತಾದರೆ…, ತಬಲಾದ ಇಂಪಾದ ದನಿ ನನ್ನ ಕವಿಗೆ ಕೇಳಲಿಲ್ಲ ಅಂತಾದರೆ… ನನಗೆ ಆದಿನ ಕಳೆರಯುವುದೇ ಇಲ್ಲ. ತಬಲಾ ನನ್ನ ಸಂಪತ್ತು. ತಬಲಾ ನುಡಿಸುವುದೇ ನನ್ನ ಬದುಕು…’ ಎನ್ನುತ್ತಾರೆ ದಾಂಡೇಲಿಯ ಹಿರಿಯ ತಬಲಾ ವಾದಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕಲಾವಿದ ಉಸ್ತಾಧ ಕೆ.ಎಲ್. ಜಮಾದಾರ.
ಈ ಕಲಾವಿದನ ವಯಸ್ಸು 90 ವರ್ಷ. ಆದರೂ ಇವರ ಕಲಾ ಬದುಕಿನ ಉತ್ಸಾಹ ಇನ್ನೂ ಬತ್ತಿಲ್ಲ. ಈಗಲೂ ವಿವಿದೆಡೆ ತರಗತಿ ನಡೆಸುತ್ತ ತಬಲಾ ತರಬೇತಿ ನೀಡುತ್ತಿರುವ ಇವರು ಇದೀಗ ಕೊರೊನಾ ಲಾಕ್‍ಡೌನ್ ಕಾರಣದಿಂದಾಗಿ ಕಳೆದ ಮೂರು ತಿಂಗಳಿಂದ ಒಂದಿಷ್ಟು ಕಷ್ಟದಲ್ಲಿದ್ದಾರೆ.
ದಾಂಡೇಲಿಯ ವೆಸ್ಟ್‍ಕೋಸ್ಟ್ ಪೇಪರ್ ಮಿಲ್‍ನವರ ಸಂಗೀತ ಶಾಲೆUಗೆ ಗುರುಗಳಾಗಿ ಬೈಲಹೊಂಗಲದಿಂದ 1973ಕ್ಕೆ ಆಗಮಿಸಿದ ಜಮಾದಾರವರು 1990 ರವರೆಗೂ ಅಲ್ಲಿ ಸಂಗೀತ ಪಾಠ ನೀಡಿದರು. 1984 ರಲ್ಲಿ ನಿರಂತರ 54 ಘಂಟೆಗಳ ಕಾಲ ತಬಲಾ ನುಡಿಸಿ ದಾಖಲೆ ಬರೆದವರು. ಕಲಾಶೃಈ, ಆಶ್ವಾಸನ, ಪದ್ದಣ್ಣ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳನ್ನು ಮುಡಿಗೇರಿಸಿಕೊಂಡ ಇವರು 2015ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾದವರು.
ಸಂಗೀತ ಗುರುಗಳಾಗಿ 1990 ರಲ್ಲಿ ನಿವೃತ್ತರಾದ ನಂತರವೂ ಸಹ ತಮ್ಮ ಸಂಗೀತ ವಿದ್ಯೆಯನ್ನು ಆಸಕ್ತರರಿಗೆ ಧಾರೆಯುತ್ತ ಬಂದ ಇವರು ದಾಂಡೇಲಿ, ಹಳಿಯಾಳ, ಬೆಳಗಾವಿ, ಕದ್ರಾ, ಕೈಗಾಗಳಲ್ಲಿ ತಮ್ಮ ತಬಲಾ ತರಬೇತಿ ತರಗತಿಗಳನ್ನು ನಡೆಸಿದವರು. ಆತರಗತಿಗಳಿಂದ ಬರುವ ಆದಾಯವೇ ಅವರ ಬದುಕಿಗೆ ಆಸರೆಯೆಂಬಂತಾಗಿತ್ತು. 90ರ ಈ ಇಳಿವಯಸ್ಸಿನಲ್ಲಿಯೂ ಕಲಾ ಬದುಕಿನಲ್ಲಿ ಉತ್ಸಾಹ ಕಳೆದುಕೊಳ್ಳದೇ ದೂರದೂರುಗಳಿಗೆ ಹೋಗಿ ತರಬೇತಿ ನೀಡುತ್ತ ಬಂದಿದ್ದಾರೆ. ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಹಲವಾರು ವಿದ್ವಾಂಸರಿಂದ ಸೈ ಎನಿಸಿಕೊಂಡ ಇವರು ಎಂದಿಗೂ ಪ್ರಚಾರದ ಬೆನ್ನು ಬಿದ್ದು ಹೋದವರಲ್ಲ. ಇವರ ಶಿಷ್ಯರನೇಕರು ಇದೀಗ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದವರಿದ್ದಾರೆ.
ಮಡದಿ ಇಹಲೋಕ ತ್ಯಜಿಸಿ 15 ವರ್ಷಗಳಾಗಿದೆ. ಇವರಿಗೆ ಐವರು ಹೆಣ್ಣೂ ಮಕ್ಕಳು.. ಎಲ್ಲರ ಮದುವೆಯಾಗಿದೆ. ಓರ್ವ ಮಗಳೂ, ಅಳಿಯ ದಾಂಡೇಲಿಯಲ್ಲಿ ಇವರ ಜೊತೆಯಿದ್ದಾರೆ. ಕಲೆಯನ್ನೇ ಸಂಪತ್ತನ್ನಾಗಿಸಿಕೊಂಡ ಕೆ.ಎಲ್. ಜಮಾದರವರು ಬೇರೆ ಯಾವ ಸಂಪತ್ತನ್ನೂ ಗಳಿಸಿಲ್ಲ. ಇದೀಗ ಕಳೆದ ಮೂರು ತಿಂಗಳಿಂದ ಕೊರೊನಾ ಕಾರಣಕ್ಕೆ ಅವರ ಯಾವ ತರಗತಿಗಳೂ ನಡೆಯುತ್ತಿಲ್ಲ. ಕಾರ್ಯಕ್ರಮಗಳಂತೂ ಇಲ್ಲವೇ ಇಲ್ಲ. ಲಾಕ್‍ಡೌನ್ ಆಗಿ ಮನೆಯಲ್ಲಿರುವ ಕೆ.ಎಲ್. ಜಮಾದರವರು (9686134857) ತಮ್ಮ ಆತ್ಮ ಸಂತೋಷಕ್ಕಾಗಿ ತಬಲಾ ನುಡಿಸುತ್ತಿರುತ್ತಾರೆ. ಆ ಮೂಲಕ ನಾಳೆಯ ನೆಮ್ಮದಿಯ ಬದುಕನ್ನು ಕಾಣಲು ಪ್ರಯತ್ನಿಸುವ ಸಾಹಸ ಮಾಡುತ್ತಿದ್ದಾರೆ. ನಿಜಕ್ಕೂ ಈ ಹಿರಿಯ ಕಲಾವಿದನ ಬದುಕನ್ನು ಭದ್ರ್ರಗೊಳಿಸುವ ಕೆಲಸ ಎಲ್ಲರಿಂದಾಗಬೇಕು ಎಂಬ ಆಶಯ ನಮ್ಮದಾಗಿದೆ.
my name is babu i am regular reading Odanadi news .thanks for this .
i sent Rs. 10,000 to Jmadar Sir after reading your news . the money i sent to his son account . please check with Jamadhar Sir whether he recieved the money .
regards
BABU
SOUTH AFRICA
thank u sr