ಈ ಕ್ಷಣದ ಸುದ್ದಿ

ಇನ್ನು ಮುಂದೆ ಕಸಾಪ ಸದಸ್ಯತ್ವ ಆ್ಯಪ್ ನಲ್ಲಿ…
ಕನ್ನಡ ಸಾಹಿತ್ಯ ಪರಿಷತ್ತಿನ ಆ್ಯಪ್ ಲೋಕಾರ್ಪಣೆ

ಕನ್ನಡ ಸಾಹಿತ್ಯ ಪರಿಷತ್ತಿನ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ ಮೊಬೈಲ್ ಅಪ್ಲಿಕೇನ್ (ಕಸಾಪ ಆ್ಯಪ್ ) ಅಸ್ತಿತ್ವಕ್ಕೆ ಬಂದಿದ್ದು ಇನ್ನು ಮುಂದೆ ಕನ್ನಡ ಸಾಹಿತ್ಯ ಪರಿಷತ್ ನ ಸಮಗ್ರ ಮಾಹಿತಿಗಳ ಜೊತೆಗೆ, ಇನ್ನುಮುಂದೆ ಹೊಸದಾಗಿ ಅಜೀವ ಸದಸ್ಯರಾಗ ಬಯಸುವವರು ಕೂಡ ಇದೇ ಆ್ಯಪ್ ನಲ್ಲಿ ಸದಸ್ಯರಾಗುವ ಅವಕಾಶವನ್ನು ಕೂಡ ನೀಡಲಾಗಿದೆ. […]

ಈ ಕ್ಷಣದ ಸುದ್ದಿ

ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಷಿಯವರಿಗೆ ರಾಜ್ಯ ಸಚಿವರ ಸ್ಥಾನ ಮಾನ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಷಿಯವರಿಗೆ ರಾಜ್ಯ ಸಚಿವರ ದರ್ಜೆಗೆ ಸಮಾನವಾದ ಸ್ಥಾನ ಮಾನವನ್ನು ನೀಡಿ ಆದೀಶಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸೂಧರಣೆ ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿ ವೀರಭದ್ರ ಹಂಚಿನಳರವರು ಈ ಆದೇಶ ಹೊರಡಿಸಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು […]

ದಾಂಡೇಲಿ

ದಾಂಡೇಲಿಯಲ್ಲಿ ಜನಮನ ರಂಜಿಸಿದ ರಾಮಾಂಜನೇಯ ಹಾಗೂ ನಾಗಶ್ರೀ ಯಕ್ಷಗಾನ

ದಾಂಡೇಲಿ: ನಗರದ ಕಲಾಶ್ರೀ ಸಂಸ್ಥೆಯ ಆಶ್ರಯದಲ್ಲಿ ಕುಂದಾಪುರದ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ದಾಂಡೇಲಿಯ ವಿದ್ಯಾಧಿರಾಜ ಸಭಾಭವನದಲ್ಲಿ ನಡೆದ ರಾಮಾಂಜನೇಯ ಹಾಗೂ ನಾಗಶ್ರೀ ಎಂಬ ಯಕ್ಷಗಾನ ಜನಮನ ರಂಜಿಸುವಲ್ಲಿ ಯಶಸ್ವಿಯಾಯಿತು . ನಗರದ ಕಲಾಶ್ರೀ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ದಾಂಡೇಲಿಯಲ್ಲಿ […]

ಒಡನಾಡಿ ವಿಶೇಷ

ಪ್ರಾಮಾಣಿಕ ಸೇವೆಗೆ ಮತ್ತೊಂದು ಹೆಸರು ದೈಹಿಕ ಶಿಕ್ಷಣ ಪರಿವೀಕ್ಷಕ ಗಜಾನನ ನಾಯ್ಕ

ಸಾವಿರ ಆತ್ಮಬಲ, ಸಾಧಿಸುವ ವೀರ ಛಲನಿದ್ದೆಗೆಡಿಸಲು ಬಲ್ಲ, ನಿದ್ದೆ ಬಿಡಲೂ ಬಲ್ಲನಂಬಿದವರಿಗೆ ಜೀವ ಜೀವವನೇ ಕೊಡಬಲ್ಲನಗರೆಯ ನಗು ಮೊಗದ ಗಜಾನನನೆಂಬ ಕಲಿ ಮಲ್ಲ “ಮಾತು ಕಡಿಮೆ ದುಡಿಮೆ ಹೆಚ್ಚು” ಎಂಬ ಗಾದೆ ಮಾತಿಗಂಟಿದ ಮೌನ ಕಾಯಕಯೋಗಿಯಾಗಿ ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ ೩೬ ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು […]

ಈ ಕ್ಷಣದ ಸುದ್ದಿ

ಕರ್ತವ್ಯದ ಅವಧಿಯಲ್ಲಿ ಲೋಪವಾಗದಿರಲಿ: ಸರಕಾರಿ ನೌಕರರಿಗೆ ಕಟ್ಟು ನಿಟ್ಟಿನ ಆದೇಶ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ತಮ್ಮ ತಮ್ಮ ಕಚೇರಿಗಳಲ್ಲಿ ಕರ್ತವ್ಯದ ಅವಧಿಯಲ್ಲಿ ಯಾವುದೇ ರೀತಿಯ ಲೋಪ ಎಸಗದೆ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸತಕ್ಕದ್ದು ಎಂದು ರಾಜ್ಯ ಸರ್ಕಾರ ಕಟ್ಟುನಿಟ್ಟಾದ ಆದೇಶವನ್ನು ಹೊರಡಿಸಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾರವರು ರಾಜ್ಯ ಸರ್ಕಾರದ ಕಛೇರಿಗಳಲ್ಲಿ ನಿಗದಿತ […]

ಈ ಕ್ಷಣದ ಸುದ್ದಿ

ಉತ್ತರ ಕನ್ನಡ ಜಿಲ್ಲೆಯಲ್ಲೆರಡು ಬಹು ವಿಶೇಷತೆಯುಳ್ಳ (ಮಲ್ಟಿ ಸ್ಪೆಷಾಲಿಟಿ) ಆಸ್ಪತ್ರೆಯಾಗಲೇಬೇಕು

ದಾಂಡೇಲಿ: ಭೌಗೋಳಿಕವಾಗಿ ಅತ್ಯಂತ ವಿಸ್ತಾರವಾಗಿರುವ ಹಾಗೂ ಹಾಗೂ ಗುಡ್ಡಗಾಡುಗಳಿಂದ ಆವೃತವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು (ಘಟ್ಟದ ಮೇಲೊಂದು ಹಾಗೂ ಘಟ್ಟದ ಕೆಳಗೊಂದು) ಬಹು ವಿಶೇಷತೆಯುಳ್ಳ (ಮಲ್ಟಿ ಸ್ಪೆಷಾಲಿಟಿ) ಆಸ್ಪತ್ರೆಗಳು ಆಗಲೇಬೇಕು. ಈ ವಿಚಾರವಾಗಿ ಪಕ್ಷಾತೀತವಾಗಿ ನಡೆಯುವ ಎಲ್ಲ ಹೋರಾಟಗಳ ಜೊತೆಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ […]

ಈ ಕ್ಷಣದ ಸುದ್ದಿ

ಕೋಗಿಲಬನ ರುದ್ರಭೂಮಿಯಲ್ಲಿ 17 ಲಕ್ಷ ರು. ವೆಚ್ಚದಲ್ಲಿ ಕಾಗದ ಕಾರ್ಖಾನೆಯಿಂದ ನಿರ್ಮಾಣಗೊಂಡ ಶವಸಂಸ್ಕಾರ ಕಟ್ಟಡ

ದಾಂಡೇಲಿ: ಕೊನೆಗೂ ಕೋಗಿಲಬನ ರುದ್ರಭೂಮಿಯಲ್ಲೊಂದು ಸುಸಜ್ಜಿತವಾದ ಶವಸಂಸ್ಕಾರ ಕಟ್ಟಡ ನಿರ್ಮಾಣಗೊಂಡಿದ್ದು, ದಾಂಡೇಲಿಗರ ಬಹುದಿನಗಳ ಬೇಡಿಕೆ ಕಾಗದ ಕಾರ್ಖಾನೆಯವರಿಂದ ಈಡೇರುವಂತಾಗಿದೆ. ದಾಂಡೇಲಿಯಲ್ಲಿ ಪಟೇಲ ನಗರ ಮತ್ತು ಕೋಗಿಲಬನದಲ್ಲಿ ಪ್ರತ್ಯೇಕ ರುದ್ರಭೂಮಿಗಳಿವೆ. ಪಟೇಲನಗರದ ಹಿಂದೂ ರುದ್ರಭೂಮಿಗೆ ನಗರಸಭೆಯಿಂದ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ ಕೋಗಿಲಬನದ ರುದ್ರಭೂಮಿ ಹಲವು ಸೌಕರ್ಯಗಳ ಕೊರತೆಯಿಂದ ಕೂಡಿತ್ತು. […]

ಉತ್ತರ ಕನ್ನಡ

ಹೊಸತನದ ಹಂಬಲದ ನಡಿಗೆಯಲ್ಲಿ ಹೆಜ್ಜೆಯಿಡುತ್ತಿರುವ ಬಹುಮುಖ ಪ್ರತಿಭೆಯ ಶಿಕ್ಷಕಿ ಭಟ್ಕಳದ ಜಯಶ್ರೀ ಆಚಾರಿ

ಕರ್ನಾಟಕ ರಾಜ್ಯ ಶಿಕ್ಷಕರ ಪರಿಷತ್ತು ತನ್ನ ಹಲವು ಕಾರ್ಯ ಸಾಧನೆಯ ಮೂಲಕ ನಾಡಿನ ಗಮನ ಸೆಳೆದ ಮಹತ್ವದ ಸಂಘಟನೆಯಾಗಿದೆ. ಶಿಕ್ಷಕರಲ್ಲಿರುವ ಸುಪ್ತ ಪ್ರತಿಭೆಗೆ ಸೂಕ್ತ ವೇದಿಕೆ ನಿರ್ಮಿಸಿ ಅವರ ಪ್ರತಿಭೆಯನ್ನು ಪರಿಚಯಿಸುವುದರ ಮೂಲಕ ವೃತ್ತಿ ಪಾವಿತ್ರ್ಯತೆಗೆ ಗೌರವ ತಂದುಕೊಟ್ಟ ಪರಿಷತ್ತು ತನ್ನ ವಿಭಿನ್ನ ಆಲೋಚನೆ ಮೂಲಕ ಶಿಕ್ಷಣ ಇಲಾಖೆಯ […]

ಉತ್ತರ ಕನ್ನಡ

ಸದ್ದಿಲ್ಲದೆ ದುಡಿದ ಕಾಯಕಯೋಗಿ ಕುಮಟಾ ಹೊಲನಗದ್ದೆ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರದೀಪ ರಾಮಚಂದ್ರ ನಾಯಕ

ನಾಡಿನ ತುಂಬೆಲ್ಲ ಅಡಗಿರುವ ಅನರ್ಗ್ಯ ರತ್ನಗಳನ್ನು ಹುಡುಕಿ ಶಿಕ್ಷಕರಿಂದ, ಶಿಕ್ಷಕರಿಗಾಗಿ, ಶಿಕ್ಷಕರೇ ನಡೆಸುವ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದರ ಮೂಲಕ ನಮ್ಮ ನಡುವೆ ಇದ್ದು ನಮ್ಮಂತಾಗದೆ ಶಿಕ್ಷಣ ಇಲಾಖೆಯ ಸಂಪರ್ಕದ ಕೊಂಡೆಯಂತಿರುವ ಕ್ಷೇತ್ರ ಸಂಪನ್ಮೂಲ ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ […]

ಈ ಕ್ಷಣದ ಸುದ್ದಿ

ಶ್ರೀ ನಾರಾಯಣ ಗುರು ನಿಗಮ ಸ್ಥಾಪನೆಗೆ ಆಗ್ರಹಿಸಿ ಪತ್ರ ಚಳವಳಿ…

ಅಂಕೋಲಾ : ಸಮಾಜ ಸುಧಾರಕ ಶ್ರೀ ನಾರಾಯಣ ಗುರು ನಿಗಮ ಸ್ಥಾಪನೆಗೆ ಆಗ್ರಹಿಸಿ ಪತ್ರ ಚಳವಳಿ ಸಿದ್ದತೆಗಳು ನಡೆಯುತ್ತಿದ್ದು, ಪಕ್ಷಾತೀತವಾಗಿ ಸರಕಾರವನ್ನು ಒತ್ತಾಯಿಸುವ ಹೋರಾಟಕ್ಕೆ ನಾರಾಯಣಗುರು ವೇದಿಕೆ ಅಣಿಯಾಗುತ್ತಿದೆ. ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ರಚಿಸುವಂತೆ ರಾಜ್ಯ ಸರಕಾರಕ್ಕೆ ಪ್ರತಿಭಟನೆಯ ಮೂಲಕ ಅನೇಕ ಬಾರಿ ಆಗ್ರಹಿಸಿದ್ದರೂ ಇನ್ನುವರೆಗೂ ಯಾವುದೇ […]