
ಆದರ್ಶ ಶಿಕ್ಷಕ ಹೊಳೆಗದ್ದೆಯ ಎಂ .ಎಸ್.ನಾಯ್ಕ
” ಮೊದಲು ಆಳಾಗುವುದನ್ನು ಕಲಿಯಿರಿ.ಆಗ ನಾಯಕನ ಅಹೃತೆ ನಿಮಗೆ ಬರುತ್ತದೆ. ಒಂದುಸಾಮಾನ್ಯ ಕೆಲಸನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ” ಎಂಬ ಸ್ವಾಮಿವಿವೇಕಾನಂದರವರ ಮಾತನ್ನು ತಮ್ಮ ಬದುಕಿನುದ್ದಕ್ಕೂ ಅನುಸರಿಸಿಕೊಂಡು ಅಚ್ಚುಕಟ್ಟುತನದಿಂದ ಕೆಲಸ ನಿರ್ವಹಿಸಿ ಆದರ್ಶ ಶಿಕ್ಷಕರಾಗಿ ಸುದೀರ್ಘ 39 ವರ್ಷಗಳ ಕಾಲ ಸೇವೆ ಸಲ್ಲಿಸಿದವರು ಹೊಳೆಗದ್ದೆಯ ಶ್ರೀ ಎಂ.ಎಸ್.ನಾಯ್ಕರವರು. […]