ಉತ್ತರ ಕನ್ನಡ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ -೧೬

‘ಅವ್ನ ಹಾಂಗೆ ಬಿಟ್ರೆ ನಮ್ಮನ್ನೆ ಅಕ್ಸ ಬಿಡ್ತ. ಮೊನ್ನಾಗೆ ಸಾಲಿ ಆಕ್ಕೊರು ಸಿಕ್ದವ್ರು ಅವ್ನ ಕಾಥಿ ಒಂದ ಹೇಳ್ದ್ರು…. ಹೇಳ್ದ್ರು…ಸಾಲಿಲಿ ಕೊಟ್ಟ ಒಂದ ಕೆಲ್ಸನೂ ಮಾಡುದಿಲ್ಲಂತೆ. ನಮ್ಮುರ್ನ ಎಲ್ಲಾ ಮಕ್ಳು ಸಾಲಿಗೆ ಹೋಗಿ ಆಕ್ಕೊರೆ ಎಂತ ಬರಿಬೇಕು ಹೇಳಿ ಕೇಳ್ಕಂಡಿ, ಇಂವ ಬರ್ದ ಪಟ್ಟಿ ತೊರ್ಸಂಡಿ, ಮತ್ತೆನಾದ್ರು ಹಾಕೊಟ್ರೆ […]

ದಾಂಡೇಲಿ

ನವರಾತ್ರಿಯ ಏಳು ದಿನ ಅಖಂಡ ಹರಿಕೀರ್ತನ: ದಾಂಡೇಲಿಯಲ್ಲಿ ನಡೆಯುತ್ತಿದೆ ದಿನವಿಡೀ ಭಜನ

ವರ್ಷಂಪ್ರತಿಯಂತೆ ನವರಾತ್ರಿ ಸಂದರ್ಭದಲ್ಲಿ ಏಳುದಿನಗಳ ಕಾಲ ನಡೆಯುವ ಅಖಂಡ ಹರಿಕೀರ್ತನ ಸಪ್ತಾಹ ಹಾಗೂ ಭಜನ ಕಾರ್ಯಕ್ರಮ ದಾಂಡೇಲಿ ಕಾಗದ ಕಂಪನಿಯ ರಂಗನಾಥ ಸಭಾಂಗಣದ ಬಳಿಯಲ್ಲಿ ನವ ಯುವಕ ಸಂಘದ ನೇತೃತ್ವದಲ್ಲಿ ಗುರುವಾರದಿಂದ ಆರಂಭವಾಗಿದೆ. ಇದು ರಾಜಸ್ಥಾನದಿಂದ ಬಳುವಳಿಯಾಗಿ ಬಂದಿರುವ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಕಾಗದ ಕಂಪನಿಯಲ್ಲಿ ರಾಜಸ್ಥಾನದ ಜನರು ಸಾಕಷ್ಟು […]

ದಾಂಡೇಲಿ

ಅನ್ನಪ್ರಸಾದವಿಲ್ಲ: ಅಂಗಡಿ-ಮಳಿಗೆಗಳಿಲ್ಲ : ಸರಳ ರೀತಿಯಲ್ಲಿ ನಡೆಯಲಿದೆ ದಾಂಡೇಲಪ್ಪ ಜಾತ್ರೆ: ರಾಮಲೀಲಾ ಉತ್ಸವ

ಅನ್ನಪ್ರಸಾದವಿಲ್ಲ, ಅಂಗಡಿ ಮಳಿಗೆಗಳಿಲ್ಲ. ಮನರಂಜನೆಯಂತೂ ಇಲ್ಲವೇ ಇಲ್ಲ. ಕೇವಲ ದೇವರ ದರ್ಶನಕಷ್ಟೇ ಭಕ್ತರಿಗೆ ಅವಕಾಶ ನೀಡುವ ಮೂಲಕ ಸತ್ಪುರುಷ ದಾಂಡೇಲಪ್ಪ ಜಾತ್ರೆಗೆ ತಾಲೂಕಾಡಳಿತ ಸಮ್ಮತಿ ಸೂಚಿಸಿದೆ. ದಾಂಡೇಲಿ ಹಾಗೂ ಸುತ್ತ ಮುತ್ತಲಿನ ಜನರಿಗೆ ದಾಂಡೇಲಪ್ಪ ಎಂದರೆ ಆರಾದ್ಯ ದೈವ. ಪ್ರತೀ ವಿಜಯಯದಶಮಿಯಂದೇ ನಡೆಯುವ ದಾಂಡೇಲಪ್ಪ ಜಾತ್ರೆ ಜಿಲ್ಲೆಯ ಅತೀ […]

ಉತ್ತರ ಕನ್ನಡ

ಸುದೀಶ ನಾಯ್ಕರಿಗೆ ಹೊನ್ನಾವರ ತಾಲೂಕಾ ಆರ್ಯ, ಈಡಿಗ, ನಾಮಧಾರಿ ನೌಕರ ಸಂಘದ ಅಧ್ಯಕ್ಷ ಪಟ್ಟ.

ಸುದೀಶ… ಈ ಹೆಸರು ಹೊನ್ನಾವರ ತಾಲೂಕಿನ ಇತಿಹಾಸದಲ್ಲಿ ಸದಾ ನೆನಪು ಉಳಿಯುವ ಹೆಸರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಅವರು ಸಲ್ಲಿಸಿದ ಸೇವೆ ಅಪರಿಮಿತ . ವಿಶ್ವಾಸ, ನಂಬಿಕೆಗೆ , ಆದರಾತಿಥ್ಯತೆಗೆ , ಗೆಳೆತನಕೆ, ಒಳಿತಾದ ಒಡನಾಟಕೆ ಇವರೊಬ್ಬ ಮಾದರಿಯ ಅಭಿಜಾತ ಗುಣದವರು. ಇಂಥವರು ಅಪರೂಪ. ಹೊನ್ನಾವರ ತಾಲೂಕಿನಲ್ಲಿ ಶಿಕ್ಷಕ […]

ಉತ್ತರ ಕನ್ನಡ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ -೧೫

‘ಆಲ್ವಾ ದೇವು , ಮೊದ್ಲೇ ಎಲ್ಲಾದ್ರೂ ಕೆಲ್ಸಕ್ಕೆ ಹೊಗ್ತಿದ್ದೆ. ದುಡ್ಡು ಸಿಕ್ದಕೂಡ್ಲೆ ಕುಡ್ಕಬಂದ್ಕಂಡಿ ಮಾನಿಲಿ ಮನಿಕಂತಿದ್ದೆ. ಯಾರೂ ಕೇಳ್ವರು, ಹೇಳ್ವರು ಇಲ್ಲಾಗಿತ್ತು. ಇಗೆನಾಗಾದೆ ಬಾಲ್ಯಾ ಆ ಸುಡ್ಗಾಡ ಕೊರೋನಾ ಯಾಪಾರ್ದಾಗೆ ಮಕ್ಳೆಲ್ಲಾ ಮಾನಿಲಿರ್ತು. ನಿಂಗೆ ಅದೇ ದೊಡ್ಡ ತಾಲಿಬಿಸಿ ಆಗ್ಬಿಟ್ಟದೆ. ನಿಂಗೆ ಸಾರಾಯಿ ಕುಡ್ಕ ಬಂದ್ಮ್ಯಾಲೆ ಗಾನಾಕೆ ಉಂಬುಕ್ಬೇಕು. […]

ಉತ್ತರ ಕನ್ನಡ

ಕ್ರೀಡಾ ಜಗತ್ತಿನ ಅಂತರಾಷ್ಟ್ರೀಯ ಮಟ್ಟದ ಸಾಧಕ ಶಿಕ್ಷಕಿ ಹೊನ್ನಾವರದ ಯಮುನಾ ನಾಯ್ಕ

ಗ್ರಾಮೀಣ ಪ್ರತಿಭೆಯೊಂದು ಕ್ರೀಡಾ ಜಗತ್ತಿನಲ್ಲಿ ಸಾಧನೆ ಮಾಡಬೇಕೆಂದರೆ ಅದಕ್ಕೊಂದು ನಿರಂತರ ತಪಸ್ಸು ಮಾಡಬೇಕಾದಿತು. ಸತತ ಪರಿಶ್ರಮ, ಕ್ರಮವರಿತ ಸಾಧನೆ, ಎದುರಾಳಿಯನ್ನು ಸೋಲಿಸುವ ಛಲ ಅತ್ಯಗತ್ಯ. ಕ್ರಮರಹಿತ ಸಾಧನೆ ಶರೀರ ನಾಶವೇ ಹೊರತು, ಶರೀರ ಸಂವರ್ಧನೆಯಲ್ಲ ಎಂಬುದೊಂದು ಮಾತಿದೆ. ಸುಪ್ತವಾಗಿ ತಮ್ಮಲ್ಲಡಗಿರುವ ಚೈತನ್ಯಕ್ಕೆ ದಾರಿ ತೋರಿಸಿದಾಗ ಅದು ಬಲಿಷ್ಠಗೊಳ್ಳಲು ಸಾಧ್ಯ. […]

ಉತ್ತರ ಕನ್ನಡ

ಮುಖ್ಯಾಧ್ಯಾಪಕರ ಸಂಘದ ರಾಜ್ಯ ಉಪಾಧ್ಯಕ್ಷ ಹುದ್ದೆಯೇರಿದ ಕ್ರಿಯಾಶೀಲ ಶಿಕ್ಷಕ, ಯಶಸ್ವೀ ಸಂಘಟಕ ಲಂಬೋದರ ಹೆಗಡೆ

ಒಳ್ಳೆಯತನವೇ ಸತ್ಯ ಸೌಂದರ್ಯವೆಂದು ದೃಢವಾಗಿ ನಂಬಿರುವ ಅಧ್ಯಾಪಕನ ಬಾಳಿನಲ್ಲಿ ಆಲಸ್ಯವೆಂದೂ ಸುಳಿಯಲಾರದು. ಸದಾ ಉತ್ಸಾಹ ಶೀಲ ಕಾರ್ಯತತ್ಪರತೆಯ ಮೂಲಕ ವಿದ್ಯಾರ್ಥಿಗಳ ಬಾಳನ್ನು ಬೆಳಗಿಸುವಲ್ಲಿ ಇವರ ಮನಸ್ಸು ಜಾಗೃತವಾಗಿರುತ್ತದೆ. ಇಂತಹ ಜಾಗೃತ ಮನಸ್ಸಿನ ಸರದಾರ, ಸದಾ ಹೊಸ ಹೊಸ ಆಲೋಚನೆಗಳಿಗೆ, ಹೊಸತನಕ್ಕೆ ತನ್ನನ್ನು ತಾನು ತೆರೆದುಕೊಳ್ಳುವ ವಿಶಿಷ್ಟ ವ್ಯಕ್ತಿತ್ವ ಹೊಂದಿದವರು […]

ಉತ್ತರ ಕನ್ನಡ

ನಮ್ ಕಥೆ… ನಮ್ ವ್ಯಥೆ… ಪಿ.ಆರ್. ನಾಯ್ಕರ ಲೇಖನ ಮಾಲೆ -೧೩

ಇಂವ ದೊಡ್ಡ ಸಾಯ್ಬ ಆಗನೇ. ನಂಗೆ ಬುದ್ದಿ ಹೇಳ್ತಾ. ಆಲ್ಲ, ನಾನು ಸಾಲಿಗೆ ಹೋಗ್ತೆ ಇಲ್ಲಾ ಬಿಡ್ತೆ, ನಾನು ಕಲಿತೆ ಇಲ್ಲಾ, ಕಲುದಿಲ್ಲ, ನಾನು ದಡ್ಡಾ ಆಗ್ಲಿ, ಇಲ್ಲ ಹುಸಾರಿ ಆಗ್ಲಿ.ಇಂವ ಯಾರು ಕೇಳುಕೆ ? ದೊಡ್ಡ ಕೊಚ್ಚಿನಾಬ. ನಾಮ್ಮ ಆಪ್ಪ, ಆಬ್ಬಿನೇ ಕೇಳುದಿಲ್ಲ, ಇಂವ ಯಾವ್ಲೆಕ ನಾಂಗೆ. […]

ಈ ಕ್ಷಣದ ಸುದ್ದಿ

ಪಣಸೋಲಿ ಅರಣ್ಯದಲ್ಲಿ ಹುಲಿ ಪ್ರತ್ಯಕ್ಷ : ಜಂಗಲ್ ಸಫಾರಿ ಪ್ರವಾಸಿಗರ ಹರ್ಷ…

ಜೋಯಿಡಾದ ಪಣಸೋಲಿ ಅರಣ್ಯ ಪ್ರದೇಶದಲ್ಲಿ ಜಂಗಲ್ ಸಫಾರಿ ನಡೆಸುತ್ತಿದ್ದ ಪ್ರವಾಸಿಗರಿಗೆ ಸೋಮವಾರ ಹುಲಿರಾಯ ಪ್ರತ್ಯಕ್ಷನಾಗಿದ್ದು, ಪ್ರವಾಸಿಗರು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಾಂಡೇಲಿಯಿಂದ ಕುಳಗಿ ಮಾರ್ಗವಾಗಿ ಪಣಸೋಲಿಗೆ ಸಾಗಿ ಅಲ್ಲಿಂದ ನಡೆಯಲ್ಪಡುವ ಜಂಗಲ್ ಸಫಾರಿಯ ಸಂದರ್ಭದಲ್ಲಿ ನವಿಲು, ಜಿಂಕೆ, ಕಾಡುಕೋಣದಂತಹ ಹಲವು ವನ್ಯಪ್ರಾಣಿಗಳು ಕಾಣ ಸಿಗುತ್ತವೆ. ಆಗಾಗ […]

ಉತ್ತರ ಕನ್ನಡ

ಕ್ರಿಯಾಶೀಲ ಶಿಕ್ಷಕ-ಸಿದ್ದಾಪುರದ ಗೋಪಾಲ ನಾಯ್ಕ

‘ಮನುಷ್ಯ ಸೋಮಾರಿ ಆಗಬಾರದು. ಬೃಹತ್ತಾದ ಕನಸನ್ನು ಕಾಣುತ್ತಾ, ಅದನ್ನು ಸಾಧಿಸುವುದರ ಕಡೆಗೆ ಹೆಜ್ಜೆ ಹಾಕಬೇಕು’ – ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರ ಮಾತನ್ನು ಸುದೀರ್ಘ ಮೂರು ದಶಕಗಳಿಗೂ ಹೆಚ್ಚು ಕಾಲದ ಸೇವಾವಧಿಯಲ್ಲಿ ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವವರು ಸಿದ್ದಾಪುರದ ಗೋಪಾಲ ಕೆರಿಯಪ್ಪ ನಾಯ್ಕರು. ತಂದೆ ದಿವಂಗತ ಕೆರಿಯಪ್ಪ ನಾಯ್ಕರು ಕಾಗೋಡು ಸತ್ಯಾಗ್ರಹದಲ್ಲಿ […]