ಒಡನಾಡಿ ವಿಶೇಷ

ಧಾರವಾಡದ ಖ್ಯಾತ ಹೃದಯ ತಜ್ಞ ಡಾ. ಪ್ರಕಾಶ ಎಸ್. ರಾಮನಗೌಡ ಅವರೊಂದಿಗೆ ಕೊರೊನಾದ ಬಗ್ಗೆ ಜಾಗೃತಿ ಮಾಹಿತಿಗಳು

ವೈದ್ಯೋ ನಾರಾಯಣೋ ಹರಿ ಎಂಬ ನಾಣ್ಣುಡಿಯಂತೆ ಪ್ರಸ್ತುತ ದಿನಗಳಲ್ಲಿ ದೇವರ ಧೂತರಂತೆ ನಮ್ಮನ್ನು ರಕ್ಷಿಸುತ್ತಿರುವ ಸಮಸ್ತ ವೈದ್ಯ ವೃಂದಕ್ಕೆ ನಮಿಸುತ್ತಾ ಇಂದಿನ ನಮ್ಮ ವೈದ್ಯರೊಂದಿಗೆ ಮಾತುಗಳನ್ನು ಪ್ರಾರಂಭಿಸುವ ಮುನ್ನ ಅವರ ಒಂದು ಚಿಕ್ಕ ಪರಿಚಯ ತಮ್ಮೆಲ್ಲರ ಮುಂದೆ. ತಂದೆ ಎಸ್. ಆರ್. ರಾಮನಗೌಡರ ತಾಯಿ ಗಂಗಮ್ಮ ಇವರ ಪುತ್ರರಾಗಿ […]

ಒಡನಾಡಿ ವಿಶೇಷ

ಉಚ್ಛನ್ಯಾಯಾಲಯದ ನ್ಯಾಯದೀಶರಾಗಿ ಭಟ್ಕಳದ ಆರ್. ನಾಗೇಂದ್ರ : ಉನ್ನತ ಹದ್ದೆ ಅಂಕರಿಸಿದ ಅಪ್ಪಟ ಗ್ರಾಮೀಣ ಪ್ರತಿಭೆ

‘ಮಣಿಯದಿಹ ಮನವೊಂದುಸಾಧಿಸುವ ಹಠವೊಂದುನಿಜದ ನೇರಕೆಅನ್ಯಾಯಕೆಂದೆಂದು ಬಾಗದೆಚ್ಚರವೊಂದುಮರುಕಕ್ಕೆ ಪ್ರೇಮಕ್ಕೆ ಚಿರ ತೆರೆದ ಎದೆಯೊಂದು’ ವಿ. ಸೀತಾರಾಮಯ್ಯನವರ ಈ ಕವನದ ಸಾಲುಗಳು ಯಾವುದೇ ವ್ಯಕ್ತಿ ಸಾಧಿಸುವ ಛಲದೊಂದಿಗೆ ಮುನ್ನಡೆದರೆ ಖಂಡಿತ ಅದರಲ್ಲಿ ಯಶಸ್ಸುಗಳಿಸಬಹುದು ಎಂಬುದನ್ನು ಸಾಕ್ಷೀಕರಿಸುವಂತಿದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯೋರ್ವ ತನ್ನ ಸಾಧನೆಯ ಮೂಲಕ ಅತ್ಯುನ್ನತ ಸ್ಥಾನಕ್ಕೇರಿ ಹೈಕೋರ್ಟ್ ನ್ಯಾಯಾಧೀಶರಾದವರು […]

ಈ ಕ್ಷಣದ ಸುದ್ದಿ

ಸರ್ವೀಸಿಂಗ್ ಸೆಂಟರ್‌ನಲ್ಲಿ ಕೂಲಿಯಾಗಿದ್ದ ಬಾಲಕ ಈಗ ನಗರಸಭೆಯ ಉಪಾಧ್ಯಕ್ಷ

ದಾಂಡೇಲಿ ನಗರಸಭೆಯ ಉಪಾಧ್ಯಕ್ಷರಾಗಿ ಸಂಜಯ ನಂದ್ಯಾಳಕರ ಎಂಬ ಕ್ರಿಯಾಶೀಲ ಯುವಕ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷವೂ ಸೇರಿದಂತೆ ದಾಂಡೇಲಿಯ ಜನತೆ ಇವರ ಮೇಲೆ ಬಹು ನಿರೀಕ್ಷೆಯನ್ನಿಟ್ಟುಕೊಂಡಿದೆ. ಅತ್ಯಂತ ಬಡತನದಿಂದ ಬಂದಿರುವ ಸಂಜಯ ನಂದ್ಯಾಳಕರ ಚಿಕ್ಕಂದಿನಿAದಲೇ ಮಹತ್ವಾಕಾಂಕ್ಷೆಯ ಕನಸು ಕಂಡವರು. ತಂದೆ ಕೂಲಿ ಕೆಲಸ ಮಾಡಿ ಸಂಸಾರದ ಹೊಣೆ ನಿರ್ವಹಿಸುತ್ತಿರುವಾಗಲೇ ಸಂಜಯ […]

ದಾಂಡೇಲಿ

ಸಾಕ್ಷರತಾ ಸ್ವಯಂ ಸೇವಕಿಯಾಗಿದ್ದ ಸರಸ್ವತಿಗೊಲಿದ ನಗರಸಭಾ ಅಧ್ಯಕ್ಷತೆಯ ಗದ್ದುಗೆ

ದಾಂಡೇಲಿ: ಅಧಿಕಾರ ವಿಕೇಂದ್ರೀಕರಣ ಮತ್ತು ಮೀಸಲಾತಿ ನೀತಿಯಿಂದಾಗಿ ಸಮಾನ್ಯ ಜನರೂ ಕೂಡಾ ಆಡಳಿತದ ಚುಕ್ಕಣಿ ಹಿಡಿಯಬಹುದೆಂಬುದಕ್ಕೆ ದಾಂಡೇಲಿ ನಗರಸಭೆಯ ನೂತನ ಅದ್ಯಕ್ಷರಾಗಿ ಆಯ್ಕೆಯಾಗಿರುವ ಸರಸ್ವತಿ ರಜಪೂತರವರೇ ಒಂದು ತಾಜಾ ನಿದರ್ಶನ. ಒಂದು ಕಾಲದಲ್ಲಿ ಸಾಕ್ಷರತಾ ಸಂಯೋಜಕಿಯಾಗಿ, ನೊಡೆಲ್ ಅಧಿಕಾರಿಯಾಗಿ, ಟ್ಯೂಶನ್ ಶಿಕ್ಷಕಿಯಾಗಿ ಕಾರ್ಯ ನಿವೃಹಿಸಿದ್ದ ಸರಸ್ವತಿ ಇಂದು ದಾಂಡೇಲಿ […]

ಒಡನಾಡಿ ವಿಶೇಷ

ಪ್ರಯೋಗಶೀಲ, ಪ್ರತಿಭಾವಂತ ಶಿಕ್ಷಕ ಪಿ.ಆರ್.‌ ನಾಯ್ಕ

ಈ ಮತ್ಸರ ಎನ್ನುವುದು ಪ್ರತಿಯೊಬ್ಬನಿಗೂ ಅಂಟಿದ ಮಹಾಶಾಪ. ತನಗಿಲ್ಲ ತನಗಿಲ್ಲ ಎಂದು ಬಾಯಲ್ಲಿ ಹೇಳಿದರೂ ಅಲ್ಲೆಲ್ಲೋ ನಮ್ಮೊಳಗೆ ಅದು ಅಡಗೇ ಇದೆ. ಎಂತೆಂತಹ ಮೇಧಾವಿಗಳನ್ನೂ, ಖ್ಯಾತ ವ್ಯಕ್ತಿಗಳ ಜೀವನವನ್ನೂ ಹತ್ತಿರದಿಂದ ನೋಡಿದಾಗಲೂ ನನಗೆ ಇದರ ಎಳೆಯೊಂದು ಗೋಚರಿಸದೇ ಇರುವುದಿಲ್ಲ. ಅಧ್ಯಯನ ಮತ್ತು ಅನುಭವ ಇದನ್ನು ಕಡಿಮೆಗೊಳಿಸಬಹುದಾದರೂ ಬುಡಸಮೇತ ಕಿತ್ತೆಸೆಯಲಾರದು. […]

ಒಡನಾಡಿ ವಿಶೇಷ

ಯು.ಪಿ.ಎಸ್.ಸಿ. ಸಾಧನೆಗೆ ಕನ್ನಡ ಮಾದ್ಯಮ ಅಡ್ಡಿಯಾಗದು – ಸಚಿನ್ ಹಿರೇಮಠ

ಸದ್ಯ ಕೊಲ್ಕತ್ತಾದಲ್ಲಿ ಭಾರತದ ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕನಾಗಿ ಕ್ಲಾಸ್ ಒನ್ ಗ್ರೇಡ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ದಾಂಡೇಲಿಯ ಸಚಿನ ಹಿರೇಮಠ ಇದೀಗ ಕೇಂದ್ರ ಲೋಕ ಸೇವಾ ಆಯೋಗದ ಅತ್ಯುನ್ನತ ನಾಗರಿಕ ಸೇವೆಗಳ (ಯು.ಪಿ.ಎಸ್.ಸಿ.) ಪರೀಕ್ಷೆಯಲ್ಲಿ 213 ನೇ ರೆಂಕ್ ಪಡೆಯುವ ಮೂಲಕ ಜಿಲ್ಲೆ ಹಾಗೂ ರಾಜ್ಯದ ಗಮನ […]

ಒಡನಾಡಿ ವಿಶೇಷ

ಕೊರೊನಾ ಸೋಂಕಿಗೊಳಗಾಗಿ ಗುಣಮುಖರಾದ ನ್ಯಾಯವಾದಿ ಎಚ್.ಎಸ್.‌ ಕುಲಕರ್ಣಿಯವರು ಏನಂತಾರೆ…!!

“ಕೊರೊನಾ ಸೋಂಕು, ಪಾಸಿಟಿವ್ ಪ್ರಕರಣ, ಪಿಪಿಟಿ ಕಿಟ್ ಎನ್ನುತ್ತ ಜನರನ್ನು ಇದ್ದಕ್ಕಿಂತ ಹೆಚ್ಚಾಗಿ ಭಯಭೀತಗೊಳಿಸಲಾಗುತ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ಅಪಾಯವೊಂದನ್ನು ಬಿಟ್ಟರೆ ಕೊರೊನಾ ಅಷ್ಟೊಂದು ಭೀಕರವಾಗಿಲ್ಲ. ಕೊರೊನಾ ಪಾಸಿಟಿವ್ ಬಂದಿದೆ ಎಂದು ಯಾರೂ ಕೂಡಾ ದೃತಿಗೆಡಬೇಕಾಗಿಲ್ಲ. ಇದೊಂದು ವಾಸಿಯಾಗಬಲ್ಲಂತಹ ಕಾಯಿಲೆಯಾಗಿದೆ…”ಹೀಗೆಂದವರು ಯಾರೋ ವೈದ್ಯರೋ, ಅಥವಾ ತಜ್ಞರೋ ಅಲ್ಲ. ಇದು […]

ಒಡನಾಡಿ ವಿಶೇಷ

ಬಿರು ಬೇಸಿಗೆಯಲ್ಲೂ ಮೈ ತುಂಬ ಹೂ ಹೊದ್ದುಕೊಂಡ ಗುಲ್‍ಮೋಹರ್ ಟ್ರೀ

ಬಿ.ಎನ್. ವಾಸರೆ ನಾವು ಸಾಮಾನ್ಯವಾಗಿ ಹೂ ‘ಗಿಡ’ಗಳನ್ನು ಕಾಣುತ್ತೇವೆ. ಹೂ ‘ಮರ’ಗಳನ್ನು ನೋಡುವುದು ಅಪರೂಪವೇ ಸರಿ. ಮನೆಯ ತೋಟ, ಗಾರ್ಡನ ಸೇರಿದಂತೆ ವಿವಿದೆಡೆ ಹೂ ಗಿಡ ನೆಟ್ಟು ಬೆಳೆಸಲಾಗುತ್ತದೆ. ಆ ಗಿಡ ಹೂಬಿಟ್ದಟಾಗ ಆನಂದಿಸುತ್ತೇವೆ. ಆ ಹೂವು ದೇವರ ಗುಡಿಗೋ ಹೆಣ್ಣೀನ ಮುಡಿಗೋ ಅಲಂಕಾರವಾಗುತ್ತದೆ. ಆದರೆ ಗುಡಿಗೂ ಮುಡಿಗೂ […]

ಒಡನಾಡಿ ವಿಶೇಷ

ಸಂಕಷ್ಠದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ತಬಲಾ ವಾದಕ ಜಮಾದರ

‘ನನ್ನ ತಬಲಾದ ಮೇಲೆ ನನ್ನ ಕೈ ಬೆರಳು ಆಡಲಿಲ್ಲ ಅಂತಾದರೆ…, ತಬಲಾದ ಇಂಪಾದ ದನಿ ನನ್ನ ಕವಿಗೆ ಕೇಳಲಿಲ್ಲ ಅಂತಾದರೆ… ನನಗೆ ಆದಿನ ಕಳೆರಯುವುದೇ ಇಲ್ಲ. ತಬಲಾ ನನ್ನ ಸಂಪತ್ತು. ತಬಲಾ ನುಡಿಸುವುದೇ ನನ್ನ ಬದುಕು…’ ಎನ್ನುತ್ತಾರೆ ದಾಂಡೇಲಿಯ ಹಿರಿಯ ತಬಲಾ ವಾದಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕಲಾವಿದ […]

ಒಡನಾಡಿ ವಿಶೇಷ

ಕೊರೊನಾ ಲಾಕ್‍ಡೌನ್ ಸಂಕಷ್ಠದಲ್ಲಿ ಅಶಕ್ತ ಯಕ್ಷಗಾನ ಕಲಾವಿದರು, ವೇಷಭೂಷಣ ತಯಾರಕರು

ಕೊರೊನಾ ಕಾರಾಣಕ್ಕಾಗಿ ಜಾರಿಯಾಗಿರುವ ಲಾಕ್‍ಡೌನ್‍ನ ದುಷ್ಪರಿಣಾಮ ಎಲ್ಲರ ಮೇಲಾಗಿರುವಂತರಯೇ, ಅಶಕ್ತ ಯಕ್ಷಗಾನ ಕಲಾವಿದರೂ, ವೇಷಭೂಷಣ ಪರಿಕರ ಹಾಗೂ ರಂಗಸಜ್ಜಿಕೆ ತಯಾರಕರೂ ಸಹ ಇದರಿಂದ ಸಂಕಷ್ಠಕ್ಕೊಳಗಾಗಿದ್ದಾರೆ. ಕಲಾವಿದರಿಗೆ ಸಹಾಯ ಮಾಡಿ ಎನ್ನುವ ಸಚಿವರು: ಕಲಾವಿದರೆನ್ನುವುದಕ್ಕೆ ದಾಖಲೆ ಕೊಡಿ ಎನ್ನುವ ಅಧಿಕಾರಿಗಳು ಯಕ್ಷಗಾನ ಇದು ದಕ್ಷಿಣೋತ್ತರಕನ್ನಡ ಜಿಲ್ಲೆಯ ಗಂಡುಮೆಟ್ಟಿನ ಕಲೆ ಎಂದು […]