ದಾಂಡೇಲಿ

ಅಂಬಿಕಾನಗರ ಅರಣ್ಯದಲ್ಲಿ ಕರಡಿ ದಾಳಿ: ಪ್ರಾಣಾಪಾಯದಿಂದ ಪಾರು

ದಾಂಡೇಲಿ: ತಾಲೂಕಿನ ಅಂಬಿಕಾನಗರದ ಅರಣ್ಯ ಪ್ರದೇಶದಲ್ಲಿ ಉರುವಲು ಕಟ್ಟಿಗೆ ತರಲೆಂದು ಕಾಡಿಗೆ ಹೋಗಿದ್ದ ವ್ಯಕ್ತೊಯೋರ್ವನ ಮೇಲೆ ಕರಡಿಗಳು ದಾಳಿ ನಡೆಸಿದ್ದು, ಪ್ರಾಣಾಪಾಯಿಂದ ಪಾರಾಗಿರುವ ವ್ಯಕ್ತಿಯನ್ನು ದಾಂಡೇಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಬಿಕಾನಗರ ಮಾರ್ಕೆಟ್ ಪ್ರದೇಶದ ನಿವಾಸಿ ಮಾದೇವ ಕಳಗೊಳ (40) ಎಂಬ ವ್ಯಕ್ತಿಯೇ ಕರಡಿ ದಾಳಿಗೆ ಒಳಗಾಗಿರುವ ವ್ಯಕ್ತಿಯಾಗಿದ್ದಾನೆ. […]

ದಾಂಡೇಲಿ

ದಾಂಡೇಲಿಗೆ ರವಿವಾರ ಒಂದಿಷ್ಟು ಸಮಾಧಾನ: ಓರ್ವರಲ್ಲಿ ಮಾತ್ರ ಪಾಸಿಟಿವ್

ಕಳೆದೆರಡು ದಿನಗಳಿಂದ ದಾಂಡೇಲಿಗರನ್ನು ಭಯ ಬೀಳಿಸುತ್ತಿದ್ದ ದಾಂಡೇಲಿಯಲ್ಲಿ ರವಿವಾರ ಒಂದಿಷ್ಟು ಸಮಾಧಾನದ ಸುದ್ದಿ ಬಂದಿದೆ. ರವಿವಾರ ನಗರದ ಓರ್ವರಲ್ಲಿ ಮಾತ್ರ ಕೊರೊನಾ ಸೋಂಕು ದೃಢವಾಗಿದೆ. ನಗರದ 79 ವರ್ಷದ ಹಿರಿಯ ವೈದ್ಯರಲ್ಲಿ ಪಾಸಿಟಿವ್ ವರದಿ ಬಂದಿದ್ದು ಇವರು ಸೊಂಕಿಗೊಳಗಾಗಿರುವ ನ್ಯಾಯವಾದಿ ಜ್ವರ ೈಂದು ಆಸ್ಪತ್ರೆಗೆ ಬಂದಿದ್ದ ಸಂದರ್ಭದಲ್ಲಿ ತಪಾಸಣೆ […]

ದಾಂಡೇಲಿ

ದಾಂಡೇಲಿಯಲ್ಲಿ ಶನಿವಾರ ಸಿಕ್ಸರ್ ಬಾರಿಸಿದ ಕೊರೋನಾ..!

ಉದ್ಯಮ ನಗರ ದಾಂಡೇಲಿಯಲ್ಲಿ ಶನಿವಾರ ಕೊರೊನಾ ಸಿಕ್ಸರ್ ಬಾರಿಸಿರುವ ಮಾಹಿತಿ ಲಭ್ಯವಾಗುದ್ದು ಇದರಿಂದಾಗಿ ದಾಂಡೇಲಿಯ ಒಟ್ಟೂ ಸೋಂಕಿತರ ಸಂಖ್ಯೆ 32 ಕ್ಕೇರಿದಂತಾಗುದೆ. ಶನಿವಾರ ಆರು ಜನರಲ್ಲಿ ಕೊರೊನಾ ಪಾಸಿಟಿವ್ ದ್ರಢವಾಗಿದ್ದು ಇವರಲ್ಲಿ ಹೆಚ್ಚಿನವರು ಬಸವೇಶ್ವರ ನಗರದವರೆನ್ನಲಾಗುತ್ತಿದೆ. ಇದು ಬಸವೇಶ್ವರ ನಗರದ ಸೋಂಕಿತ ಮಹಿಳೆಯ ಸಂಪರ್ಕದ ಪ್ರಕರಣವಾಗಿದ್ದು, ಇದರ ಜೊತೆಗೆ […]

ದಾಂಡೇಲಿ

ದಾಂಡೇಲಿಯಲ್ಲಿ ಶುಕ್ರವಾರ ಒಂದೇ ದಿನ 8 ಕೊರೊನಾ ಪಾಸಿಟಿವ್… ಇ.ಎಸ್‌.ಐ. ಆಸ್ಪತ್ರೆ ಸಿಬ್ಬಂದಿಗಳಲ್ಲಿಯೂ ಸೋಂಕು

ದಾಂಡೇಲಿ: ನಗರದಲ್ಲಿ ಶುಕ್ರವಾರ ಒಂದೇ ದಿನ ಎಂಟು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯಿಂದ ದಾಂಡೇಲಿಗರು ಆತಂಕಕ್ಕೊಳಗಾಗುವಂತಾಗಿದೆ. ಹುಬ್ಬಳ್ಳಿಯ ಎಸ್.ಡಿ.ಎಮ್. ಗೆ ಹೋಗಿ ಚಿಕಿತ್ಸೆ ಪಡೆದು ಬಂದು ಕೊರೊನಾ ಸೋಂಕಿಗೊಳಗಾಗಿ ಕಾರವಾರ ಕ್ರಿಮ್ಸ್ ಆಸ್ಪತ್ರೆ ಸೇರಿರುವ ಇಲ್ಲಿಯ ಬಸವೇಶ್ವರ ನಗರದ ಗರ್ಭಿಣಿಯ […]

ಈ ಕ್ಷಣದ ಸುದ್ದಿ

ದಾಂಡೇಲಿಗರನ್ನು ಭಯಬೀಳಿಸಲಿದೆ ಇಂದಿನ ಹೆಲ್ತ್ ಬುಲೆಟಿನ್!!

ಇಂದಿನ ಹೆಲ್ತ ಬುಲೆಟಿನ್ ದಾಂಡೇಲಿಗರನ್ನು ಭಯಬೀಳಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಡನಾಡಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಶುಕ್ರವಾರದಂದು ದಾಂಡೇಲಿಯಲ್ಲಿ ಈವರೆಗೆ ಬಂದಿದ್ದ ದಿನದ ವರದಿಗಳಿಗಿಂತ ಹೆಚ್ಚಿನ ಪಾಸಿಟಿವ್ ಪ್ರಕರಣ ದಾಖಲಾಗುವ ಮಾಹಿತಿಯಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ದಾಂಡೇಲಿಯೊಂದರಕ್ಹೆಲೇ ಚ್ಚುಕಮ್ಮಿ 8 ಪಾಸಿಟಿವ್ ಪ್ರಕರಣ ಎಂಬ ಮಾಹಿತಿಯಿದೆ.

ದಾಂಡೇಲಿ

ದಾಂಡೇಲಿ ಪ್ರೆಸ್‌ ಕ್ಲಬ್‌ಗೆ ನೂತನ ಸಾರಥಿಗಳು

ದಾಂಡೇಲಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಂಯೋಜಿತ ದಾಂಡೇಲಿ ಪ್ರೆಸ್‍ಕ್ಲಬ್‍ನ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಯು.ಎಸ್. ಪಾಟೀಲ, ಕಾರ್ಯದರ್ಶಿಗಳಾಗಿ ಗುರುಶಾಂತ ಜಡೆಹಿರೇಮಠ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿ.ಪಿ. ಮಹೇಂದ್ರಕುಮಾರ, ಖಜಾಂಚಿಯಾಗಿ ಕೃಷ್ಣಾ ಪಾಟೀಲ, ಸದಸ್ಯರಾಗಿ ಬಿ.ಎನ್. ವಾಸರೆ, ಸಂದೇಶ ಜೈನ್ ಆಯ್ಕೆಯಾಗಿದ್ದಾರೆ. ಹಾಲಿ ಅಧ್ಯಕ್ಷ ಬಿ.ಎನ್. ವಾಸರೆಯವರ ಅಧ್ಯಕ್ಷತೆಯಲ್ಲಿ […]

ದಾಂಡೇಲಿ

ಸೀಲ್‌ಡೌನ್‌ ಆದ ದಾಂಡೇಲಿಯ ಇ.ಎಸ್.ಐ. ಆಸ್ಪತ್ರೆ

  ದಾಂಡೇಲಿ: ಇಲ್ಲಿಯ ಬಸವೇಶ್ವರ ನಗರದ ಕೊರೊನಾ ಸೊಂಕಿತ ಮಹಿಳೆಯ ಪತಿ ಕಾರ್ಮಿಕರ ವಿಮಾ ಆಸ್ಪತ್ರೆ (ಇ.ಎಸ್.ಐ) ಯಲ್ಲಿ ಗುಮಾಸ್ತನಾಗಿದ್ದ ಕಾರಣಕ್ಕೆ ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ರವಿವಾರ ಬಸವೇಶ್ವರ ನಗರದ ಗರ್ಬಿಣಿ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢವಾಗಿತ್ತು. ಕೊರೊನಾ ಸೋಂಕಿತ  25 ವರ್ಷ  ಗರ್ಬಿಣಿಯ ಪತಿ ನಗರದ ಕಾರ್ಮಿಕರ […]

ದಾಂಡೇಲಿ

ತೈಲ ಬೆಲೆ ಏರಿಕೆ ಖಂಡಿಸಿ ದಾಂಡೇಲಿ ಕಾಂಗ್ರೆಸ್ ಪ್ರತಿಭಟನೆ: ರಾಷ್ಟ್ರಪತಿಗಳಿಗೆ ಮನವಿ

ದಾಂಡೇಲಿ:  ಕೊವಿಡ್ 19 ನಂತಹ ಸಂಕಷ್ಠದ ಸಮಯದಲ್ಲಿಯೂ ಕೇಂದ್ರ ಸರಕಾರ ಪೆಟ್ರೋಲ್, ಡೀಸೈಲ್ ಬೆಲೆಯನ್ನು ಹೆಚ್ಚಿಸಿ ಜನ ಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿದೆ ಎಂದು ಆಕ್ಷೇಪಿಸಿ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ನಗರಸಭೆ ಕಾರ್ಯಲಯದೆದುರು ಪ್ರತಿಭಟನೆ ನಡೆಯಿತು.      ಸರಕಾರದ ತೈಲ ಬೆಲೆ ಏರಿಕೆಯ ನಡೆಯನ್ನು ಖಂಡಿಸಿ […]

ದಾಂಡೇಲಿ

ದಾಂಡೇಲಿಯಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಆರಂಭ

ದಾಂಡೇಲಿ: ನಗರದಲ್ಲಿ ಪ್ರಪ್ರಥಮ ಬಾರಿಗೆ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಆರಂಭವಾಗಿದ್ದು, ಪೌರಾಯುಕ್ತರಾದ ಡಾ. ಸಯ್ಯದ್ ಜಾಹೇದ್ ಅಲಿಯವರು ಈ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶುಭಾಶಯಕೋರಿ ಮಾತನಾಡಿದ ಅವರು ಜನೌಷಧಿ ಕೇಂದ್ರದಲ್ಲಿ ಬಹಳಷ್ಟು ರಿಯಾಯತಿ ದರದಲ್ಲಿ ಔಷಧಿಗಳು ದೊರೆಯುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.ನಗರದ ಜೆ.ಎನ್.ರಸ್ತೆಯ ಡಾ. ಹಿರೇಮಠ […]

ದಾಂಡೇಲಿ

ಶಾಹು ಮಹಾರಾಜ್ ಜಯಂತಿ ಆಚರಣೆ

ದಾಂಡೇಲಿ: ನಗರಕ್ಕೆ ಸಮೀಪದ ಮೌಳಂಗಿಯ ಅಂಬೇಡ್ಕರ ಭವನದಲ್ಲಿ ಶಾಹು ಮಹರಾಜರ 147 ನೇ ಜಯಂತಿ ಕಾರ್ಯಕ್ರಮ ನಡಯಿತು. ಡಾ. ಬಿ.ಆರ್. ಅಂಬೇಡ್ಕರ ಯುವಕ ಸಂಘ ಹಾಗೂ ಮಹಿಳಾ ಮಂಡಳದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಾಂಡೇಲಿ ಗ್ರಾಮೀಣ ಠಾಣೆಯ ಎ.ಎಸ್.ಐ ಮಹಾವೀರ ಕಾಂಬಳೆಯವರು ಶಾಹು ಮಹಾರಾಜರ […]