ದಾಂಡೇಲಿ

ಸಾಕ್ಷರತಾ ಸ್ವಯಂ ಸೇವಕಿಯಾಗಿದ್ದ ಸರಸ್ವತಿಗೊಲಿದ ನಗರಸಭಾ ಅಧ್ಯಕ್ಷತೆಯ ಗದ್ದುಗೆ

ದಾಂಡೇಲಿ: ಅಧಿಕಾರ ವಿಕೇಂದ್ರೀಕರಣ ಮತ್ತು ಮೀಸಲಾತಿ ನೀತಿಯಿಂದಾಗಿ ಸಮಾನ್ಯ ಜನರೂ ಕೂಡಾ ಆಡಳಿತದ ಚುಕ್ಕಣಿ ಹಿಡಿಯಬಹುದೆಂಬುದಕ್ಕೆ ದಾಂಡೇಲಿ ನಗರಸಭೆಯ ನೂತನ ಅದ್ಯಕ್ಷರಾಗಿ ಆಯ್ಕೆಯಾಗಿರುವ ಸರಸ್ವತಿ ರಜಪೂತರವರೇ ಒಂದು ತಾಜಾ ನಿದರ್ಶನ. ಒಂದು ಕಾಲದಲ್ಲಿ ಸಾಕ್ಷರತಾ ಸಂಯೋಜಕಿಯಾಗಿ, ನೊಡೆಲ್ ಅಧಿಕಾರಿಯಾಗಿ, ಟ್ಯೂಶನ್ ಶಿಕ್ಷಕಿಯಾಗಿ ಕಾರ್ಯ ನಿವೃಹಿಸಿದ್ದ ಸರಸ್ವತಿ ಇಂದು ದಾಂಡೇಲಿ […]

ಈ ಕ್ಷಣದ ಸುದ್ದಿ

ದಾಂಡೇಲಿ ನಗರಸಭಾ ಅಧ್ಯಕ್ಷರಾಗಿ ಸರಸ್ವತಿ ರಜಪೂತ, ಉಪಾಧ್ಯಕ್ಷರಾಗಿ ಸಂಜಯ ನಂದ್ಯಾಳಕರ

ದಾಂಡೇಲಿ: ದಾಂಡೇಲಿ ನಗರಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ನ ಸರಸ್ವತಿ ರಜಪೂತ, ಉಪಾಧ್ಯಕ್ಷರಾಗಿ ಸಂಜಯ ನಂದ್ಯಾಳಕರ ಬಹುಮತದಿಂದ ಆಯ್ಕೆಯಾಗಿದ್ದಾರೆ. ನಿರೀಕ್ಷೆಯಂತೆಯೇ ಕಾಂಗ್ರೆಸ್ ಪಕ್ಷ ನಗರಸಭೆ ಆಡಳಿತದ ಚುಕ್ಕಾಣಿ ಹಿಡಿದಿದೆ. ನಗರಸಭೆ ಸಭಾಭವನದಲ್ಲಿ ರವಿವಾರ ಸಂಜೆ 5 ಗಂಟೆಯಿಂದ 8.30 ರವರೆಗೂ ಉಪ ವಿಭಾಗಾಧಿಕಾರಿ ಪ್ರಿಯಾಂಗಾ ಎಮ್. ರವರ ನೇತೃತ್ವದಲ್ಲಿ […]

ಈ ಕ್ಷಣದ ಸುದ್ದಿ

ಶೃದ್ಧಾ-ಭಕ್ತಿಯೊಂದಿಗೆ ಸರಳವಾಗಿ ನಡೆದ ಸತ್ಪುರುಷ ದಾಂಡೇಲಪ್ಪಾ ಜಾತ್ರೆ

ದಾಂಡೇಲಿ: ಪ್ರತಿ ವರ್ಷವೂ ವಿಜಯದಶಮಿಯಂದು ವಿಜ್ರಂಬಣೆಯಿಂದ ನಡೆಯಲ್ಪಡುತ್ತಿದ್ದ ಜಿಲ್ಲೆಯ ಅತೀ ದೊಡ್ಡ ಜಾತ್ರೆಗಳಲ್ಲೊಂದಾದ ದಾಂಡೇಲಿಯ ಜನರ ಆರಾಧ್ಯ ದೈವ “ಸತ್ಪುರುಷ ದಾಂಡೇಲಪ್ಪಾ ಜಾತ್ರೆ” ಈ ವರ್ಷ ಕೊರೊನಾ ಕಾರಣಕ್ಕೆ ಶೃದ್ಧಾ-ಭಕ್ತಿಯೊಂದಿಗೆ ಅತ್ಯಂತ ಸರಳವಾಗಿ ಆಚರಿಸಲ್ಪಟ್ಟಿತು. ರವಿವಾರ ನಸುಕಿನ ಜಾವ ದಾಂಡೇಲಪ್ಪನ ಪಾದುಕಾ ಪಲ್ಲಕ್ಕಿಯು ಪಾದುಕಾ ಸ್ಥಾನ ಮಿರಾಶಿಗಲ್ಲಿಯಿಂದ ಕೆರವಾಡಾ […]

ಈ ಕ್ಷಣದ ಸುದ್ದಿ

ಮೂರು ದಿನಗಳ ನಂತರ ಜಲಾಶಯದಲ್ಲಿ ತೇಲಿಬಂದ ಕಾರ್ಮಿಕನ ಶವ

ದಾಂಡೇಲಿ: ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಯತಪ್ಪಿ ಡ್ಯಾಂ ನಿಂದ ಕೆಳಗಡೆ ಬಿದ್ದ ಸ್ವಚ್ಚತಾ ಕಾರ್ಯ ನಿರ್ವಹಿಸುತ್ತಿದ್ದ ಬೊಮ್ನಳ್ಳಿಯ ಸುಭಾಶ ಬಸಪ್ಪ ಹರಿಜನ್ ಎಂಬ ಹಂಗಾಮಿ ಕಾರ್ಮಿಕನ ಮೃತ ದೇಹ ಘಟನೆ ನಡೆದ ಮೂರು ದಿನಗಳ ನಂತರ ರವಿವಾರ ಮುಂಜಾನೆ ಜಲಾಶಯದ ನೀರಿನಿಂದ ಮೇಲಕ್ಕೆ ತೇಲಿ ಬಂದಿದೆ. ಸೆಪ್ಟಂಬರ 25 […]

Uncategorized

ಭಗತ್ ಸಿಂಗ್ ಸ್ಮರಣಾರ್ಥ ಸೆ. 28ರಂದು ರಕ್ತದಾನ ಶಿಬಿರ

ಭಗತ್ ಸಿಂಗ್ ಯುವ ಬಳಗ, ರೋಟರಿ ಮತ್ತು ಲಯನ್ಸ್ ಕ್ಲಬ್, ರಾಜ್ಯ ಸರಕಾರಿ ನೌಕರರ ಸಂಘ, ಬಂಗೂರನಗರ ಪದವಿ ಕಾಲೇಜಿನ NSS ಘಟಕ ಹಾಗೂ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತ ಭಂಡಾರದ ಸಂಯುಕ್ತ ಆಶ್ರಯದಲ್ಲಿ ಸೆಪ್ಟಂಬರ್ 28 ರಂದು ದಾಂಡೇಲಿಯ ವೀರಭದ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಹುತಾತ್ಮ ಭಗತ್ ಸಿಂಗ್ 123 […]

ಈ ಕ್ಷಣದ ಸುದ್ದಿ

ದಾಂಡೇಲಿಯ ಉದ್ಯಮಿ ರಿಯಾಜ ಅಹ್ಮದ್ ಕಿತ್ತೂರ್ ಇನ್ನಿಲ್ಲ

ದಾಂಡೇಲಿಯ ಯಶಸ್ವೀ ಉದ್ಯಮಿ, ಕಿತ್ತೂರ್ ಟ್ರಾನ್ಸಪೋರ್ಟನ ಮಾಲಕ, ಸಮಾಜ ಸೇವಕ ರಿಯಾಜ ಅಹ್ಮದ್ ಕಿತ್ತೂರ್ ಅವರು ಶನಿವಾರ ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ದಾಂಡೇಲಿ ನಗರಸಭೆಯ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಯಾಸ್ಮಿನ್ ಕಿತ್ತೂರ ಆವರ ಪತಿಯಾಗಿರುವ ಇವರು ನಗರದಲ್ಲಿ ತಮ್ಮದೇ ಆದ ಟ್ರಾನ್ಸಪೋರ್ಟ ಉದ್ಯಮ ಹಾಗೂ ಇನ್ನಿತರೆ ಉದ್ಯಮಗಳನ್ನು […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ 16 ಸಾವಿನ ಜೊತೆ ಸಾವಿರದ ಗಡಿ ದಾಟಿದ ಕೊರೊನಾ

ಇಡೀ ವೀಶ್ವವನ್ನು ತಲ್ಲಣಗೊಳಿಸಿರುವ ಕೊರೊನಾ ವೈರಾಣು ದಾಂಡೇಲಿಯಲ್ಲಿ ಒಂದು ಸಾವಿರದ ಗಡಿ ದಾಟಿದ್ದು, ಇಲ್ಲಿಯವರೆಗೆ 16 ಜನರನ್ನು ಬಲಿ ಪಡೆದುಕೊಂಡಿದೆ. ದಾಂಡೇಲಿಯಲ್ಲಿ ಶನಿವಾರದವರೆಗೆ 1009 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇವರಲ್ಲಿ ಈಗ ಸದ್ಯ 74 ಜನರು ಕೋವಿಡ್ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 949 ಜನರು ಗುಣಮುಖರಾಗಿ ಮನೆ […]

ದಾಂಡೇಲಿ

ದಾಂಡೇಲಿಯಲ್ಲಿ ಶನಿವಾರ 13 ಪಾಸಿಟಿವ್…

ದಾಂಡೇಲಿಯಲ್ಲಿ ಶನಿವಾರ 13 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇಲ್ಲಿಯವರೆಗೆ 872 ಜನರಲ್ಲಿ ಪಾಸಿಟಿವ್ ಬಂದಿದ್ದು 677 ಜನರು ಗುಣಮುಖರಾಗಿದ್ದಾರೆ. 168 ಜನರು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ದಾಂಡೇಲಿಯೊಂದರಲ್ಲೇ ಕೊರೊನಾಕ್ಕೆ 11 ಜನರು ಬಲಿಯಾಗಿದ್ದಾರೆ.

ಈ ಕ್ಷಣದ ಸುದ್ದಿ

ನಿವೃತ್ತ ACF ಮುನವಳ್ಳಿ ಇನ್ನಿಲ್ಲ… ದಾಂಡೇಲಿಯಲ್ಲಿ ಕೊರೊನಾಕ್ಕೆ ಮತ್ತೊಂದು ಬಲಿ…!

ದಾಂಡೇಲಿಯ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸಮಾಜ ಸೇವಕ ವೈ.ಎನ್. ಮುನವಳ್ಳಿ (62) ಯವರು ಕೊನೆಯುಸಿರೆಳೆದರೆಂದು ತಿಳಿಸಲು ವಿಷಾಧವೆನಿಸುತ್ತದೆ. ಕೆಲದಿನಗಳ ಹಿಂದೆ ಕೊರೊನಾ ಪಾಸಿಟಿವ್ ಬಂದು ದಾಂಡೇಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಉಸಿರಾಟದ ತೊಂದರೆಯ ಕಾರಣಕ್ಕೆ ಕಾರವಾರದ ಕ್ರಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕಳೆದೆರಡು ದಿನಗಳಿಂದ ಚೇತರಿಕೆಯಲ್ಲುದ್ದರು. […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ 610 ಕ್ಕೆ ತಲುಪಿದ ಕೊರೊನಾ…. ಗುರುವಾರ…

ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಕೊರೊನಾ ಗುರುವಾರದವರೆಗೆ 610 ಜನರನ್ನು ತನ್ನ ಸೊಂಕಿಗೊಳಪಡಿಸಿಕೊಂಡಿದೆ. ಗುರುವಾರ ದಾಂಡೇಲಿಯಲ್ಲಿ ಮತ್ತೆ 13 ಜನರಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಬಸವೇಶ್ವರ ನಗರ , ಬಾಂಬೇಚಾಳ, ಹಳಿಯಾಳ ರಸ್ತೆಯ ಜನರಲ್ಲಿ ಸೋಂಕು ದೃಢವಾಗಿದೆ. ಬುಧವಾರ ಯಾರೂ ಬಿಡುಗಡೆಯಾಗಿಲ್ಲ. ಆದರೆ ಗುರುವಾರ ಕೆಲವರು […]