ಕಾಗದ ಕಂಪನಿಯ ಗಾಂಧಿ ಪ್ರತಿಮೆಯೆದುರು ಗಾಂಧಿ ತಾತನ ಸ್ಮರಣೆ

ದಾಂಡೇಲಿ : ದಾಂಡೇಲಿ ತಾಲೂಕಾಡಳಿತ, ನಗರಾಡಳಿತ, ವೆಸ್ಟ್ ಕೋಸ್ಟ್ ಪೇಪರ್ ಮಿಲ್, ಪೊಲೀಸ್ ಇಲಾಖೆ, ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪ್ರೆಸ್ ಕ್ಲಬ್ ಇವುಗಳ ಸಂಯುಕ್ತಾಶ್ರಯದಲ್ಲಿ ಬಂಗುರನಗರದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಎದುರು ಗಾಂಧೀಜಿ ಜಯಂತಿ ಕಾರ್ಯಕ್ರಮ ನಡೆಯಿತು.

ನಗರಸಭಾ ಅಧ್ಯಕ್ಷ ಅಶ್ಪಾಕ್ ಶೇಕ್ ತಹಶೀಲ್ದಾರ್ ಶೈಲೇಶ್ ಪರಮಾನಂದ, ಪೌರಾಯುಕ್ತ ರಾಜಾರಾಮ್ ಪವಾರ, ನಗರ ಸಭೆ ಉಪಾಧ್ಯಕ್ಷೆ ಶಿಲ್ಪಾ ಕೋಡೆ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಸುಧಾ ಜಾದವ್, ಡಿವೈಎಸ್ಪಿ ಶಿವಾನಂದ್ ಮದರಖಂಡಿ, ಸಿಪಿಐ ಭೀಮಣ್ಣ ಸೂರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ, ಪ್ರೆಸ್ ಕ್ಲಬ್ ಅಧ್ಯಕ್ಷ ಸಂದೇಶ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಕಾಗದ ಕಂಪನಿಯ ಹಿರಿಯ ಅಧಿಕಾರಿಗಳಾದ ಅಶೋಕ್ ಶರ್ಮ, ಅನುಜ್ ಥಯಾಲ್, ವಿಜಯ್ ಮಹಾಂತೇಶ್, ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ರಾಘವೇಂದ್ರ, ರಾಜೇಶ್ ತಿವಾರಿ ಮುಂತಾದವರು ಮಹಾತ್ಮ ಗಾಂಧಿ ಪುತ್ಥಳಿಗೆ ಪುಷ್ಪಹಾರ ಸಮರ್ಪಣೆ ಮಾಡಿ ಪೂಜೆ ಸಲ್ಲಿಸಿ ಗೌರವ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಅಧ್ಯಕ್ಷ ಅಶ್ಪಾಕ್ ಶೇಖ್, ಗಾಂಧೀಜಿ ನಮ್ಮ ದೇಶದ ಗೌರವವನ್ನು ವಿಶ್ವಕ್ಕೆ ಎತ್ತಿ ಹಿಡಿದಂತಹ ಮಹನೀಯ. ಅವರ ಸತ್ಯ, ಅಹಿಂಸೆಯ ಸಮತೆ ಮತ್ತು ಸೌಹಾರ್ದತೆಯ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು. ಅವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದರು ಅದನ್ನು ನಾವು ಪಾಲಿಸಬೇಕು. ತಮ್ಮ ನಡೆ ನುಡಿ ವಿಚಾರಗಳ ಮೂಲಕವೇ ಮಹಾತ್ಮರಾದ ಗಾಂಧಿಯನ್ನ ಮತ್ತು ಅವರ ವಿಚಾರಗಳನ್ನ ಉಳಿಸಿಕೊಳ್ಳುವ ಕೆಲಸಕ್ಕೆ ನಾವೆಲ್ಲರೂ ಮುಂದಾಗಬೇಕು ಎಂದರು.

ವೆಷ್ಟ್ ಕೋಷ್ಟ್ ಪೇಪರ್ ಮಿಲ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ಸ್ವಾಗತಿಸಿದರು. ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ ವಿಜಯ ಮಹಾಂತೇಶ್ ವಂದಿಸಿದರು. ಕೀರ್ತಿ ಗಾಂವಕರ್ ನಿರೂಪಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರು ಸಾಹಿತಿಗಳು ಪತ್ರಕರ್ತರು ರಾಜಕೀಯ ಮುಖಂಡರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*