ಡಾ. ವಿಠ್ಠಲ ಭಂಡಾರಿ ನೆನಪಿನ ಪ್ರೀತಿಪದ ಕಾರ್ಯಕ್ರಮ: ಪುಸ್ತಕ ಬಿಡುಗಡೆ, ಪ್ರೀತಿಪದ ಸಮ್ಮಾನ
ಕಾರವಾರ: ಇಂದು ಶಿಕ್ಷಿತರೇ ಸುಳ್ಳು ದಾಖಲೆಗಳನ್ನ ಹಾಗೂ ಯಾರೋ ಬಿತ್ತರಿಸುವ ಸುಳ್ಳು ಮಾಹಿತಿಗಳನ್ನು ನಂಬಿ ಭಕ್ತರಾಗುತ್ತಿದ್ದಾರೆ. ಇದು ಪ್ರಜಾ ಪ್ರಭುತ್ವದ ದುರಂತ. ಶಿಕ್ಷಿತ ಸಮಾಜದಲ್ಲಿರುವ ಮೂಡನಂಬಿಕೆಗಳನ್ನು , ಆಂಧ ಭಕ್ತಿಯನ್ನ ಮೊದಲು ಹೋಗಲಾಡಿಸಬೇಕು ಎಂದು ನಾಡಿನ ಹಿರಿಯ ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ನುಡಿದರು.
ಅವರು ಕಾರವಾರದಲ್ಲಿ ನಡೆದ ಪ್ರೀತಿಪದ (ಡಾ. ವಿಠಲ್ ಭಂಡಾರಿ ಸಮಾಜ ಅಧ್ಯಯನ ಕೇಂದ್ರ) ದ ಆಶ್ರಯದಲ್ಲಿ ನಡೆದ ‘ ಬಿಕ್ಕಟ್ಟಿನಲ್ಲಿ ಪ್ರಜಾ ಪ್ರಭುತ್ವ : ಜನ ಚಳುವಳಿಗಳ ಪಾತ್ರ’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಭಾರತ ಪ್ರಜಾಪ್ರಭುತ್ವ ರಾಷ್ಟçವಾಗಿ ೭೫ ವರ್ಷಗಳೇ ಕಳೆದರೂ ಪ್ರಜೆಗಳು ಅಸಮಾನತೆಯ ಬಿಕ್ಕಟ್ಟಿನಲ್ಲಿರುವುದು ವಿಪರ್ಯಾಸ. ನಮ್ಮೊಳಗಿನ ಬಂಡವಾಳಶಾಹಿ ದೌರ್ಜನ್ಯಗಳು ನಿಲ್ಲಬೇಕು. ಇಂದು ಪ್ರಜಾಪ್ರಭುತ್ವದ ಜಾಗದಲ್ಲಿ ಪ್ಯಾಸಿಸಂ ಬಂದು ಮುಟ್ಟಿದೆ. ಇದು ಬಹಳ ಆತಂಕಕಾರಿಯಾದುದ್ದು. ಜನಪರ ಚಳುವಳಿಗಳನ್ನು ರೂಪಿಸದೇ ಇದ್ದರೆ ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿಯೇ ಮುಂದುವರೆಯಲಿದೆ.
ಸುಳ್ಳನ್ನು ಸೃಷ್ಟಿಮಾಡುವ ಆಳುವವರಿಂದ ಪ್ರಜಾಪ್ರಭುತ್ವದ ಅವಸಾನವಾಗುತ್ತಿದೆ. ಯಾರು ತನ್ನ ಪರವಾಗಿದ್ದಾನೋ ಅವನು ಮಾತ್ರ ಸಮಾಜದಲ್ಲಿ ಬದುಕಿರಬೇಕು. ಯಾರು ತನ್ನ ವಿರುದ್ದ ಇದ್ದಾನೋ ಅವನು ಇಲ್ಲಿ ಇರಕೂಡದು ಎನ್ನುವ ಹಿಂಸೆಯ ಕಾ¯ಕ್ಕೆ ನಾವು ತಲುಪಿದ್ದೇವೆ. ಪ್ರಾಯಶ: ಪ್ರಜಾಪ್ರಭುತ್ವ ಎನ್ನುವುದು ಭಾರತದಲ್ಲಿ ಅಂತಿಮ ಘಟ್ಟ ತಲುಪುತ್ತಿದೆಯೇ ಎನ್ನುವಂತ ಸಂಶಯ ಉಂಟಾಗಿದೆ. ಇದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ .
ದೇಶದಲ್ಲಿ ಪ್ರಜಾಪ್ರಭುತ್ವ ಹುಟ್ಟಿದ್ದೇ ಬಿಕ್ಕಟ್ಟಿನಲ್ಲಿ. ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿ ಇದೆ ಎಂಬ ಅರಿವು ನಮಗೆ ಬಾರದಿರುವುದೇ ದೊಡ್ಡ ಬಿಕ್ಕಟ್ಟಾಗಿದೆ. ಹೀಗಾಗಿ ಪ್ರಜಾಪ್ರಭುತ್ವ ಸ್ವಾರ್ಥಿಗಳ ಪಾಲಾಗಿದ್ದು, ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಎಣಿಸಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ. ಪ್ರಜಾಪ್ರಭುತ್ವ ಉಳಿಯಬೇಕು ಅಂತಿದ್ದರೆ ಯಾರು ಆಡಳಿತದಲ್ಲಿ ಉಳಿಯುತ್ತಾರೋ ಅವರು ಜನರ ಅಭಿಪ್ರಾಯವನ್ನ ಕೇಳಿಸಿಕೊಳ್ಳಬೇಕು. ಅವರು ತಮ್ಮ ಬಗ್ಗೆ ಪ್ರಜೆಗಳೋ ಆಥವಾ ಮಾದ್ಯಮದವರೋ ಟೀಕೆ ಮಾಡಿದ್ರೆ, ತಾವೇ ತಮ್ಮ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ನಾವು ಸರಿಯಾದ ದಾರಿಯಲ್ಲಿ ಇದ್ದೀವಾ ಎಂದು ಚಿಂತನೆ ಮಾಡಬೇಕು. ಆದರೆ ಈಗ ಯಾವ ಮಟ್ಟಕ್ಕೆ ತಲುಪಿದೆ ಎಂದುರೆ ಮಾತಾಡಿದರೆ ದಾಳಿನಡೆಸುವಂತಹ ವ್ಯವರ್ಸಥೆ ಎದುರಾಗಿದೆ ಖೇದ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ ಪರವಾಗಿ ಮಾತನಾಡಿದವರಿಗೆ ಯಾವ ರೀತಿಯಿಂದ ಹಗೆ ಸಾಧಿಸಲಾಗಿದೆ ಎನ್ನುವದನ್ನು ನಾವೆಲ್ಲ ನೋಡಿದ್ದೇವೆ. ಇದು ಪತ್ರಿಕೆಗಳಿಗೂ ಹೊರತಾಗಿಲ್ಲ. ವಾಸ್ತವ ಸಂಗತಿಗಳನ್ನ ಹೊರ ಚೆಲ್ಲಿದ್ದಕ್ಕೆ ಆಡಳಿತದಲ್ಲಿದ್ದವರು ಆ ಪತ್ರಿಕೆಯವರನ್ನು ಜೈಲಿಗಟ್ಟುವ ಕೆಲಸ ಮಾಡಿದ್ದಾರೆ. ಸುಳ್ಳುಗಳನ್ನು ಸೃಷ್ಠಿ ಮಾಡುವ ಸರಕಾರಗಳಿಗೆ ಅದನ್ನು ಪ್ರಶ್ನೆ ಮಾಡಿದ್ರೆ ದೇಶದಲ್ಲಿ ಹಸಿವೇ ಇಲ್ಲ ಎನ್ನುವಂತೆ ವಾಸ್ತವದ ಬದಲಾಗಿ ವಾಸ್ತವದಲ್ಲಿ ಇಲ್ಲದನ್ನು ಹೆಚ್ಚಾಗಿ ವಿಜ್ರಂಭಿಸಿ ಪ್ರಜಾಪ್ರಭುತ್ವನ್ನು ನಾಶ ಮಾಡುತ್ತಿದ್ದಾರೆ. ದೇಶದಲ್ಲಿ ಹಸಿವು ಎಷ್ಟಿದೆ ಎಂದು ಕೆಲವು ಸಂಸ್ಥೆಗಳು ಅಂಕೆ ಸಂಖ್ಯೆಗಳು ಕೊಟ್ಟಾಗ ಈ ಸಂಸ್ಥೆಗಳು ಸುಳ್ಳು ಹೇಳುತ್ತಿವೆ. ಯಾರು ಆ ಸತ್ಯವನ್ನು ನಮ್ಮೆದುರಿಗೆ ಹೇಳುತ್ತಾ ಇದ್ದಾರೋ ಅವರು ದ್ವನಿ ಎತ್ತದಂತೆ ಸತ್ಯವನ್ನ ಜನತೆಯ ಎದುರಿಗೆ ಇಡದೇ ಇರುವ ಹಾಗೆ ಪ್ರಯತ್ನಗಳು ನಡೆಯುತ್ತಿದೆ ಎಂದರೆ ಪ್ರಜಾಪ್ರಭುತ್ವ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದನ್ನು ನಾವೆಲ್ಲೂ ಗಂಬೀರವಾಗಿ ಚಿಂತಿಸಬೇಕಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ರಾಜೇಂದ್ರ ಚೆನ್ನಿ ಜನ ಚಳುವಳಿಗಳ ಅಗತ್ಯತೆಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಮರ್ಷಕ, ಸಾಹಿತಿ ಡಾ. ಎಂ.ಜಿ ಹೆಗಡೆ ಮಾತನಾಡಿ ಜಿಲ್ಲೆಯ ಹಾಗೂ ನಾಡಿನ ಸೌಹಾರ್ಧತೆ ಮತ್ತು ಸಮಾನತೆಯನ್ನು ಉಳಿಸಿ ಮುಂದುವರೆಸಿಕೊAಡು ಹೋಗಲು ಪ್ರೀತಿ ಪದದಂತ ಕಾರ್ಯಕ್ರಮಗಳು ಅತ್ಯಂತ ಪರಿಣಾಮಕಾರಿ. ಡಾ. ವೀಟ್ಠಲ ಭಂಡಾರಿ ನೆನಪಿನ ಈ ಕಾರ್ಯಕ್ರಮದ ಮೂಲಕ ಸಮ ಸಮಾಜ ನಿರ್ಮಾಣದ ಬೀಜವನ್ನು ಎಲ್ಲರೆದೆಯಲ್ಲಿ ಬಿತ್ತುವ ಕೆಲಸ ಮಾಡಲಾಗುತ್ತದೆ ಎಂದರು.
ಯಮುನಾ ಗಾಂವ್ಕರ್ ಅವರ ‘ಬೆಂದ ಅಕ್ಕಿಯ ಘಮಲು’ ಕವನ ಸಂಕಲನ ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಕೃಷ್ಣಾ ನಾಯ್ಕ ಯಮುನಾ ಗಾಂವಕರವರವರು ತಮ್ಮ ಕವಿತೆಗಳ ಮೂಲಕ ಸಮಾಜದ ಆಗು ಹೋಗುಗಳ, ಶೋಷಣೆಗಳ, ಹಸಿವಿನ ಚಿತ್ರಣಗಳನ್ನು ಚಿತ್ರಿಸಿದ್ದಾರೆ. ಪ್ರತಿಯೊಂದು ಕವಿತೆಗಳಲ್ಲಿ ಒಂದೊAದು ಸಂದೇಶಗಳಿವೆ ಎಂದರು. ಪ್ರೀತಿಪದ ಜಾಲತಾಣಕ್ಕೆ ಚಾಲನೆ ನೀಡಿದ ಚಿಂತಕ ನವೀನಕುಮಾರ ಹಾಸನ ಈ ಸೋಶಿಯಲ್ ಮೀಡಿಯಾದ ಮೂಲಕ ವಿಠ್ಠಲನ ವಿಚಾರಗಳ ಜೊತೆಗೆ ವರ್ತಮಾನದ ಅಗತ್ಯತೆಗಳ ಬಗ್ಗೆಯೂ ಮಾಹಿತಿ ನೀಡಲಾಗುವುದೆಂದರು.
ಶ್ರಮಜೀವಿ ಸಾಂಸ್ಕೃತಿಕ ಅಭಿವೈಕ್ತಿಗೆ ಚಾಲನೆ ನೀಡಿದ ಜನಪದ ಕಲಾವಿದೆ ನುಗ್ಲಿ ಗೌಡಾರವರು ತಮ್ಮ ಸಂಗಡಿಗರ ಜೊತೆ ಹಾಲಕ್ಕಿಗಳ ಜನಪದ ಹಾಡು ಮತ್ತು ನರ್ತನ ಪ್ರದರ್ಶಿಸಿದರು. ಸಿದ್ದಿಗಳ ಜನಪದ ನೃತ್ಯವೂ ಪ್ರದರ್ಶನಗೊಂಡಿತು. ಸ್ವಾಮಿ ಗಾಮನಹಳ್ಳಿ ಶ್ರಮ ಜೀವಿಗಳ ಹಾಡನ್ನು ಪ್ರಸ್ತುತ ಪಡಿಸಿದರು.
ವೇದಿಕೆಯಲ್ಲಿ ಹಿರಿಯ ಸಹಕಾರಿ ಧುರೀಣ ಜೋರ್ಜ್ ಫರ್ನಾಂಡೀಸ್; ಸಾಹಿತಿ ಮಾಧವಿ ಭಂಡಾರಿ ಉಪಸ್ಥಿತರಿದ್ದರು. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್ ವಾಸರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ತಾಲುಕಾಧ್ಯಕ್ಷ ರಾಮಾ ನಾಯ್ಕ ಸ್ವಾಗತಿಸಿದರು. ಸಿ.ಆರ್ ಶಾನಭಾಗ ಮತ್ತು ಯಮುನಾ ಗಾಂವ್ಕರ್ ನಿರ್ವಹಿಸಿದರು. ಗಣೇಶ ರಾಥೋಡ ವಂದಿಸಿದರು.
ಪ್ರೀತಿಪದ ಸಮ್ಮಾನ
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಶೋಶಿತರ ಪರ ಹೋರಾಟಗಾರ ಜಿ.ಡಿ ಮನೋಜೆಯವರಿಗೆ ಪ್ರೀತಿಪದ ಸಮ್ಮಾನ ನೀಡಿ ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರೀತಿ ನಾಯ್ಕ, ರಂಜಿತ್ ಸಿದ್ದಿ, ಆಕಾಶ್ ನಾಯ್ಕ, ಶ್ರೀ ರಕ್ಷಾ ಗೋಳಿಕಟ್ಟಿ, ಗಣಪತಿ ರಾಠೋಡ್ ವಿಜೇತ್ ನಾಯ್ಕ, ಅನನ್ಯಾ ಶೆಟ್ಟಿ, ಸಫಲ್ ಕೆರೆಕೋಣ ಇವರಿಗೆ ವಿದ್ಯಾರ್ಥಿ ಸಮ್ಮಾನ ನೀಡಿ ಗೌರವಿಸಲಾಯಿತು. ಸನ್ಮಾನಿತರ ಪರ ಜಿ.ಡಿ. ಮನೋಜೆ ಮಾತನಾಡಿದರು.
Be the first to comment