ದಾಂಡೇಲಿ : ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಶಮಾನೋತ್ಸವದ ಅಂಗವಾಗಿ ಜುಲೈ 12 ರಂದು ಮುಂಜಾನೆ 10 ಗಂಟೆಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಭಿರ ನಡೆಯಲಿದೆ.
ಕಾಲೇಜಿನ ಯುವ ರೆಡ್‌ಕ್ರಾಸ್, ಎನ್.ಸಿ.ಸಿ, ಎನ್.ಎಸ್.ಎಸ್, ಸ್ಕೌಟ್ಸ್ & ಗೈಡ್ಸ್ ಘಟಕ, ಶ್ರೀ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಹಳಿಯಾಳ, ಕೆನೆರಾ ಬ್ಯಾಂಕ್ ದೇಶಪಾಂಡೆ ಆರ್.ಸೆಟಿ ಹಳಿಯಾಳ, ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ, ರಕ್ತ ಭಂಡಾರ ಕೇಂದ್ರ, ನವನಗರ, ಹುಬ್ಬಳಿ, ಸಾರ್ವಜನಿಕ ಆಸ್ಪತ್ರೆ, ದಾಂಡೇಲಿ, ಇವರ ಸಹಯೋಗದಲ್ಲಿ ಈ ರಕ್ತದಾನ ಶಿಬಿರ ನಡೆಯಲಿದೆ.
ವಿ.ಆರ್. ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ ನ ಆಡಳಿತಾದಿಕಾರಿ ಪ್ರಕಾಶ ಪ್ರಭು ಶಿಭಿರ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಡಾ ಅನಿಲಕುಮಾರ ತಾಲೂಕಾ ಆರೋಗ್ಯಾಧಿಕಾರಿಗಳು, ದಾಂಡೇಲಿ, ಡಾ. ರಾಜೇಶಪ್ರಸಾದ ಹಿರಿಯ ವೈದ್ಯರು, ದಾಂಡೇಲಿ, ಡಾ. ಉಮೇಶ ಹಳ್ಳಿಕೇರಿ ವೈದ್ಯಾಧಿಕಾರಿಗಳು, ಕರ್ನಾಟಕ ಕಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ, ರಕ್ತ ಭಂಡಾರ ಕೇಂದ್ರ ನವನಗರ, ಹುಬ್ಬಳ್ಳಿ, ಪಾಲ್ಗೊಳ್ಳಲಿದ್ದಾರೆ. ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಡಾ ಬಿ.ಎನ್.ಅಕ್ಕಿ ಗೌರವ ಉಪಸ್ಥಿತಿಯನ್ನು ವಹಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ. ಡಿ. ಒಕ್ಕುಂದರವರು, ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶಿಭಿರದಲ್ಲಿ ಪಾಲ್ಗೊಳ್ಲಕುವಂತೆ ಶಿಬಿರದ ಸಂಚಾಲಕರಾದ ಡಾ. ಮಂಜುನಾಥ ಜಿ. ಚಲವಾದಿ, ಡಾ ನಾಸೀರಅಹ್ಮದ ಜಂಗೂಭಾಯಿ, ಶ್ರೀಮತಿ ತಸ್ಲೀಮಾ ಎಂ. ಜೋರುಮ್ ಮತ್ತು ಶ್ರೀ ವಿನಾಯಕ ಚವ್ಹಾಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment