ಸರಕಾರಿ ಪದವಿ ಕಾಲೇಜಿನ ದಶಮಾನೋತ್ಸವ ವರ್ಷಾಚರಣೆಯ ಉದ್ಘಾಟನಾ ಸಮಾರಂಭ

ದಾಂಡೇಲಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದಶಮಾನೋತ್ಸವ ವರ್ಷಾಚರಣೆಯ ಉದ್ಘಾಟನಾ ಸಮಾರಂಭವು ಜುಲೈ 10 ರಂದು ಮುಂಜಾನೆ 11 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

2013 ಜುಲೈ 10 ರಂದು ಆರಂಭವಾದ ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು 2023 ಜುಲೈ 10 ಕ್ಕೆ ಸ್ಥಾಪನೆಯಾಗಿ ಸಾರ್ಥಕ ಹತ್ತು ವರ್ಷಗಳನ್ನು ಪೂರೈಸುತ್ತದೆ. ಕೇವಲ ಹತ್ತು ವರ್ಷಗಳಲ್ಲಿ ಬೆಳೆದು ನಿಂತ ಈ ಸಂಸ್ಥೆ ದಾಂಡೇಲಿ ಭಾಗದ ಮಕ್ಕಳ ಉನ್ನತ ಶಿಕ್ಷಣಕ್ಕೆ ದಾರಿದೀಪವಾಗಿದೆ. ದಶಕದ ಸಂಭ್ರಮದ ನಿಮಿತ್ತ ವರ್ಷದುದ್ದಕ್ಕೂ ವಿವಿಧ ಕಾರ್ಯಕ್ರಮ, ಚಟುವಟಿಕೆ, ಸ್ಪರ್ಧೆ ಇತ್ಯಾದಿಗಳಿಂದ ವರ್ಷಾಚರಣೆಯನ್ನು ಬಹು ಅರ್ಥಪೂರ್ಣವಾಗಿ ಆಚರಿಸಲು ಯೋಜಿಸಲಾಗಿದೆ. ಅದರ ಭಾಗವಾಗಿ ದಶಮಾನೋತ್ಸವ ವರ್ಷಾಚರಣೆಯ ಉದ್ಘಾಟನಾ ಸಮಾರಂಭವನ್ನು ಜುಲೈ 10 ರ ಬೆಳಿಗ್ಗೆ 11.00 ಗಂಟೆಗೆ ಕರ್ನಾಟಕ ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ದೇಶಕರಾದ ಡಾ.ಎಸ್.ಎಂ.ತುವಾರ ನೆರವೇರಿಸಲಿದ್ದಾರೆ.

ದಾಂಡೇಲಿ ನಗರಸಭೆಯ ಆಯುಕ್ತರಾದ ಆರ್.ಎಸ್.ಪವಾರ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಸರಸ್ವತಿ ರಜಪೂತ, ಎಸ್. ಎಂ.ಕಾಚಾಪೂರ, ಎ.ಕೆ.ಶೇಣ್ವಿ, ಯಾಸ್ಮೀನ ಕಿತ್ತೂರ, ಯು.ಎಸ್. ಪಾಟೀಲ, ರಾಜೇಶ ತಿವಾರಿ, ಮಹಮದ್‌ ಇಕ್ಬಾಲ್‌ ಶೇಖ, ಬಶೀರ್‌ ಅಹಮದ್‌ ಗಿರಿಯಾಲ, ರವಿಕುಮಾರ ಜಿ.ನಾಯಕ, ಎಸ್.‌ ವೈ.ಹಾದಿಮನಿ, ಸಂಜಯ ನಂದ್ಯಾಳಕರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಎಸ್.‌ವಿ.ಚಿಂಚಣಿ, ಇತಿಹಾಸ ಪ್ರಾಧ್ಯಾಪಕರಾದ ಡಾ.ಬಿ.ಎನ್. ಅಕ್ಕಿ ಗೌರವ ಉಪಸ್ಥಿತಿ ಇರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಎಂ.ಡಿ.ಒಕ್ಕುಂದ ವಹಿಸಲಿದ್ದಾರೆ ಎಂದು ಕಾಲೇಜು ದಶಮಾನೋತ್ಸವ ಆಚರಣಾ ಸಮಿತಿ ತಿಳಿಸಿದೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*