ದಾಂಡೇಲಿ: ಅತಿವೃಷ್ಠಿಯಿಂದ ಶಾಲೆಗಳಿಗೆ ನೀಡಿದ್ದ ರಜಾ ದಿನಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಅಗಸ್ಟ್ 13 ರಿಂದ ಸೆಪ್ಟಂಬರ 03 ರವರೆಗೆ ಬರುವ ಶನಿವಾರದಂದು ಪೂರ್ತಿ ದಿನ ಶಾಲೆ ನಡೆಸುವಂತೆ ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ.
ಅತಿಯಾದ ಮಳೆ ಹಾಗೂ ನೆರೆಯ ಸಂದರ್ಭದಲ್ಲಿ ನೀಡಿದ್ದ ರಜೆಗಳನ್ನು ಮಕ್ಕಳ ಶೈಕ್ಷಣಿಕ ಹಿತ ದೃಷ್ಠಿಯಿಂದ ಹೊಂದಿಸಲು ಅಗಸ್ಟ್ 13, ಅಗಸ್ಟ್ 20, ಅಗಸ್ಟ್ 27, ಸೆಪ್ಟಂಬರ 03 ಹಾಗೂ ಅಗಸ್ಟ್ 14 ರಂದೂ ಕೂಡಾ ಪೂರ್ತಿ ದಿನ ಶಾಲೆ ನಡೆಸುವಂತೆ ಹಳಿಯಾಳ-ದಾಂಡೇಲಿಯ ಶಾಲಾ ಮುಖ್ಯಾಧ್ಯಾಪಕರಿಗೆ ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರ್ದೇಶಿಸಿದ್ದಾರೆ.
ಆದೇಶ ಪ್ರತಿ…..
Be the first to comment