ದಾಂಡೇಲಿಯಲ್ಲಿ ಜನಮನ ರಂಜಿಸಿದ ರಾಮಾಂಜನೇಯ ಹಾಗೂ ನಾಗಶ್ರೀ ಯಕ್ಷಗಾನ

ದಾಂಡೇಲಿ: ನಗರದ ಕಲಾಶ್ರೀ ಸಂಸ್ಥೆಯ ಆಶ್ರಯದಲ್ಲಿ ಕುಂದಾಪುರದ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ದಾಂಡೇಲಿಯ ವಿದ್ಯಾಧಿರಾಜ ಸಭಾಭವನದಲ್ಲಿ ನಡೆದ ರಾಮಾಂಜನೇಯ ಹಾಗೂ ನಾಗಶ್ರೀ ಎಂಬ ಯಕ್ಷಗಾನ ಜನಮನ ರಂಜಿಸುವಲ್ಲಿ ಯಶಸ್ವಿಯಾಯಿತು .

ನಗರದ ಕಲಾಶ್ರೀ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ದಾಂಡೇಲಿಯಲ್ಲಿ ಪ್ರತಿವರ್ಷ 2 ಯಕ್ಷಗಾನ ಪ್ರದರ್ಶಿಸುತ್ತ ಬಂದಿತ್ತು. ಅದರೆ ಕೋವಿಡ್ ಕಾರಣಗಳಿಂದ ಕಳೆದೆರಡು ವರ್ಷಗಳಿಂದ ಅದು ಸಾಧ್ಯವಾಗಿರಲಿಲ್ಲ . ಈ ವರ್ಷ ಮತ್ತೆ ದಾಂಡೇಲಿಯಲ್ಲಿ ಯಕ್ಷಗಾನದ ಸೊಬಗು ಜನರಿಗೆ ಸಿಕ್ಕಂತಾಗಿದೆ.

ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಹೆಸರಾಂತ ಭಾಗವತರಾದ ರಾಘವೇಂದ್ರ ಮಯ್ಯ ಹಾಗೂ ರಾಮಕಷ್ಣ ಹಿಲ್ಲೂರವರು ಭಾಗವತರವರ ಕಂಠಸಿರಿ ಯಕ್ಷಗಾನದ ಸೊಬಗನ್ನು ಹೆಚ್ಚಿಸಿತ್ತು. ರಾಮಾಂಜನೇಯದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆಯವರು ರಾಮನಾಗಿ ಹಾಗೂ ತೋಟಿಮನೆ ಗಣಪತಿ ಹೆಗಡೆಯವರು ಆಂಜನೇಯನಾಗಿ ಮನೋಜ್ಞ ಅಭಿನಯ ನೀಡಿದರು. ತರ್ಕಬದ್ದವಾದ ಹಾಗೂ ಸಾಂದರ್ಭಿಕವಾದ ಮಾತುಗಳ ಮೂಲಕ ಪ್ರಸಂಗಕ್ಕೆ ಮೆರಗು ತಂದರು.

ನಾಗಶ್ರೀ ಪ್ರಸಂಗದಲ್ಲಿ ಕೋಡಿ ವಿಶ್ವನಾಥ ಗಾಣಿಗ, ತೊಂಬೆಟ್ಟು ವಿಶ್ವನಾಥ ಆಚಾರ್ಯ’ ಹೊಸಪಟ್ಟಣ ಚಂದ್ರಹಾಸ ಗೌಡ, ಸಿದ್ಧಾಪುರ ನಿತಿನ್ ಶೆಟ್ಟಿ, ಉಪ್ಪುಂದ ಕೃಷ್ಣ ದೇವಾಡಿಗ, ವಸಂತ್ ನಾಯ್ಕ, ಮಂಜುನಾಥ ಶೆಟ್ಟಿ, ರಜಿತ್ ಕುಮಾರ್ ವಂಡ್ಸೆ ಮುಂತಾದವರು ಉತ್ತಮ ಅಭಿನಯ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಕಡತೋಕ ರಮೇಶ ಭಂಡಾರಿಯವರ ಮದ್ದಳೆ, ಮುರೂರು ಸುಬ್ರಹ್ಮಣ್ಯ ಭಟ್ ಅವರ ಚಂಡೆ ವಾದನ ಸಮತೂಕದಿಂದ ಕೂಡಿತ್ತು.

 ಈ ಯಕ್ಷಗಾನ ಉಚಿತ ಪ್ರದರ್ಶನವಾಗಿತ್ತು.  ಕಲಾಶ್ರೀ ಸಂಸ್ಥೆಯ ಅಧ್ಯಕ್ಷ ಎಸ್. ಪ್ರಕಾಶ್ ಶೆಟ್ಟಿ ,  ಉಪಾಧ್ಯಕ್ಷ ಸುರೇಶ್ ಕಾಮತ್, ಕಾರ್ಯದರ್ಶಿ ಕೀರ್ತಿ ಗಾಂವಕರ್ ಖಜಾಂಚಿ ಸುಧಾಕರ್ ಶೆಟ್ಟಿ ಪದಾಧಿಕಾರಿಗಳಾದ ಬಿ. ಎನ್. ವಾಸರೆ, ಶೇಖರ್ ಪೂಜಾರಿ'  ಉದಯ ಶೆಟ್ಟಿ, ಸೋಹನ ಶೆಟ್ಟಿ, ರಾಮಣ್ಣ ಹೆಬ್ಬಾರ್, ಕರುಣಾಕರ್ ಶೆಟ್ಟಿ ಹಾಗೂ  ಮುಂತಾದವರು ಹಾಗೂ ನಗರದ  ದಾನಿಗಳನೇಕರು ಯಕ್ಷಗಾನ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು. 

ವಿಡಿಯೋ ವೀಕ್ಷಿಸಿ
About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*