ನವರಾತ್ರಿಯ ಏಳು ದಿನ ಅಖಂಡ ಹರಿಕೀರ್ತನ: ದಾಂಡೇಲಿಯಲ್ಲಿ ನಡೆಯುತ್ತಿದೆ ದಿನವಿಡೀ ಭಜನ

ವರ್ಷಂಪ್ರತಿಯಂತೆ ನವರಾತ್ರಿ ಸಂದರ್ಭದಲ್ಲಿ ಏಳುದಿನಗಳ ಕಾಲ ನಡೆಯುವ ಅಖಂಡ ಹರಿಕೀರ್ತನ ಸಪ್ತಾಹ ಹಾಗೂ ಭಜನ ಕಾರ್ಯಕ್ರಮ ದಾಂಡೇಲಿ ಕಾಗದ ಕಂಪನಿಯ ರಂಗನಾಥ ಸಭಾಂಗಣದ ಬಳಿಯಲ್ಲಿ ನವ ಯುವಕ ಸಂಘದ ನೇತೃತ್ವದಲ್ಲಿ ಗುರುವಾರದಿಂದ ಆರಂಭವಾಗಿದೆ.

ಇದು ರಾಜಸ್ಥಾನದಿಂದ ಬಳುವಳಿಯಾಗಿ ಬಂದಿರುವ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಕಾಗದ ಕಂಪನಿಯಲ್ಲಿ ರಾಜಸ್ಥಾನದ ಜನರು ಸಾಕಷ್ಟು ಉದ್ಯೋಗಿಗಳಿರುವುದರಿಂದ ಕಳೆದ 65 ವರ್ಷಗಳಿಂದ ಈ ಅಖಂಡ ಹರಿ ಕೀರ್ತನ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ನವರಾತ್ರಿಯ ಮೊದಲ ದಿನದಿಂದ ನಿರಂತರವಾಗಿ ಏಳು ದಿನ ಈ ಭಜನ ಸಪ್ತಾಹ ನಡೆಯುತ್ತದೆ.

  ಶ್ರೀರಾಮ ಸೇರಿದಂತೆ ಹಲವು ದೇವರುಗಳ ಪೋಟೋಗಳನ್ನಿಟ್ಟು  ಗದ್ದುಗೆ ನಿರ್ಮಿಸಿ ಪೂಜೆ ನಡೆಯುತ್ತಿರುವುದು ಒಂದ ಕಡೆಯಾದರೆ, ಅದೇ ಆವಾರದಲ್ಲಿ ಭಕ್ತರು ನಿರಂತರವಾಗಿ ಪ್ರದಕ್ಷಿಣೆ ಹಾಕುತ್ತ, ಭಜನ ಮಾಡುತ್ತಿರುತ್ತಾರೆ. ಜೊತೆ ಜೊತೆಗೆ ದಿನದ 24 ಗಂಟೆಗಳ ಕಾಲ ಇಲ್ಲಿ ನಿರಂತರವಾಗಿ ಹರಿ ಕೀರ್ತನ, ಭಜನ ಕೂಡಾ ನಡೆಯುತ್ತಿರುತ್ತದೆ. ಈ ಭಜನ ಕಾರ್ಯಕ್ರ,ದಲ್ಲಿ ದಾಂಡೇಲಿಯ ಎಲ್ಲ ಸಮುದಾಯದ ಭಜನ ತಂಡಗಲೂ ಭಾಗವಹಿಸಿ ಸೇವೆ ಒಪ್ಪಿಸುವುದು ವಿಶೇಷವಾಗಿರುತ್ತದೆ. ಏಳು ದಿನಗಳ ಕಾಲ ನಿರಂತರವಾಗಿ  ಡೋಲು ಬಾರಿಸಲಾಗುತ್ತಿದ್ದು, ಅತಿಮ ದಿನದಂದು ಜೋರಾಗಿ ಡೋಲು ಬಾರಿಸಿ ಕಾರ್ಯಕ್ರಮಕ್ಕೆ ಸಂಪನ್ನ ಹೇಳಲಾಗುತ್ತದೆ. 

ನವ ಯುವಕ ಮಂಡಳದ ಸದಸ್ಯರು ಇದರ ಉಸ್ತುವಾರಿ ನೋಡಿಕೊಳ್ಳುತ್ತಾರೆ. ನವರಾತ್ರಿಯ ಏಳು ದಿನಗಳ ಕಾಲ ಇಲ್ಲಿ ಭಜನ ಸಪ್ತಾಹ ನಡೆಯುತ್ತಿದ್ದು, ರಾಜಸ್ಥಾನ ಮೂಲದ ಜನರಷ್ಟೇ ಅಲ್ಲದೇ ಇಡೀ ದಾಂಡೇಲಿಯ ಜನರು ಇಲ್ಲಿ ಬಂದು ಪೂಜೆ ಸಲ್ಲಿಸುವುದು ವಿಶೇಷವಾಗಿದೆ.

ಈ ಕಾರ್ಯಕ್ರಮದ ಆಯೋಜನೆಯ ಕುರಿತಂತೆ ಮುಂಜಾವು ಡಿಜಿಟಲ್ ಜೊತೆ ಮಾತನಾಡಿರುವ ನವ ಯುವಕ ಸಂಘದ ಮಾಜಿ ಅಧ್ಯಕ್ಷ ರಾಜೇಶ ತಿವಾರಿಯವರು ನವರಾತ್ರಿಯ ಸಂದರ್ಭದಲ್ಲಿ ಸತತ ಏಳು ದಿನಗಳ ಕಾಲ ಭಜನ ಮಾಡುವ ಜೊತೆಗೆ ಭಕ್ತಿಯ ಸೇವೆ ಒಪ್ಪಿಸುವುದೇ ಅಖಂಡ ಭಜನ ಸಪ್ತಾಹ ಕಾರ್ಯಕ್ರಮವಾಗಿದ್ದು, ಇದು ರಾಜಸ್ಥಾನ ಮೂಲದಿಂದ ಬಂದಂತಹ ಧಾರ್ಮಿಕ ಕಾರ್ಯಕ್ರಮವಾಗಿದೆ. ಕಾಗದ ಕಂಪನಿ ದಾಂಡೇಲಿಯಲ್ಲಿ ಆರಂಭವಾದಾಗಿನಿಂದ ಇದು ಇಲ್ಲಿ ನಡೆದುಕೊಂಡು ಬರುತ್ತಿದೆ. ನಗರದ ಎಲ್ಲ ಭಜನಾ ಮಂಡಳಿಯವರೂ ಇಲ್ಲಿ ಬಂದು ಸೇವೆಯೊಪ್ಪಿಸುತ್ತಾರೆ.  ಇದು ದೇವರನ್ನು ಅರಾಧಿಸುವ ಒಂದು ಕ್ರಮವಾಗಿದ್ದು, ಈ ಆರಾಧನೆಯಿಂದ ದೇವರು ಒಳ್ಳೆಯದ್ದು ಮಾಡುತ್ತಾನೆಂಬ ನಂಬಿಕೆ ಎಲ್ಲರದ್ದಾಗಿದೆ ಎಂದಿದ್ದಾರೆ.

ಭಜನಾ ಸಪ್ತಾಹದ ವಿಡಿಯೋ ನೋಡಿ…..

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*