ತೊರ್ಕೆ ಗಜಾನನ ನಾಯಕ ಇನ್ನು ನೆನಪು ಮಾತ್ರ

ಕಾರವಾರ: ಮುಂಬೈನ ಮಫತಲಾಲ್ ಗ್ರುಪಿನ ಐ.ಡಿ.ಐ ಕಂಪನಿಯಲ್ಲಿ ಉದ್ಯೋಗಿಯಾಗಿ ಸ್ವಯಂ ನಿವೃತ್ತಿ ಪಡೆದು, ಸದ್ಯ ಬೆಂಗಳೂಲ್ಲಿ ವಾಸವಾಗಿದ್ದ ಗಜಾನನ ನಾರಾಯಣ ನಾಯಕ, ತೊರ್ಕೆಯವರು (70) ಕೊನೆಯುಸಿರೆಳೆದಿದ್ದಾರೆ.

ಮೂಲತಹ ಕುಮಟಾ ತಾಲೂಕಿನ ತೊರ್ಕೆಯವರಾಗಿರುವ ಇವರು ತೊರ್ಕೆಯ ಶಿಕ್ಷಕ, ನಾಟಿ ವೈದ್ಯ ದಿ. ನಾರಾಯಣ ಮಾಸ್ತರರ ಎರಡನೆಯ ಮಗ. ಅಂಕೋಲಾದ ಹಿರಿಯ ಸಾಹಿತಿ ನಾಗೇಂದ್ರ ನಾಯಕ ತೊರ್ಕೆಯವರ ಸಹೋದರ. ತಮ್ಮ ಉದ್ಯೋಗಕ್ಕೆ ಸ್ವಯಂ ನಿವೃತ್ತಿ ಪಡೆದ ಗಜಾನನ ನಾಯಕರು ಕಳೆದ 10 ವರ್ಷಗಳಿಂದ ಬೆಂಗಳೂರಲ್ಲಿ ವಾಸ್ತುಶಿಲ್ಪ ತಜ್ಞೆಯಾಗಿರುವ ತನ್ನ ಮಗಳು ಶಿಲ್ಪಾ ನಾಯಕ ಹಾಗೂ ಹೈಕೋರ್ಟ್‍ನ ಹಿರಿಯ ನ್ಯಾಯವಾದಿಯಾಗಿರುವ ವಾಸರಕುದ್ರಿಗೆಯ ನಿತ್ಯಾನಂದ ನಾಯಕರ ಜೊತೆ ವಾಸಮಾಡಿಕೊಂಡಿದ್ದರು.

ಸರಳ ಸಜಕ್ಜನಿಕೆಯ ವ್ಯಕ್ತಿತವದವರಾಗಿದ್ದ ಗಜಾನನ ನಾಯಕ ಕಾಲೇಜು ದಿನಗಳಿಂದಲೂ ಸ್ನೇಹಪರ ವ್ಯಕ್ತಿಯಾಗಿದ್ದರು. ಪರೋಪಕಾರಿ ಗೂಣವುಳ್ಳವಾಗಿದ್ದರು. ಇವರು ಕೊರೊನಾ ಸೋಂಕಿಗೊಳಗಾಗಿ ಸಾವಿಗಿಡಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಮೃತರು ಮಡದಿ, ಮಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಗಲುವಿಕೆಗೆ ಆಪ್ತರನೇಕರು ಕಂಬನಿ ಮಿಡಿದಿದ್ದಾರೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*