ದಾಂಡೇಲಿಯಲ್ಲಿ ಆತಂಕದ ಶನಿವಾರ…. ದಾಖಲೆಯ ಪಾಸಿಟಿವ್ ಪ್ರಕರಣ…???

ದಾಂಡೇಲಿಯಲ್ಲಿ ಶನಿವಾರ 22 ಜನರಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿರುವ ಮಾಹಿತಿ ಲಭ್ಯವಾಗಿದ್ದು, ಇದರಿಂದಾಗಿ ದಾಂಡೇಲಿಯಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದಂತಾಗಿದೆ.

ಶನಿವಾರದ ವರದಿಯಂತೆ ದಾಂಡೇಲಿಯ ಸರಕಾರಿ ಆಸ್ಪತ್ರೆಯ ಕೆಲ ಸಿಬ್ಬಂದಿಗಳಿಗೂ ಪಾಸಿಟಿವ್ ಬಂದಿರುವ ಮಾಹಿತಿಯಿದೆ. ಜೊತೆಗೆ ವೆಸ್ಟಕೋಸ್ಟ ಪೇಪರ್ ಮಿಲ್ ನೊಳಗಿನ ಕೆಲ ಕಾರ್ಮಿಕರಲ್ಲಿಯೂ ಸಹ ಶನಿವಾರ ಸೋಂಕು ದೃಢವಾಗಿದೆ ಎನ್ನಲಾಗಿದೆ. ಉಳಿದ ಪ್ರಕರಣಗಳ ಮಾಹಿತಿ ಗೊತ್ತಾಗಬೇಕಿದೆ.

ದಾಂಡೇಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶತಕ ಬಾರಿಸಿದಂತಾಗಿದ್ದು, ದಿನೇ ದಿನೇ ಹೆಚ್ಚುತ್ತಿರುವ ಪಾಸಿಟಿವ್ ಪ್ರಕರಣಗಳಿಂದಾಗಿ ಜನ ಆತಂಕಕ್ಕೊಳಗಾಗುತ್ತಿದ್ದಾರೆ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

5 Comments

  1. ಕರೋನಾ+ ಎಲ್ಲಾ ಕಡೆ ಹೆಚ್ಚಿದೆ. ದಾಂಡೇಲಿಯಲ್ಲಿಯೂ ಅದು ನಮ್ಮ ಅಜಾಗರೂಕತೆಯ ಲಾಭ ಪಡೆದು ಹಬ್ಬುತ್ತಿದೆ.
    ಹೆದರಿದರೆ ಅದು ಹೋಗುವದಿಲ್ಲ.ಧೈರ್ಯದಿಂದ ಪೂರಕವಾದ ಔಷಧಗಳನ್ನು ಸೇವಿಸಿ,ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯವನ್ನು ನೀಡುತ್ತ ಗುಣಮುಖ ಹೊಂದಿರೆಂದು ಹಾರೈಸುತ್ತೇನೆ.
    *ಅಳಗುಂಡಿ ಅಂದಾನಯ್ಯ*

  2. ದಾಂಡೇಲಿಯನ್ನು ಒಂದು ವಾರಗಳ‌ ಕಾಲ ಬಂದ್ ಮಾಡುವ ಅವಸರದಲ್ಲಿ ದಾಂಡೇಲಿಯ ಜನನ ನಾಯಕರು ಮತ್ತಷ್ಟು ಅವಸರ ಮಾಡಿದರು.ಶನಿವಾರ ಅಂದ್ರೆ ದಿನಾಂಕ ೧೮/೦೭/೨೦೨೦ರ ದಾಂಡೇಲಿಯ ಮಾರುಕಟ್ಟೆದಲ್ಲಿ ದಾಂಡೇಲಿಯ ಶೇಕಡಾ ೪೫% ಜನರು ಹೋರಕಂಡ್ರು….ಇದು ಕೂಡ ಆತಂಕಕ್ಕೆ ಕಾರಣವಾಗಿದೆ.ಕೊರೊನಾ ಬರುವುದಕ್ಕೆ ಒಂದು ನಿಮಿಷಯೂ ಬೇಡ.ಜನರಿಗೆ ಹೆಚ್ಚು ಸಮಯ ಕೊಟ್ಟಿದ್ರೆ ಆತಂಕದ ವಾತಾವರಣ ಮರೆಮಾಚುತ್ತಿತು ಏನೂ?

  3. ಮುಂಚಿನ ಲಾಕ್ಡೌನ್ ಅಗತ್ಯವಿದೆ, ದಯವಿಟ್ಟು ಅದರ ಬಗ್ಗೆ ಯೋಚಿಸಿ, ಸರ್

Leave a Reply

Your email address will not be published.


*