ನಿಟ್ಟುಸಿರುಬಿಟ್ಟ ದಾಂಡೇಲಿ: 173 ಜನರಲ್ಲಿ 118 ನೆಗೆಟಿವ್: 55 ಬಾಕಿ

ದಾಂಡೇಲಿ: ನಗರದ  ಪ್ರಥಮ ಹಾಗೂ ದ್ವಿತೀಯ ಕೊರೊನಾ ಸೋಂಕಿತ ಚಾಲಕನ ಸಂಪರ್ಕದಲ್ಲಿದ್ದವರು ಹಾಗೂ ಹೊರ ರಾಜ್ಯದಿಂದ ಬಂದವರೂ ಸೇರಿ ಗಂಟಲು ದ್ರವ ಪರೀಕ್ಷೆಗೆ ಹೋಗಿದ್ದ 173 ಜನರ ವರದಿಯಲ್ಲಿ 118 ಜನರ ವರದಿ ನೆಗೆಟಿವ್ ಎಂದು ಬಂದಿದ್ದು ಉಳಿದ 55 ಜನರ ವರದಿ ನಾಳೆ ಅಥವಾ ನಾಡಿದ್ದು ಬರುವ ಸಾಧ್ಯತೆಯಿದೆ.  ಈ ಪಲಿತಾಂಶ ದಾಂಡೇಲಿಯ ಜನರು ಸಮಾದಾನದ ನಿಟ್ಟುಸಿರು ಬಿಡುವಂತಾಗಿದೆ. 

   ದಾಂಡೇಲಿಯಲ್ಲಿ ಪ್ರಥಮವಾಗಿ ಹಳೆದಾಂಡೇಲಿಯ ಲಾರಿ ಚಾಲಕನಿಗೆ ಕೊರೊನಾ ಸೋಂಕು ದೃಡಪಟ್ಟಿತ್ತು. ಆತ  ಹೊರರಾಜ್ಯಗಳಿಗೆ ಹೋಗಿ ಬಂದ ಟ್ರಾವೆಲ್ ಹಿಸ್ಟರಿಯಿತ್ತು. ಜೊತೆಗೆ ಆತ  ದಾಂಡೇಲಿಗೆ ಮರಳಿದ ಮೇಲೆ ತನ್ನ ಗೆಳೆಯರು ಹಾಗೂ ಸಂಬಂದಿಗಳ ಮನೆಗೂ ಹೋಗಿ ಬಂದಿದ್ದ ಎಂಬ ಮಾಹಿತಿ ಕಲೆ ಹಾಕಿ ಆತನ ಸಂಪರ್ಕಕ್ಕೋಳಗಾದ  ನೂರಕ್ಕೂ ಹೆಚ್ಚು ಜನರನ್ನು ಸಾಂಸ್ಥಿಕ ಕ್ವಾರೆಂಟೈನ್ ಹಾಗೂ ಹೋಮ್ ಕ್ವಾರೆಂಟೈನ್‍ಗೆ ಒಳಪಡಿಸಿ ಅವರೆಲ್ಲರ ಗಂಟಲು ದ್ರವ   ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಹಾಗೂ ಇದೇ ಸಂದರ್ಭದಲ್ಲಿ ಹೊರ ರಾಜ್ಯದಿಂದ ಬಂದವರ ಗಂಟಲು ದ್ರವ ಪರೀಕ್ಷೆಗೂ ಕಳುಹಿಸಲಾಗಿತ್ತು. ಮೇ 17 ರಿಂದ 23ರವರೆಗೆ  ಎಲ್ಲ ಸೇರಿ 173 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. 

  ಈ ಪರೀಕ್ಷೆಯ ವರದಿ ಬರಲು ವಿಳಂಬವಾಗಿತ್ತು. ಬೆಂಗಳೂರಿಗೆ ಪರೀಕ್ಷೆಗೆ ಕಳುಹಿಸಿದ್ದರಿಂದ ವರದಿ ಬರಲು ವಿಳಂಬವಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದರಾದರೂ, ಜನರಲ್ಲಿ ಇದು ಕುತುಹಲ ಮತ್ತು ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು. ಒಬ್ಬೊಬ್ಬರು ಒಂದೊಂದು ರೀತಿ ಚರ್ಚೆ ಮಾಡುತ್ತಿದ್ದರು.

 ಕೊನೆಗೂ ಪರೀಕ್ಷೆಗೊಳಗಾದವರ ವರದಿ ಬಂದಿದೆ. 118 ಜನರಲ್ಲಿ ನೆಗೆಟಿವ್ ವರದಿ ಬಂದಿದ್ದು, ಸೇರಿದಂತೆ 55 ಜನರ ವರದಿ ಬರಬೇಕಿದೆ. ಇನ್ನು ಎರಡನೇ ಸೋಂಕಿತನ ಸಂಪರ್ಕಿತರ ಪರೀಕ್ಷಾ ವರದಿ ಬರಬೇಕಿದೆ.  ಇವುಗಳ ವರದಿ ಇನ್ನೆರಡು ದಿನದಲ್ಲಿ ಬರಲಿದೆ ಎಂದು ತಹಶಿಲ್ದಾರ ಶೈಲೇಶ ಪರಮಾನಂದ, ವೈದ್ಯಾಧಿಕಾರಿ ರಾಜೇಶ ಪ್ರಸಾದ ತಿಳಿಸಿದ್ದಾರೆ. 

ಸೋಂಕಿತನ ಸಹೋದರ ಮತ್ತು ಅಜ್ಜಿಗೂ ನೆಗೆಟಿವ್

  ದಾಂಡೇಲಿಯಲ್ಲಿ  ಎರಡು ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇವರ ಸಂಪರ್ಕಿತರಿಂದ ಕೊರೊನಾ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗಬಹುದೇ ಎಂಬ ಆತಂಕ ಜನರಲ್ಲಿದ್ದು. ಸದ್ಯ ಈ ಆತಂಕದಿಂದ ದಾಂಡೇಲಿಗರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಬರಬೇಕಾದ 55 ಜನರ ವರದಿಯ ಬಗ್ಗೆ ಜನರು ಕುತುಹಲದಿಂದ ಕಾಯುತ್ತಿದ್ದಾರೆ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

2 Comments

  1. ‘ಒಡನಾಡಿ’ಯ ಪ್ರಾಯೋಗಿಕ ಸಂಚಿಕೆಯೇ ಆಕರ್ಷಕವಾಗಿ ಬಂದಿದೆ. ಪ್ರಚಲಿತ ವಿದ್ಯಮಾನದ ಘಟನೆಗಳನ್ನೊಳಗೊಂಡು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಆಯಾಮವನ್ನು ಹೊಂದಿರುವ ‘ಒಡನಾಡಿ’ಗೆ ಜನಮಾನಸದಲ್ಲಿ ಮನ್ನಣೆ ಸಿಗಲಿ. ಹಾರ್ದಿಕ ಶುಭಾಶಯಗಳು ವಾಸರೆ ಅವರಿಗೆ.👌🌹🙏

Leave a Reply

Your email address will not be published.


*