ರೇಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ವಂಚನೆ :  ದೂರು ದಾಖಲು

ವಿಜಯ ನಾಯರದ್ದು ಮೋಸವೇ ದಂದೆ: ತಲೆ ಮರೆಸಿಕೊಂಡಿರುವ ಆರೋಪಿಗಳು

ಯುವಕನೋರ್ವನಿಗೆ ರೇಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಹಣ ಪಡೆದು ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ವಿಚಾರ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  ದಾಂಡೇಲಿಯ ವಿಜಯ ನಾಯರ  ಹಾಗೂ  ಯೇಸು ಪ್ರಸಾದ  ಇಬ್ಬರೂ ಸೇರಿ ವಂಚನೆ ಮಾಡಿದವರು. ಇದೀಗ ಇವರಿಬ್ಬರೂ ತಲೆ ಮರೆಸಿಕೊಂಡಿದ್ದಾರೆ.

ದಾಂಡೇಲಿಯ ಗಾಂಧಿನಗರದ ಪಾಂಡುರಂಗ ದೇಮು ಕುಡ್ನೇಕರ ಇವರ ಮಗ ವಿನಾಯಕ ಕುಡ್ನೇಕರನಿಗೆ ರೇಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ  ವಿಜಯ ನಾಯರ  ಹಾಗೂ  ಯೇಸು ಪ್ರಸಾದ  ನಂಬಿಸಿದ್ದಾರೆ.  ನಂತರ 2021 ರಲ್ಲಿ  ಮೂರು ಬಾರಿ ಒಟ್ಟೂ 2.30 ಲಕ್ಷ ರೂ ಹಣಪಡೆದಿದ್ದಾರೆ.

ನಂತರ ಮತ್ತೆ 2023 ರಲ್ಲಿ ನಿಮ್ಮ ಮಗನ ಕೆಲಸ ಅಂತಿಮ ಹಂತಕ್ಕೆ ಬಂದಿದ್ದು ಅಧಿಕಾರಿಗಳು ಇನ್ನೊಂದಿಷ್ಟು ಹಣ ಕೇಳುತ್ತಿದ್ದಾರೆ ಎಂದು ಹೇಳಿ  ಮತ್ತೆ ಮೂರು ಬಾರಿ ಸೇರಿ ಒಟ್ಟೂ 1.55 ಲಕ್ಷ ರೂ ಪಡೆದಿದ್ದಾರೆ. ಒಟ್ಟೂ 3.85 ಸಾವಿರ ಹಣ ಪಡೆದುಕೊಂಡ ಆರೋಪಿಗಳು ಕೇಳಿದಾಗಲೆಲ್ಲ ಸಬೂಬು ಹೇಳುತ್ತ ತಪ್ಪಿಸಿಕೊಂಡಿದ್ದಾರೆ. ನಂತರ ಪಾಂಡುರಂಗ ಅವರು ನಮಗೆ ನಮ್ಮ ಹಣ ವಾಪಸ್ ಕೊಟ್ಟು ಬಿಡಿ ಎಂದು ಕೇಳಿದಾಗ  ಆಪಾದಿತರು ನಾವು ಹಣ ಕೊಡುವುದಿಲ್ಲ ಎಂದು ಹೆದರಿಸಿ, ಬೆದರಿಕೆ ಒಡ್ಡಿದ್ದಾರೆ ಹಾಗೂ  ನೌಕರಿ ಕೊಡಿಸುವುದಾಗಿ ನಮಗೆ ಮೋಸ ಮಾಡಿರುತ್ತಾರೆ ಎಂದು   ಪಾಂಡುರಂಗ ಕುಡ್ನೇಕರ ದೂರು ದಾಖಲಿಸಿದ್ದಾರೆ.

ಆರೋಪಿಗಳಾದ ವಿಜಯ ನಾಯರ  ಹಾಗೂ  ಯೇಸು ಪ್ರಸಾದ  ತಲೆ ಮರೆಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ. ಕಿರಣ ಪಾಟೀಲ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಹಿಂದೊಮ್ಮೆ 16 ಲಕ್ಷ ರು. ವಂಚಿಸಿದ್ದ ವಿಜಯ ನಾಯರ್

ವಿನಾಯಕ ಕುಡ್ನೇಕರ ಪ್ರಕರಣದಲ್ಲಿ ಆರೋಪಿಯಾಗಿರುವ ವಿಜಯ ನಾಯರ ಎಂಬ ವ್ಯಕ್ತಿಯ ಮೇಲೆ 2020 ರಲ್ಲಿ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದ್ದೂ ಆ ಪ್ರಕರಣದಲ್ಲಿಯೂ ಯುವಕರಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಒಬ್ಬರಿಂದ 10 ಲಕ್ಷ ರು, ಮತ್ತೊಬ್ಬರಿಂದ 4 ಲಕ್ಷ ರು, ಮಗದೊಬ್ಬರಿಂದ 2.5 ಲಕ್ಷ ರೂ ಹಣ ಪಡೆದ ಮೋಸ ಮಾಡಿರುವ ಪ್ರಕರಣ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿಯೇ ದಾಖಲಾಗಿದೆ. ಈ ಪ್ರಕರಣ ನ್ಯಾಯಾಲಯದಲ್ಲಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಬಲವಂತ ಬೊಮ್ನಳ್ಳಿಯವರು ದೂರು ದಾಖಲಿಸಿದ ದ್ದರು. ಅವರ ಮಕ್ಕಳು ಹಾಗೂ ಅವರ ಸ್ನೇಹಿತರ ಮಕ್ಕಳಿಗೆ ಬೆಂಗಳೂರಲ್ಲಿ ಸರಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ ವಿಜಯ ನಾಯರ 16.5 ಲಕ್ಷ ರು. ಪಡೆದಿದ್ದ. ನಂತರ ಇವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಪ್ರಶಾಂತ ಜೋಶಿ ಎಂಬವರನ್ನು ಪರಿಚಯ ಮಾಡಿಸಿ ಅವರು  ಉನ್ನತ ಮಟ್ಟದ ಸರಕಾರಿ  ಅಧಿಕಾರಿಗಳಿದ್ದಾರೆಂದು ಪರಿಚಯ ಮಾಡಿಸಿದ್ದ. ಆದರೆ ಇವರೆಗೂ ಸರಕಾರಿ ಕೆಲಸವೂ ಇಲ್ಲದೆ, ಕೊಟ್ಟ ಹಣವೂ ಇಲ್ಲದೇ ಮೋಸ ಮಾಡಲಾಗಿದೆ. ವಿಜಯ ನಾಯರ ಮೇಲೆ ಪಕ್ಕದ ರಾಜ್ಯವೊಂದರಲ್ಲಿಯೂ ಇದೇ ರೀತಿ ಉದ್ಯೋಗ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡಿರುವ ಪ್ರಕರಣವೊಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

About ಬಿ.ಎನ್‌. ವಾಸರೆ 620 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*