ಕಾಟಿ ನೇತೃತ್ವದ ಕಾಳಿ ಉತ್ಸವ: ಉತ್ಸವಗಳಿಂದ ಸಂಸ್ಕೃತಿಯ ಉಳಿವು – ಮೋಹನ ಹಲವಾಯಿ

ದಾಂಡೇಲಿ: ಉತ್ಸವಗಳು ಎಂದರೆ ಕೇವಲ ಮನರಂಜನೆಯಷ್ಟೇ ಅಲ್ಲ. ಅದು ನಮ್ಮ ದೇಶದ ಹಾಗೂ ನಮ್ಮತನದ ಸಂಸ್ಕೃತಿಯ ಉಳಿವು ಕೂಡ.ಜನರು ಸಹ ತಮ್ಮ ಬದುಕಿನ ಜೊತೆಗೆ ಇಂತಹ ಉತ್ಸವಗಳಿಗೆ ಸಮಯ ಮೀಸಲಿಡಬೇಕು ಎಂದು ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ನುಡಿದರು.

ಅವರು ದಾಂಡೇಲಿಯ ಕಾರ್ಮಿಕ ಭವನದಲ್ಲಿ ಇಲಿಯಸ್ ಕಾಟಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ 10ನೇ ವರ್ಷದ ಕಾಳಿ ಉತ್ಸವದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ದಾಂಡೇಲಿಯಲ್ಲಿ ಹಲವು ಸಂಸ್ಕೃತಿಗಳಿವೆ. ಹಲವು ಭಾಷೆಗಳ ಭಾಂದವ್ಯವಿದೆ. ಸಾಂಸ್ಕೃತಿಕ ನಗರಿಯಾಗಿ ಬೆಳೆಯುತ್ತಿರುವ ದಾಂಡೇಲಿಯಲ್ಲಿ ಹಲವಾರು ತರಹದ ಕಲಾವಿದರಿದ್ದು, ಕಲಾವಿರಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕಿದೆ ಎಂದರು .

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ ಒಬ್ಬ ವ್ಯಕ್ತಿ ತನ್ನ ಸಾಂಸ್ಕೃತಿಕ ತಂಡವನ್ನು ಕೂಡಿಕೊಂಡು 10 ವರ್ಷಗಳ ಕಾಲ ಕಾಳಿ ಉತ್ಸವವನ್ನು ಆಯೋಜಿಸಿಕೊಂಡು ಬಂದಿರುವುದು ನಿಜಕ್ಕೂ ಕೂಡ ಶ್ಲಾಗನಾರ್ಹ ಕಾರ್ಯ. ಅಂತಹ ಕಾರ್ಯಕ್ಕೆ ಸಾರಥ್ಯ ವಹಿಸಿರುವ ಇಲಿಯಾಸ ಕಾಟಿಯವರನ್ನ ಅಭಿನಂದಿಸ ಬೇಕು. ಇಂಥ ಉತ್ಸವಗಳ ಮೂಲಕ ಈ ನೆಲದ ಬಾಂಧವ್ಯವನ್ನು, ಸಾಮರಸ್ಯವನ್ನು ಇನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕು ಎಂದು ಹೇಳಿ 10 ವರ್ಷಗಳ ಕಾಲ ಕಾಳಿ ಉತ್ಸವವನ್ನು ಯಶಸ್ವಿಯಾಗಿ ಮಡೆಸಿಕೊಂಡು ಬಂದ ಇಲಿಯಾಸ ಕಾಟಿಯವರನ್ನು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನಿಸಿ ಗೌರವಿಸಿದರು.

ಮುಖ್ಯ ಅತಿಥಿಗಳಾಗಿದ್ದ ಸಮಾಜ ಸೇವಕ ಕೆ. ಆರ್. ರಮೇಶ್ ಮಾತನಾಡಿ ಕಾಳಿ ಉತ್ಸವದ ಮೂಲಕ ಈ ಭಾಗದ ಕಲಾಸಕ್ತ ಮಕ್ಕಳಿಗೆ ವೇದಿಕೆಯನ್ನು ಒದಗಿಸಿಕೊಡುತ್ತಿರುವುದು ಬಹು ಮುಖ್ಯವಾದ ಕೆಲಸವಾಗಿದೆ. ಕಲೆಗೆ ಸೋಲದ ಮನಸ್ಸಿಲ್ಲ. ಕಲೆಯನ್ನು ಉಳಿಸುವ ಕೆಲಸ ಇಂತಹ ಉತ್ಸವಗಳಿಂದ ಮಾತ್ರ ಸಾಧ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಳಿ ಉತ್ಸವದ ಸಂಸ್ಥಾಪಕ ಅಧ್ಯಕ್ಷ ಇಲಿಯಾಸ ಕಾಟಿ ಉತ್ಸವಕ್ಕೆ ಸಹಕರಿಸಿದವರನ್ನು ಸ್ಮರಿಸಿದರು.

ದಾಂಡೇಲಿ ಫಾಸ್ಟರ್ ಫೆಲೋಶಿಪ್ ಟ್ರಸ್ಟ್ ನ ನಿರ್ದೇಶಕ ಡಾ ಕೆ. ಕ್ರಿಸ್ಟೋಪರ, ಭಾರತೀಯ ಸಂಗೀತ ವಿದ್ಯಾಲಯದ ಪಂಡಿತ್ ಎಸ್. ಚಂದ್ರಶೇಖರ್,
ಜನತಾ ವಿದ್ಯಾಲಯದ ಪ್ರಾಚಾರ್ಯ ಅಮೃತ ರಾಮರಥ, ನಗರಸಭಾ ಸದಸ್ಯ ಅನಿಲ್ ನಾಯ್ಕರ, ಪ್ರಮುಖರಾದ ಎಸ್. ಡಿ. ಡಿಮೆಲ್ಲೋ, ದಾದಾಪೀರ್ ನದಿಮುಲ್ಲಾ, ಕಲ್ಪನಾ ನಾಯ್ಕ, ಮೇಘರಾಜ ಮೇತ್ರಿ, ಮಂಜುನಾಥ ಮಾದರ, ರತ್ನಂ ಬಂಡಿ , ಸುನಿತಾ ಬಾಂದೇಕರ್ ಮುಂತಾದವರು ಇದ್ದರು.

ರವಿ ಮಾಳಕರಿ ನಿರೂಪಿಸಿದರು. ಎಸ್. ಜಗದೀಶ್ ಮುಂತಾದವರು ಸಹಕರಿಸಿದರು. ಮೂರು ದಿನಗಳ ಕಾಲ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

About ಬಿ.ಎನ್‌. ವಾಸರೆ 620 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*