
ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಕೆ.ಎಲ್. ಇ. ವಿಶ್ವ ವಿದ್ಯಾಲಯ, ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರ, ಜೆ.ಎನ್. ಮೆಡಿಕಲ್ ಕಾಲೇಜು, ಸರಕಾರಿ ಆಸ್ಪತ್ರೆ ದಾಂಡೇಲಿ ಹಾಗೂ ಕೆನರಾ ಬ್ಯಾಂಕ್ ಆರ್. ಸೆಟಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬ್ರಹತ್ ಉಚಿತ
ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಲ್.ಇ. ಆಡಳಿತಾಧಿಕಾರಿ ಅಲ್ಲಮ ಪ್ರಭು ಈ ಶಿಬಿರ ಈ ಭಾಗದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಪ್ರಯೋಜನಾಗಲಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಅಷ್ಪಾಕ ಶೇಖ್ , ಉಪಾಧ್ಯಕ್ಷೆ ಶಿಲ್ಪಾ ಕೋಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಕಾಗದ ಕಂಪನಿಯ ಸಾರ್ವಜನಿಕ ಸಂಪರ್ಕ ವಿಭಾಗದ ಅಧಿಕಾರಿಗಳಾದ ರಾಘವೇಂದ್ರ ಜೆ.ಆರ್. , ರಾಜೇಶ ತಿವಾರಿ, ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ ಚೌಹಾಣ, ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಅನಿಲ ನಾಯ್ಕ, ರೋಟರಿ ಕ್ಲಬ್ ಅಧ್ಯಕ್ಷ ರಾಹುಲ ಬಾವಾಜಿ, ದೇಶಪಾಂಡೆ ಆರ್ಸೆಟಿಯ ವಿನಾಯಕ ಚೌಹಾಣ, ನಾರಾಯಣ ವಡ್ಡರ ಮುಂತಾದವರಿದ್ದರು. ದೇಶಪಾಂಡೆ ಆರ್ಸೆಟಿಯ ಮಹಾಬಲೇಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ ನರ ರೋಗ, ಎಲುಬು ಕೀಲು,
ನೇತ್ರ, ಸ್ತ್ರೀರೋಗ, ಮೂಗು ಗಂಟಲು ಕಿವಿ, ಶ್ವಾಸಕೋಶ, ಮೂತ್ರಕೋಶ, ವೈದ್ಯಕೀಯ ಚಿಕ್ಕ ಮಕ್ಕಳ ತಪಾಸಣೆ, ದಂತ, ಚರ್ಮರೋಗ, ಹೃದಯ ರೋಗ ತಪಾಸಣೆ ಹಾಗೂ ಬಿಪಿ, ಇಸಿಜಿ, ಶುಗರ್,
ಮತ್ತು ಹಿಮೋಗ್ಲೋಬಿನ್ ತಪಾಸಣೆಯನ್ನೂ ಉಚಿತವಾಗಿ ನೀಡಲಾಯಿತು. ಶಿಬಿರದಲ್ಲಿ ಒಟ್ಟೂ 933 ಜನರು ಚಿಕಿತ್ಸೆ ಪಡೆದಿದ್ದಾರವ ಎಂದು ಸಂಘಟಕರು ತಿಳಿಸಿದ್ದಾರೆ.

Be the first to comment